ತಿ.ನರಸೀಪುರ ಪಟ್ಟಣದ ಬಿಜೆಪಿ ಕಚೇರಿಯಲ್ಲಿ ಶುಕ್ರವಾರ ಸಂಗೀತ ರತ್ನ, ವಿದ್ವಾನ್ ಪಿಟೀಲು ಟಿ.ಚೌಡಯ್ಯ ಅವರ ದಿನಾಚಾರಣೆಯನ್ನು ಆಚರಿಸಲಾಯಿತು. ಕರೋಹಟ್ಟಿ ಮಹದೇವಯ್ಯ, ಕೆ.ನಂಜುಂಡಸ್ವಾಮಿ, ರಘು, ರಾಜಶೇಖರ ಇತರರಿದ್ದರು. 
ಮೈಸೂರು

ಪಿಟೀಲು ಚೌಡಯ್ಯ ಜನ್ಮ ದಿನಾಚರಣೆ

ಬಾಲಮುರಳಿಕೃಷ್ಣ
ತಿ.ನರಸೀಪುರ: ಪಟ್ಟಣದ ಬಿಜೆಪಿ ಕಚೇರಿಯಲ್ಲಿ ಶುಕ್ರವಾರ ಸಂಗೀತ ರತ್ನ, ವಿದ್ವಾನ್ ಪಿಟೀಲು ಟಿ.ಚೌಡಯ್ಯ ಅವರ 131ನೇ ಜನ್ಮ ದಿನ ಆಚರಿಸಲಾಯಿತು.
ಮುಖಂಡ ಕರೋಹಟ್ಟಿ ಮಹದೇವಯ್ಯ ಮಾತನಾಡಿ, ತಿ.ನರಸೀಪುರದವರೇ ಆದ ಪಿಟೀಲು ಟಿ. ಚೌಡಯ್ಯ ಅವರು ಪಿಟೀಲುವಾದನ ಮೂಲಕ ಸಂಗೀತ ಕ್ಷೇತ್ರದಲ್ಲಿ ಸಾಧನೆ ಮಾಡಿದ್ದಾರೆ. ಮೈಸೂರು ಸಂಸ್ಥಾನದಲ್ಲಿ ಸಂಗೀತಗಾರರಾಗಿ ಸೇವೆ ಸಲ್ಲಿಸಿ, ಧಾರ್ಮಿಕ ಹಿನ್ನೆಲೆಯಿದ್ದ ನರಸೀಪುರಕ್ಕೆ ಸಂಗೀತದ ಹಿರಿಮೆಯನ್ನು ತಂದು ಕೊಟ್ಟಿರುವುದು ನಮ್ಮೆಲ್ಲರ ಹೆಮ್ಮೆಯಾಗಿದೆ ಎಂದು ತಿಳಿಸಿದರು.
ಬಿಜೆಪಿ ಟೌನ್ ಅಧ್ಯಕ್ಷ ಕೆ.ನಂಜುಂಡಸ್ವಾಮಿ, ಮಂಡಲದ ಯುವ ಮೋರ್ಚಾ ಅಧ್ಯಕ್ಷ ರಘು, ತಲಕಾಡು ಶಕ್ತಿ ಕೇಂದ್ರದ ಅಧ್ಯಕ್ಷ ಮಲ್ಲಿಕಾರ್ಜುನ್, ಮುಖಂಡರಾದ ರಾಜಶೇಖರ, ರಾಜೇಶ್ ಹಾಗೂ ದರ್ಶನ್ ಇದ್ದರು.