ರಂಗಾಂತರಂಗ ಮೈಸೂರು ವತಿಯಿಂದ ನಗರದಲ್ಲಿ ಭಾನುವಾರ ಆಯೋಜಿಸಿದ್ದ ಮಕ್ಕಳ ರಂಗಭೂಮಿ ಕಾರ್ಯಾಗಾರವನ್ನು ಸುಬ್ರಹ್ಮಣ್ಯ ಉದ್ಘಾಟಿಸಿದರು. ರಾಜಶೇಖರ ಕದಂಬ, ವೆಂಕಟೇಶ್, ಕೀರ್ತಿರಾಜ್, ಕಲಾವಿದ ವೆಂಕಟೇಶ್ ಇದ್ದರು. 
ಮೈಸೂರು

ರಂಗ ಚಟುವಟಿಕೆಯಿಂದ ವ್ಯಕ್ತಿತ್ವ ವಿಕಸನ ಸಾಧ್ಯ: ಕಾವೇರಿ ಶಿಕ್ಷಣ ಸಂಸ್ಥೆ ಆಡಳಿತಾಧಿಕಾರಿ ಸುಬ್ರಹ್ಮಣ್ಯ ಅಭಿಮತ

ಮೈಸೂರು: ಮಕ್ಕಳು ರಂಗ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳುವುದರಿಂದ ಅವರಲ್ಲಿ ಆತ್ಮಸ್ಥೈರ್ಯದೊಂದಿಗೆ ವ್ಯಕ್ತಿತ್ವ ವಿಕಸನಗೊಳ್ಳುತ್ತದೆ ಎಂದು ಶ್ರೀಕಾವೇರಿ ಶಿಕ್ಷಣ ಸಂಸ್ಥೆ ಆಡಳಿತಾಧಿಕಾರಿ ಸುಬ್ರಹ್ಮಣ್ಯ ಅಭಿಪ್ರಾಯಪಟ್ಟರು.
ರಂಗಾಂತರಂಗ ಮೈಸೂರು ವತಿಯಿಂದ ಕುವೆಂಪುನಗರದ ಶ್ರೀಕಾವೇರಿ ಶಿಕ್ಷಣ ಸಂಸ್ಥೆಯಲ್ಲಿ ಹಮ್ಮಿಕೊಂಡಿದ್ದ ಒಂದು ತಿಂಗಳ ವಾರಾಂತ್ಯ ‘ಮಕ್ಕಳ ರಂಗಭೂಮಿ ಕಾರ್ಯಾಗಾರ’ ಉದ್ಘಾಟನಾ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಪ್ರತಿಭೆಗಳಿಗೆ ರಂಗಭೂಮಿ ವೇದಿಕೆ ಕಲ್ಪಿಸುವ ಜತೆಗೆ ವೇದಿಕೆ ಭಯವನ್ನು ಹೋಗಲಾಡಿಸುತ್ತದೆ. ಮಕ್ಕಳ ಪ್ರತಿಭೆ ಹೊರಹಾಕಲು ವೇದಿಕೆ ಸೃಷ್ಟಿಯಾಗುತ್ತದೆ. ಆದ್ದರಿಂದ ಪಾಲಕರು ತಮ್ಮ ಮಕ್ಕಳನ್ನು ರಂಗಭೂಮಿಯಲ್ಲಿ ತೊಡಗಿಸಬೇಕು. ಜ್ಞಾನಾರ್ಜನೆಗೂ ರಂಗಭೂಮಿ ಕಲೆ ಪೂರಕವಾಗುತ್ತದೆ ಎಂದರು.
ಹಿರಿಯ ರಂಗಕಲಾವಿದ ರಾಜಶೇಖರ ಕದಂಬ ಮಾತನಾಡಿ, ರಂಗಭೂಮಿಯು ಮಕ್ಕಳಲ್ಲಿ ಮಾನವೀಯ ಮೌಲ್ಯಗಳನ್ನು ಬೆಳೆಸುತ್ತದೆ. ಈ ನಿಟ್ಟಿನಲ್ಲಿ ರಂಗಾಂತರಂಗವು ಮಕ್ಕಳ ರಂಗಕಲೆಗೆ ಸಂಬಂಧಪಟ್ಟಂತೆ ತರಬೇತಿ ನೀಡುತ್ತಿರುವುದು ಶ್ಲಾಘನೀಯ ಎಂದರು.
ಸಂಪನ್ಮೂಲ ವ್ಯಕ್ತಿ ವೆಂಕಟೇಶ್ ಮಕ್ಕಳಿಗೆ ರಂಗ ತರಬೇತಿ, ಹಾಡು, ಸಂಗೀತ ತರಗತಿಗಳನ್ನು ನಡೆಸಿಕೊಟ್ಟರು. ರಂಗಾಂತರಂಗದ ಸಂಸ್ಥಾಪಕ ಕೀರ್ತಿರಾಜ್, ಕಲಾವಿದ ವೆಂಕಟೇಶ್ ಇದ್ದರು.