ಪಿರಿಯಾಪಟ್ಟಣ ತಾಲೂಕಿನ ದೊಡ್ಡಹರವೆ ಗ್ರಾಮದಲ್ಲಿ ಆಯೋಜಿಸಿದ್ದ ಡಾ.ಬಿ.ಆರ್.ಅಂಬೇಡ್ಕರ್ ಅವರ 135ನೇ ಜಯಂತಿ ಕಾರ್ಯಕ್ರಮದಲ್ಲಿ ಗಣ್ಯರು ಅಂಬೇಡ್ಕರ್ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿದರು. ನಿತಿನ್ ವೆಂಕಟೇಶ್, ರಾಜಯ್ಯ, ಧನರಾಜ್, ಜಗದೀಶ್ ಇತರರಿದ್ದರು. 
ಮೈಸೂರು

ಶೋಷಿತ ಸಮುದಾಯಗಳು ಸುಶಿಕ್ಷಿತರಾಗಲಿ

ಪಿರಿಯಾಪಟ್ಟಣ: ಶೋಷಿತ ಸಮುದಾಯಗಳು ಸುಶಿಕ್ಷಿತರಾದಾಗ ಮಾತ್ರ ಡಾ.ಬಿ.ಆರ್.ಅಂಬೇಡ್ಕರ್ ಅವರ ಕನಸು ನನಸಾಗಲು ಸಾಧ್ಯ ಎಂದು ತಾಲೂಕು ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಅಧ್ಯಕ್ಷ ನಿತಿನ್ ವೆಂಕಟೇಶ್ ತಿಳಿಸಿದರು.
ತಾಲೂಕಿನ ದೊಡ್ಡಹರವೆ ಗ್ರಾಮದಲ್ಲಿ ಭಾನುವಾರ ಅಂಬೇಡ್ಕರ್ ಯುವಕರ ಸಂಘದ ವತಿಯಿಂದ ಆಯೋಜಿಸಿದ್ದ ಡಾ.ಬಿ.ಆರ್.ಅಂಬೇಡ್ಕರ್ ಅವರ 135ನೇ ಜಯಂತಿ ಕಾರ್ಯಕ್ರಮದಲ್ಲಿ ಅಂಬೇಡ್ಕರ್ ಪುತ್ಥಳಿ ಲೋಕಾರ್ಪಣೆ ಮಾಡಿ ಮಾತನಾಡಿದರು.
ಶಿಕ್ಷಣದ ಮಹತ್ವ ಅರಿತಿದ್ದ ಅಂಬೇಡ್ಕರ್ ಅವರು ಹೆಚ್ಚು ಅಧ್ಯಯನ ಮಾಡುವ ಮೂಲಕ ಅಪಾರ ಜ್ಞಾನ ಸಂಪಾದಿಸಿದ್ದರು. ಆ ಮೂಲಕ ಜನರ ಹಕ್ಕಿಗಾಗಿ ತಮ್ಮ ಇಡೀ ಜೀವನವನ್ನು ಮುಡಿಪಾಗಿಟ್ಟಿದ್ದರು ಎಂದರು. ಅಂಬೇಡ್ಕರ್ ಅವರ ಜಯಂತಿ ಆಚರಣೆಯನ್ನು ಕೇವಲ ದಲಿತ ವರ್ಗಕ್ಕೆ ಮಾತ್ರ ಸೀಮಿತಗೊಳಿಸದೆ ಸಮಾಜದ ಎಲ್ಲ ವರ್ಗದ ಜನರೂ ಮಾಡುವಂತಾಗಬೇಕು ಎಂದರು. ಡಾ.ಬಿ.ಆರ್.ಅಂಬೇಡ್ಕರ್ ಅವರ ಆದರ್ಶಗಳನ್ನು ಪ್ರತಿಯೊಬ್ಬರೂ ತಮ್ಮ ಜೀವನದಲ್ಲಿ ಅಳವಡಿಸಿಕೊಳ್ಳುವ ಮೂಲಕ ಸಮಾಜದ ಅಭಿವೃದ್ಧಿಗೆ ಸಹಕಾರಿಗಳಾಗಬೇಕು ಎಂದರು. ಕೆಲವು ಸಂವಿಧಾನ ವಿರೋಧಿಗಳು ಸಂವಿಧಾನವನ್ನು ಬದಲಿಸುವ ಪ್ರಯತ್ನ ಮಾಡುತ್ತಿದ್ದಾರೆ, ಅಂಬೇಡ್ಕರ್ ಅನುಯಾಯಿಗಳು ಒಗ್ಗಟ್ಟು ಪ್ರದರ್ಶಿಸುವ ಮೂಲಕ ಅಂತಹ ದುಷ್ಟ ಶಕ್ತಿಗಳನ್ನು ಮೂಲೆಗುಂಪು ಮಾಡಬೇಕು ಎಂದರು.
