ನಗರದಲ್ಲಿ ಗುರುವಾರ ಸಂಜೆ ಆಯೋಜಿಸಿದ್ದ 8ನೇ ವಲಯ ಮಟ್ಟದ ಪೊಲೀಸ್ ಕರ್ತವ್ಯ ಕೂಟದ ಸಮಾರೋಪದಲ್ಲಿ ವಿವಿಧ ಸ್ಪರ್ಧಾ ವಿಜೇತರಿಗೆ ವಿಜೇತರಿಗೆ ನಗರ ಪೊಲೀಸ್ ಆಯುಕ್ತೆ ಸೀಮಾ ಲಾಟ್ಕರ್ ಬಹುಮಾನ ವಿತರಿಸಿದರು. ಎನ್.ವಿಷ್ಣುವರ್ಧನ್, ಮಲ್ಲಿಕಾರ್ಜುನ ಬಾಲದಂಡಿ, ಮಲ್ಲಿಕ್ ಇನ್ನಿತರರು ಇದ್ದರು 
ಮೈಸೂರು

ಪೊಲೀಸ್ ಕರ್ತವ್ಯ ಕೂಟಕ್ಕೆ ತೆರೆ: ವಿವಿಧ ಸ್ಪರ್ಧೆ ವಿಜೇತರಿಗೆ ಬಹುಮಾನ

ಪ್ರಮುಖ ಮುಖ್ಯಾಂಶಗಳು

  • ಉತ್ತಮ ಘಟಕವಾಗಿ ಹೊರಹೊಮ್ಮಿದ ಮಂಡ್ಯ
  • ಕರ್ನಾಟಕ ಪೊಲೀಸ್ ಅಕಾಡೆಮಿಯಲ್ಲಿ ಸಮಾರೋಪ ಕಾರ್ಯಕ್ರಮ
  • ಉತ್ತಮ ಶ್ವಾನ ಪ್ರಶಸ್ತಿಗೆ ಮೈಸೂರು ನಗರದ ಯೋಧ ಶ್ವಾನ ಭಾಜನ
ಮೈಸೂರು: ಪೊಲೀಸ್ ಇಲಾಖೆಯ 8ನೇ ವಲಯ ಮಟ್ಟದ ಪೊಲೀಸ್ ಕರ್ತವ್ಯ ಕೂಟಕ್ಕೆ  ತೆರೆಬಿದ್ದಿತ್ತು.
ಪೊಲೀಸ್ ಸಿಬ್ಬಂದಿಯ ವೃತ್ತಿಪರ ಕೌಶಲ, ತನಿಖಾ ಸಾಮರ್ಥ್ಯ, ಕರ್ತವ್ಯ ನಿಷ್ಠೆಯನ್ನು ಹೆಚ್ಚಿಸಲು ವಿವಿಧ ಸ್ಪರ್ಧೆಗಳನ್ನು ನಡೆಸಲಾಯಿತು. 
ನಗರದ ನಜರ್‌ಬಾದ್‌ನಲ್ಲಿರುವ ಕರ್ನಾಟಕ ಪೊಲೀಸ್ ಅಕಾಡೆಮಿಯಲ್ಲಿ ಸಮಾರೋಪ ಕಾರ್ಯಕ್ರಮದಲ್ಲಿ ವಿವಿಧ ಸ್ಪರ್ಧೆಗಳ ವಿಜೇತರಿಗೆ ಬಹುಮಾನ ವಿತರಿಸಿ ಉತ್ತೇಜಿಸಲಾಯಿತು.
ಮೈಸೂರು ನಗರ, ಮೈಸೂರು ಜಿಲ್ಲೆ, ಕೊಡಗು ಜಿಲ್ಲೆ ತಲಾ 13, ಮಂಡ್ಯ ಜಿಲ್ಲೆ 8, ಹಾಸನ ಜಿಲ್ಲೆ 6, ಚಾಮರಾಜನಗರ ಜಿಲ್ಲೆ 9 ಪದಕಗಳನ್ನು ಪಡೆದುಕೊಂಡಿತು. ಈ ಪೈಕಿ ಮಂಡ್ಯ ಜಿಲ್ಲೆ 6 ಚಿನ್ನ, ತಲಾ ಒಂದು ಬೆಳ್ಳಿ, ಕಂಚಿನ ಪದಕ ಗಳಿಸುವ ಮೂಲಕ ಉತ್ತಮ ಘಟಕವಾಗಿ ಹೊರಹೊಮ್ಮಿ ಪ್ರಶಸ್ತಿ ಗಿಟ್ಟಿಸಿಕೊಂಡಿತು. ಉತ್ತಮ ಶ್ವಾನ ಪ್ರಶಸ್ತಿಯನ್ನು ಮೈಸೂರು ನಗರದ ಯೋಧ ಶ್ವಾನವು ಮುಡಿಗೇರಿಸಿಕೊಂಡಿತು. 
ವಿಜೇತರಿಗೆ ನಗರ ಪೊಲೀಸ್ ಆಯುಕ್ತೆ ಸೀಮಾ ಲಾಟ್ಕರ್, ಅಕಾಡೆಮಿಯ ನಿರ್ದೇಶಕ ಎನ್.ವಿಷ್ಣುವರ್ಧನ್, ಡಿಸಿಪಿ ಸುಂದರ್‌ರಾಜ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮಲ್ಲಿಕಾರ್ಜುನ ಬಾಲದಂಡಿ, ಎಎಸ್‌ಪಿ ಮಲ್ಲಿಕ್ ಇನ್ನಿತರರು ಇದ್ದರು