ಜೆಎಸ್‌ಎಸ್ ಅಕಾಡೆಮಿ ಆಫ್ ಹೈಯರ್ ಎಜುಕೇಷನ್ ಆ್ಯಂಡ್ ರೀಸರ್ಚ್ (ಜೆಎಸ್‌ಎಸ್ ಎಎಚ್‌ಇಆರ್), ಮರ್ಕ್ಸ್ ಹೆಲ್ತ್‌ಕೇರ್ ಆರ್‌ಡಿ ಸಂಸ್ಥೆಗಳು ಫಾರ್ಮಾ ವಿದ್ಯಾರ್ಥಿಗಳಿಗೆ ಉದ್ಯಮ ಕೌಶಲ ತರಬೇತಿ ಒದಗಿಸಲು ಪರಸ್ಪರ ಒಪ್ಪಂದಕ್ಕೆ ಡಾ. ಬಿ. ಸುರೇಶ್ ಸಮ್ಮುಖದಲ್ಲಿ ಪರಸ್ಪರ ಒಡಂಬಡಿಕೆಗೆ ಸಹಿ ಹಾಕಲಾಯಿತು. 
ಮೈಸೂರು

ಫಾರ್ಮಾ ವಿದ್ಯಾರ್ಥಿಗಳ ತರಬೇತಿ ಒಡಂಬಡಿಕೆಗೆ ಸಹಿ

ಆರ್.ಕೃಷ್ಣ

ಪ್ರಮುಖ ಮುಖ್ಯಾಂಶಗಳು

  • ಆರೋಗ್ಯ ರಕ್ಷಣೆ ಕ್ಷೇತ್ರದಲ್ಲಿ ವಿದ್ಯಾರ್ಥಿಗಳ ಪ್ರಾಯೋಗಿಕ ಸಾಮರ್ಥ್ಯವನ್ನು ಇದು ಹೆಚ್ಚಿಸಲಿದೆ
  • ಸಂಶೋಧನೆ ಮತ್ತು ಅಭಿವೃದ್ಧಿಗಾಗಿ ಬಾಹ್ಯ ಪಾಲುದಾರಿಕೆಯಡಿ ತರಬೇತಿಗೆ ಒತ್ತು ನೀಡಲಾಗುತ್ತಿದೆ
ಮೈಸೂರು:ಫಾರ್ಮಾ ವಿದ್ಯಾರ್ಥಿಗಳಿಗೆ ಉದ್ಯಮ ಕೌಶಲ ತರಬೇತಿ ಒದಗಿಸಲು ನಗರದ ಜೆಎಸ್‌ಎಸ್ ಅಕಾಡೆಮಿ ಆಫ್ ಹೈಯರ್ ಎಜುಕೇಷನ್ ಆ್ಯಂಡ್ ರೀಸರ್ಚ್ (ಜೆಎಸ್‌ಎಸ್ ಎಎಚ್‌ಇಆರ್), ಮರ್ಕ್ಸ್ ಹೆಲ್ತ್‌ಕೇರ್ ಆರ್‌ಡಿ ಜತೆಗೆ ಒಡಂಬಡಿಕೆಗೆ ಸಹಿ ಹಾಕಲಾಯಿತು.
ಮರ್ಕ್ಸ್ ಸಂಸ್ಥೆಯು ತನ್ನ ಕ್ಯಾಟಲಿಸ್ಟ್ ಕಾರ್ಯಕ್ರಮದಡಿ ವಿದ್ಯಾರ್ಥಿಗಳಿಗೆ ತರಬೇತಿ ನೀಡಲಿದೆ. ಭಾರತದ ಫಾರ್ಮಸಿ ಕೌನ್ಸಿಲ್‌ನ ಮಾಜಿ ಅಧ್ಯಕ್ಷರೂ ಆಗಿರುವ ಜೆಎಸ್‌ಎಸ್ ಎಎಚ್‌ಇಆರ್‌ನ ಪ್ರೊ ಚಾನ್ಸಲರ್ ಡಾ. ಬಿ. ಸುರೇಶ್ ಅವರ ಸಮ್ಮುಖದಲ್ಲಿ ಒಪ್ಪಂದಕ್ಕೆ ಸಹಿ ಮಾಡಲಾಯಿತು.
ವೃತ್ತಿಗೆ ಅಗತ್ಯವಿರುವ ಕೌಶಲಗಳ ಜತೆಗೆ ಫಾರ್ಮಾಕೊವಿಜಿಲೆನ್ಸ್, ವೈದ್ಯಕೀಯ ಬರಹ, ನಿಯಂತ್ರಣ ವ್ಯವಹಾರಗಳು, ವಿಜ್ಞಾನ ಬರಹದ ಕುರಿತು ವಿದ್ಯಾರ್ಥಿಗಳು ವಿಶೇಷ ತರಬೇತಿ ಪಡೆಯಲಿದ್ದಾರೆ. ಆರೋಗ್ಯ ರಕ್ಷಣೆ ಕ್ಷೇತ್ರದಲ್ಲಿ ವಿದ್ಯಾರ್ಥಿಗಳ ಪ್ರಾಯೋಗಿಕ ಸಾಮರ್ಥ್ಯವನ್ನು ಇದು ಹೆಚ್ಚಿಸಲಿದೆ. ರೋಗಿಗಳಿಗೆ ವೈಜ್ಞಾನಿಕವಾದ ಆರೋಗ್ಯ ರಕ್ಷಣೆಯ ಪರಿಹಾರಗಳನ್ನು ಅಭಿವೃದ್ಧಿಪಡಿಸಲೂ ವಿದ್ಯಾರ್ಥಿಗಳಿಗೆ ಇದು ಅನುವು ಮಾಡಿಕೊಡಲಿದೆ.
ಮರ್ಕ್ಸ್ ಸಂಸ್ಥೆಯ ಕ್ಯಾಟಲಿಸ್ಟ್ ಕಾರ್ಯಕ್ರಮ ಔಷಧ ವಿಜ್ಞಾನ ಕ್ಷೇತ್ರದಲ್ಲಿ ಸಂಶೋಧನೆ ಮತ್ತು ಅಭಿವೃದ್ಧಿಗಾಗಿ ಬಾಹ್ಯ ಪಾಲುದಾರಿಕೆಯಡಿ ತರಬೇತಿಗೆ ಒತ್ತು ನೀಡಲಾಗುತ್ತಿದೆ. ಈ ಮೂಲಕ ನಾವೀನ್ಯತೆಗೆ ಉತ್ತೇಜನ ನೀಡುವ ಉದ್ದೇಶ ಹೊಂದಲಾಗಿದೆ.