ಮದ್ದೂರು ಎಚ್.ಕೆ.ವೀರಣ್ಣಗೌಡ ಪದವಿ ಪೂರ್ವ ಕಾಲೇಜಿನ ಸಹಾಯಕ ಪ್ರಾಧ್ಯಾಪಕ ಡಾ.ಸಂದೀಪ್.ಎಸ್.ರಾವಣೀಕರ್ ಮಾತನಾಡಿ, ಅಂಬೇಡ್ಕರ್ ಅವರು ಒಂದು ವಿಶ್ವಕೋಶವಿದ್ದಂತೆ, ಅವರು ಕೇವಲ ಒಬ್ಬ ವ್ಯಕ್ತಿಯಾಗಿರಲಿಲ್ಲ, ದೇಶದ ಶಕ್ತಿಯಾಗಿ, ಧ್ವನಿಯಾಗಿ ಎಲ್ಲಾ ಜಾತಿ ಜನಾಂಗಕ್ಕೆ ಸಮಾನವಾದ ಅವಕಾಶಗಳು ಸಿಗಬೇಕೆಂದು ದುಡಿದವರು ಎಂದರು. ಅವರು ಕಾನೂನು ಮತ್ತು ಮೀಸಲಾತಿಯನ್ನು ಕೇವಲ ಒಂದೇ ಜಾತಿ, ಧರ್ಮಕ್ಕೆ ಮಾಡಿಲ್ಲ ಇಡೀ ದೇಶದ ಅಭಿವೃದ್ಧಿಗಾಗಿ ಮಾಡಿದ್ದಾರೆ. ಆದರೆ ಅಂತಹ ಮಹಾನ್ ಜ್ಞಾನಿಯನ್ನು ಕೇವಲ ಒಂದು ಸಮುದಾಯಕ್ಕೆ ಸೀಮಿತ ಮಾಡಿ ನೋಡುವುದು ಈ ದೇಶದ ವಿಪರ್ಯಾಸವೇ ಸರಿ ಎಂದರು.
ಕಾರ್ಯಕ್ರಮದಲ್ಲಿ ಬೈಲಕುಪ್ಪೆ ವಿವಿಧ ಟಿಬೆಟಿಯನ್ ಮೊನಾಸ್ಟ್ರಿಗಳ ಬೌದ್ಧ ಬಿಕ್ಕುಗಳು, ದೊಡ್ಡಹರವೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ರಾಜಯ್ಯ, ದಸಂಸ ಮುಖಂಡರಾದ ಧನರಾಜ್, ಜಗದೀಶ್, ದೇವೇಂದ್ರ, ಶಿವರಾಜ್, ಚಲುವರಾಜು, ಸಣ್ಣಯ್ಯ, ನಿವೃತ್ತ ಸೈನಿಕ ಸುಬ್ರಹ್ಮಣ್ಯ, ಗ್ರಾಮದ ಯಜಮಾನರಾದ ಮೋಹನ್ ಕುಮಾರ್ ಮುಖಂಡರಾದ ಯೋಗೇಶ್, ಮುತ್ತುರಾಜ್, ಮಹೇಶ್, ಸ್ವಾಮಿಗೌಡ, ಕುಮಾರಸ್ವಾಮಿ, ಸೋಮಾಚಾರ್, ಅರ್ಜುನ, ಪ್ರಕಾಶ, ಅಂಬೇಡ್ಕರ್ ಯುವಕ ಸಂಘದ ಪದಾಧಿಕಾರಿಗಳಾದ ಯೋಗೇಶ್, ಮಹೇಶ್, ರವೀಶ್ ಕುಮಾರ್, ರವಿ, ವಿಜೇಂದ್ರ, ಹರೀಶ್, ಕೆ.ರವಿ, ಶಿವರಾಜ್, ಟಿ.ಹರೀಶ್, ಜಗದೀಶ್, ಸೋಮು, ಡಿ.ಎನ್.ಸುಜಯ್, ಮಂಜು, ಪುನೀತ್, ಕೆ.ಅಶೋಕ್, ಮಂಜು, ಸುಮೀತ್, ಸಿದ್ದರಾಜು, ಕೆ.ಲಕ್ಷ್ಮಣ, ಡಿ.ರಮೇಶ್, ಕೃಷ್ಣ, ಪುಟ್ಟಸ್ವಾಮಿ, ಲಿಂಗರಾಜ್, ಶ್ರೀನಿವಾಸ್, ಸ್ವಾಮಿ, ಮೋಹನ್, ಅರುಣ್ ಮತ್ತಿತರರು ಹಾಜರಿದ್ದರು.