ದಸರಾ ವೇದಿಕೆಯಲ್ಲಿ ಎಸ್.ಜಾನಕಿ ಅವರನ್ನು ಸ್ಮರಿಸುವ ವಿಶೇಷ ಕಾರ್ಯಕ್ರಮ ಆಯೋಜಿಸುವಂತೆ ಅನುರಾಗ ಕ್ರಿಯೇಷನ್ಸ್ ಟ್ರಸ್ಟ್‌ನಿಂದ ಡಾ.ಪಿ ಶಿವರಾಜು ಅವರಿಗೆ ಮನವಿ ಸಲ್ಲಿಸಲಾಯಿತು. ಡಾ.ರೇಖಾ ಅರುಣ್, ಗುರುರಾಜ್, ನಿರೂಪಕ ಅಜಯ್ ಶಾಸ್ತ್ರಿ, ಸಮಾಜ ಸೇವಕ ವಿಕ್ರಮ ಅಯ್ಯಂಗಾರ್, ಗಗನ್‌ಗೌಡ ಇದ್ದರು.
- ಎಸ್.ಜಾನಕಿ ಅವರ ಸ್ತಬ್ಧ ಚಿತ್ರವನ್ನು ಸಂಬಂಧಪಟ್ಟ ಇಲಾಖೆಯಿಂದ ಪ್ರದರ್ಶಿಸುವುದು
- ಪ್ರಸಿದ್ಧ ಗೀತೆಗಳನ್ನು ಒಳಗೊಂಡ ವಿಶೇಷ ಸಂಗೀತ ಕಾರ್ಯಕ್ರಮ ಹಮ್ಮಿಕೊಳ್ಳುವುದು
ಮೈಸೂರು:ಕನ್ನಡ ಸೇರಿದಂತೆ ಹಲವು ಭಾರತೀಯ ಭಾಷೆಗಳಲ್ಲಿ 48 ಸಾವಿರಕ್ಕೂ ಹೆಚ್ಚು ಹಾಡುಗಳ ಮೂಲಕ ವಿಶ್ವೆದೆಲ್ಲೆಡೆ ಜನಮನ ಗೆದ್ದಿರುವ ಗಾನಕೋಗಿಲೆ ಎಸ್.ಜಾನಕಿ ಅವರ ಕಲಾಸೇವೆಯನ್ನು ಸ್ಮರಿಸಲು ದಸರಾ ವೇದಿಕೆಯಲ್ಲಿ ವಿಶೇಷ ಗೌರವ ನಮನ ಸಲ್ಲಿಸುವ ಕಾರ್ಯಕ್ರಮ ಆಯೋಜಿಸುವಂತೆ ಅನುರಾಗ ಕ್ರಿಯೇಷನ್ಸ್ ಟ್ರಸ್ಟ್‌ನಿಂದ ಹೆಚ್ಚುವರಿ ಪ್ರಾದೇಶಿಕ ಆಯುಕ್ತ ಡಾ.ಪಿ.ಶಿವರಾಜುಗೆ ಮನವಿ ಸಲ್ಲಿಸಲಾಯಿತು.
ಅರುಣರಾಗ ಕ್ರಿಯೇಷನ್ಸ್ ಟ್ರಸ್ಟ್ ಅಧ್ಯಕ್ಷೆ ಡಾ.ರೇಖಾ ಅರುಣ್ ಮಾತನಾಡಿ, ಎಸ್.ಜಾನಕಿ ಅವರ ಸ್ತಬ್ಧ ಚಿತ್ರವನ್ನು ಸಂಬಂಧಪಟ್ಟ ಇಲಾಖೆಯಿಂದ ಪ್ರದರ್ಶಿಸುವುದು, ಪ್ರಸಿದ್ಧ ಗೀತೆಗಳನ್ನು ಒಳಗೊಂಡ ವಿಶೇಷ ಸಂಗೀತ ಕಾರ್ಯಕ್ರಮ ಹಮ್ಮಿಕೊಳ್ಳುವುದು, ಕಲಾ ಜೀವನದ ಬಗ್ಗೆ ಒಂದು ಕಿರು ಪರಿಚಯ, ಅವರ ಭಾವಚಿತ್ರಕ್ಕೆ ಪುಷ್ಪ ನಮನ ಹಾಗೂ ಗೌರವ ಸಮರ್ಪಣೆ ಮುಂತಾದ ಕಾರ್ಯಕ್ರಮಗಳನ್ನು ಸಂಬಂಧಪಟ್ಟ ಇಲಾಖೆಯಿಂದ ಆಯೋಜಿಸುವಂತೆ ಮನವಿ ಮಾಡಿದರು.
ಕಾರ್ಯದರ್ಶಿ ಗುರುರಾಜ್, ನಿರೂಪಕ ಅಜಯ್ ಶಾಸ್ತ್ರಿ, ಸಮಾಜ ಸೇವಕ ವಿಕ್ರಮ ಅಯ್ಯಂಗಾರ್, ಗಗನ್ ಗೌಡ ಇತರರು ಇದ್ದರು.