ಬಿಳಿಗೆರೆ ಗ್ರಾಮದಲ್ಲಿ ಶನಿವಾರ ಆಯೋಜಿಸಿದ್ದ ಪ್ರಜಾ ಸೇವಾ ಆಂದೋಲನಕ್ಕೆ ಸಭೆಯನ್ನು ಜಿಲ್ಲಾ ಉಸ್ತುವಾರಿ ಸಚಿವ ಯತೀಂದ್ರ ಸಿದ್ದರಾಮಯ್ಯ ಉದ್ಘಾಟಿಸಿದರು. ಲಕ್ಷ್ಮೀಕಾಂತ ರೆಡ್ಡಿ, ಮಲ್ಲಿಕಾರ್ಜುನ ಬಾಲದಂಡಿ, ಮುಖೇಶ್, ಮಹೇಶ್, ಸ್ಮಿತಾ ರಾಮು ಇತರರು ಇದ್ದರು. 
ಮೈಸೂರು

ಸಚಿವರಿಗೆ ಸಮಸ್ಯೆ ಮನವರಿಕೆ ಮಾಡಿದ ಜನ

ನಂಜನಗೂಡು: ನಂಜನಗೂಡು ತಾಲೂಕಿನ ವರುಣ ವಿಧಾನಸಭಾ ಕ್ಷೇತ್ರದ ಬಿಳಿಗೆರೆ ಗ್ರಾಮದಲ್ಲಿ ಆಯೋಜಿಸಿದ್ದ ಹೋಬಳಿ ಮಟ್ಟದ ಪ್ರಜಾಸೇವಾ ಆಂದೋಲನ ಸಭೆಯಲ್ಲಿ ಸಾಗುವಳಿ ಚೀಟಿ, ವಸತಿ ಸಮಸ್ಯೆ ಹಾಗೂ ಜಮೀನು ಒತ್ತುವರಿ, ಇ-ಸ್ವತ್ತು ಸಮಸ್ಯೆಗಳ ಕುರಿತ ಅರ್ಜಿಗಳು ಹೆಚ್ಚಾಗಿ ಸಲ್ಲಿಕೆಯಾದವು.
ಬಿಳಿಗೆರೆ ಗ್ರಾಮದಲ್ಲಿ ಶನಿವಾರ ಆಯೋಜಿಸಿದ್ದ ಸಭೆಯನ್ನು ಜಿಲ್ಲಾ ಉಸ್ತುವಾರಿ ಸಚಿವ ಯತೀಂದ್ರ ಸಿದ್ದರಾಮಯ್ಯ ಉದ್ಘಾಟಿಸಿದರು. ಮಧ್ಯಾಹ್ನ ಸುಮಾರು ಒಂದು ಗಂಟೆಗೆ ಆರಂಭವಾದ ಸಭೆ ಗಂಟೆಗಟ್ಟಲೇ ನಡೆಯಿತು. ಜಿಲ್ಲಾ ಹಾಗೂ ತಾಲೂಕು ಮಟ್ಟದ ಎಲ್ಲ ಇಲಾಖೆಯ ಅಧಿಕಾರಿಗಳು ಹಾಜರಿದ್ದು, ಸಚಿವರಿಗೆ ಅಗತ್ಯ ಮಾಹಿತಿ ನೀಡಿದರು.
ಸುತ್ತೂರು, ಬಿಳಿಗೆರೆ ಕಲ್ಕುಂದ ಅಕ್ಕಪಕ್ಕದ ಗ್ರಾಮಗಳಿಂದ ಮುಖಂಡರು, ಗ್ರಾಮಸ್ಥರು ನೂರಾರು ಸಂಖ್ಯೆಯಲ್ಲಿ ಸಭೆಯಲ್ಲಿ ಭಾಗವಹಿಸಿದ್ದರು. ತಮ್ಮ ವಿವಿಧ ಸಮಸ್ಯೆಗಳನ್ನು ಸಚಿವರ ಮುಂದೆ ತೋಡಿಕೊಂಡರು. ಹಲವು ವರ್ಷಗಳಿಂದ ಜಮೀನಿನಲ್ಲಿ ಸಾಗುವಳಿ ಮಾಡುತ್ತಿದ್ದರೂ ಸಾಗುವಳಿ ಪತ್ರ ದೊರೆಯದೆ ಸರ್ಕಾರದ ಯಾವುದೇ ಅನುದಾನ ದೂರೆಯತ್ತಿಲ್ಲ ಎಂದು ಕೆಲ ರೈತರು ಮನವಿ ಸಲ್ಲಿಸಿದರು. ಅಲ್ಲದೆ ಜಮಿನು ಒತ್ತುವರಿ, ಪೋಡಿ ಖಾತೆ, ಮೂಲಸೌಕರ್ಯ ಸೇರಿದಂತೆ ಇನ್ನು ಅನೇಕ ರೀತಿಯ ದೂರುಗಳನ್ನು ಜನರು ಸಚಿವರ ಗನಮಕ್ಕೆ ತಂದರು.
ಸಭೆಯಲ್ಲಿ 241 ಅರ್ಜಿಗಳು ಸಲ್ಲಿಕೆಯಾಗಿದ್ದು, ಬಹುತೇಕ ಅರ್ಜಿಗಳು ಕಂದಾಯ ಇಲಾಖೆ, ಪೊಲೀಸ್ ಇಲಾಖೆ, ಅರೋಗ್ಯ, ನೀರಾವರಿ, ಇಲಾಖೆ ಅರ್ಜಿಗಳು ಸಲ್ಲಿಕೆಯಾಗಿವೆ.
ಈ ಸಂದರ್ಭದಲ್ಲಿ ಜಿಲ್ಲಾಧಿಕಾರಿ ಲಕ್ಷ್ಮೀಕಾಂತ ರೆಡ್ಡಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮಲ್ಲಿಕಾರ್ಜುನ ಬಾಲದಂಡಿ, ಜಿಪಂ ಸಿಇಒ ಮುಖೇಶ್, ಮೈಸೂರು ತಹಸೀಲ್ದಾರ್ ಮಹೇಶ್, ನಂಜನಗೂಡು ತಹಸೀಲ್ದಾರ್ ಸ್ಮಿತಾ ರಾಮು, ಮೃಗಾಲಯ ಪ್ರಾಧಿಕಾರದ ಅಧ್ಯಕ್ಷ ಹಾಡ್ಯ ರಂಗಸ್ವಾಮಿ, ವಾಲ್ಮೀಕಿ ಅಭಿವೃದ್ಧಿ ನಿಗಮದ ಮಾಜಿ ಅಧ್ಯಕ್ಷ ಎಸ್.ಸಿ.ಬಸವರಾಜು ಇತರರು ಇದ್ದರು.