ದೊಡ್ಡ ಹರವೆ ವನ್ಯಜೀವಿ ವಲಯದ ಆನೆ ಶಿಬಿರ ಆವರಣದಲ್ಲಿ ಗಿಡ ನೆಟ್ಟು ನೀರು ಹಾಕಿದ ಶ್ರೀಕಾಂತ್, ರವಿ, ಸುಬ್ರಮಣ್ಯ ಪಿ ಎಲ್ ರಾಮಣ್ಣ,ಟೆಂಜಿನ್, ಇದ್ದರು
ಬೈಲುಕುಪ್ಪೆ:ಪ್ರಾಣಿ ಪಕ್ಷಿಗಳ ಉಳಿವಿಗೆ ಪರಿಸರ ಸಂರಕ್ಷಣೆ ಅತ್ಯವಶ್ಯಕವಾಗಿದೆ ಎಂದು ಹುಣಸೂರಿನ ವನ್ಯಜೀವಿ ಉಪವಿಭಾಗದ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಶ್ರೀಕಾಂತ್ ತಿಳಿಸಿದರು
ಪಿರಿಯಾಪಟ್ಟಣ ತಾಲೂಕಿನ ದೊಡ್ಡ ಹರವೆ ಕಾವೇರಿ ಸಾಕಾನೆ ಶಿವರದಲ್ಲಿ ಏಕ್ ಪೇಡ್ ಮಾ ಕೆ ನಾಮ್ ಸೇ ಎಂಬ ಅಭಿಯಾನದಡಿ ಸಸಿ ನೆಡುವ ಕಾರ್ಯಕ್ರಮ ಆಯೋಜಿಸಲಾಗಿದ್ದ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು
ನಾವು ಪ್ರಾಣಿ ಪಕ್ಷಿಗಳನ್ನು ಉಳಿಸಿದರೆ ಅವುಗಳು ಪರೋಕ್ಷವಾಗಿ ಬೀಜ ಪ್ರಸಾರ ಮಾಡುವ ಮೂಲಕ ಗಿಡಮರಗಳು ಬೆಳೆದು ಅರಣ್ಯವನ್ನು ಸಂರಕ್ಷಿಸುತ್ತವೆ ಎಂದರು, ಜನರು ಸ್ವಾರ್ಥಕ್ಕಾಗಿ ಮರ ಗಿಡಗಳನ್ನು ನಾಶ ಮಾಡುವುದರಿಂದ ಮಳೆ ಬೆಳೆ ಪ್ರಮಾಣ ಕಡಿಮೆಯಾಗಿದೆ, ಭೂಮಿಯ ತಾಪಮಾನ ಹೆಚ್ಚಿದ್ದು ಇದರ ಗಂಭೀರ ಪರಿಣಾಮ ಎದುರಿಸುತ್ತೇವೆ ಎಂದು ತಿಳಿಸಿದರು
ಹುಣಸೂರು ಉಪವಿಭಾಗದ ಡಿ ವೈ ಎಸ್ ಪಿ ರವಿ, ಮಾತನಾಡಿ ಪರಿಸರ ದಿನಾಚರಣೆಯಂದು ಗಿಡ ನೆಡುವುದು ಮುಖ್ಯವಲ್ಲ ಆ ಗಿಡಕ್ಕೆ ನೀರು ಹಾಕಿ ಸಂರಕ್ಷಿಸುವುದು ಬಹಳ ಮುಖ್ಯ ಎಂದು ತಿಳಿಸಿದರು ಶಾಲಾ ಮಕ್ಕಳು ಹಾಗೂ ಅರಣ್ಯ ಸಿಬ್ಬಂದಿಯವರ ಸಹಕಾರದಿಂದ ಆಲಾ, ಗೋಣಿ, ಸೇರಿದಂತೆ ವಿವಿಧ ಜಾತಿಯ 150ಕ್ಕೂ ಹೆಚ್ಚು ಗಿಡಗಳನ್ನು ನೆಟ್ಟು ನೀರು ಎರೆಯಲಾಯಿತು ಈ ಸಂದರ್ಭದಲ್ಲಿ ಹುಣಸೂರಿನ ವನ್ಯಜೀವಿ ಉಪ ವಿಭಾಗದ ಸಹಾಯಕ ಅರಣ್ಯ ಅಧಿಕಾರಿ ಕೆ ಇ ಸುಬ್ರಹ್ಮಣ್ಯ, ಬೈಲುಕುಪ್ಪೆ ಟಿಬೇಟಿಯನ್ ಟಿ ಡಿ ಎಲ್ ನ್ಯೂ ಸೆಟಲ್ಮೆಂಟ್ ಅಧ್ಯಕ್ಷ ಟೆಂಜಿನ್, ಹುಣಸೂರು ವನ್ಯಜೀವಿ ವಲಯ ಅರಣ್ಯ ಅಧಿಕಾರಿ ಪಿ ಎಲ್ ರಾಮಣ್ಣ ಶಾಲಾ ಮಕ್ಕಳು ಹಾಗೂ ಅರಣ್ಯ ಸಿಬ್ಬಂದಿಯವರು ಇದ್ದರು ,