ಹುಣಸೂರು ನಗರದಲ್ಲಿ ತಂಬಾಕು ಬೆಳೆಗಾರರಿಗೆ ರಸಗೊಬ್ಬರ ನಿರ್ವಹಣೆ ಕುರಿತಾದ ಅರಿವು ಕಾರ್ಯಕ್ರಮ ನಡೆಸಲಾಯಿತು. ಯೋಗೇಶ್ ಚಂದ್ರ, ಮಂಗೇಶ್ ಸಿಂಗ್, ಡಾ.ಮಹದೇವಸ್ವಾಮಿ, ರೈತರು ಇದ್ದರು. 
ಮೈಸೂರು

ರಾಸಾಯನಿಕ ಗೊಬ್ಬರಗಳ ಬಳಕೆ ಕುರಿತು ಹೆಚ್ಚಿನ ಗಮನಹರಿಸಿ

ರೈತರಿಗೆ ಡಾ.ಎಸ್.ರಮಕೃಷ್ಣನ್ ಸಲಹೆ

ಹುಣಸೂರು: ತಂಬಾಕು ಕೃಷಿಯಲ್ಲಿ ಹೆಚ್ಚಿನ ಉತ್ಪಾದನೆ ಮತ್ತು ಆರ್ಥಿಕ ಸ್ಥಿರತೆ ಹೊಂದಲು ರಾಷ್ಟ್ರೀಯ ವಾಣಿಜ್ಯ ಕೃಷಿ ಸಂಶೋಧನಾ ಸಂಸ್ಥೆಯು ಕಾರ್ಯ ನಿರ್ವಹಿಸುತ್ತಿದ್ದು, ರಾಸಾಯನಿಕ ಗೊಬ್ಬರಗಳ ಬಳಕೆ ಕುರಿತು ರೈತರು ಹೆಚ್ಚಿನ ಗಮನಹರಿಸಬೇಕಿದೆ ಎಂದು ಸಂಸ್ಥೆಯ ಮುಖ್ಯಸ್ಥ ಡಾ.ಎಸ್.ರಾಮಕೃಷ್ಣನ್ ತಿಳಿಸಿದರು.
ಟ್ರಾನ್ಸ್‌ವರ್ಲ್ಡ್ ಫರ್ಟಿಕೆಮ್ ಲಿಮಿಟೆಡ್ ಮತ್ತು ಕಾಫ್ ಸಮಿತಿ ಸದಸ್ಯರ ಸಹಯೋಗದಲ್ಲಿ ಶನಿವಾರ ಆಯೋಜಿಸಿದ್ದ ತಂಬಾಕು ಬೆಳೆವ ರೈತರಿಗೆ ರಸಗೊಬ್ಬರಗಳ ಬಳಕೆ ಕುರಿತಾದ ಕಾರ್ಯಕ್ರಮದಲ್ಲಿ ಮಾತನಾಡಿದರು.
ಕೃಷಿಯಲ್ಲಿನ ಆಧುನಿಕ ಪದ್ಧತಿಯ ಪರಿಕಲ್ಪನೆಯನ್ನು ರೈತರು ಅಳವಡಿಸಿಕೊಳ್ಳುವ ಅಗತ್ಯವಿದೆ. ಟ್ರಾನ್ಸ್‌ವರ್ಲ್ಡ್ ಫರ್ಟಿಕೆಮ್ ವತಿಯಿಂದ ನ್ಯೂಟ್ರೀಫೀಡ್ ಎಸ್‌ಒಪಿ ಮತ್ತು ನ್ಯೂಟ್ರಿಫೀಡ್ ಕ್ಯಾಲ್ಷಿಯಂ ನೈಟ್ರೇಟ್ ತಂಬಾಕು ಮಂಡಳಿಯ ಮೂಲಕ ರೈತರಿಗೆ ವಿತರಿಸುತ್ತಿದೆ. ಈ ರಾಸಾಯನಿಕ ಗೊಬ್ಬರವನ್ನು ಶೇ.40ರಷ್ಟು ತಂಬಾಕು ಬೆಳೆವ ರೈತರು ಉಪಯೋಗಿಸುತ್ತಿದ್ದು, ಉತ್ತಮ ಇಳುವರಿ ಮತ್ತು ಗುಣಮಟ್ಟವನ್ನೂ ಪಡೆಯುತ್ತಿದ್ದಾರೆ. ಎಫ್‌ಸಿವಿ ತಂಬಾಕು ಬೆಳೆವ ರೈತರು ತಾವು ಬಳಸುವ ರಾಸಾಯನಿಕ ಗೊಬ್ಬರ ಮತ್ತು ಅದರ ಪರಿಮಾಣಗಳ ಕುರಿತು ಅಗತ್ಯ ಅರಿವು ಹೊಂದಿರುವುದು ಅತ್ಯಗತ್ಯವಾಗಿದೆ ಎಂದರು.
ಹಿರಿಯ ವಿಜ್ಞಾನಿ ಡಾ.ಮಹದೇವಸ್ವಾಮಿ ತಂಬಾಕು ಕೃಷಿಯಲ್ಲಿ ಪೋಷಕಾಂಶ ನಿರ್ವಹಣೆ ಕುರಿತು ಮಾಹಿತಿ ನೀಡಿ, ನ್ಯೂಟ್ರಿಫೀಡ್‌ನ ಎಸ್‌ಒಪಿ ಮತ್ತು ಸಿಎಲ್‌ಗಳ ಸಮರ್ಪಕ ಬಳಕೆಯಿಂದ ಎಕರೆಗೆ 1 ಲಕ್ಷ ರೂ.ಗಳ ಹೆಚ್ಚಿನ ಆದಾಯ ಗಳಿಸಬಹುದೆಂದು ವಿಶ್ವಾಸ ವ್ಯಕ್ತಪಡಿಸಿದರು.
ಕಾರ್ಯಕ್ರಮದಲ್ಲಿ ಟಿಎಫ್‌ಎಲ್ ಮಾರುಕಟ್ಟೆ ವಿಭಾಗದ ಉಪಾಧ್ಯಕ್ಷ ಯೋಗೇಶ್‌ಚಂದ್ರ, ಮಂಗೇಶ್‌ಸಿಂಗ್,ಥಾಮಸ್ ವರ್ಗೀಸ್, ಕಾಫ್ ಸಮಿತಿ ಸದಸ್ಯರು ಮತ್ತು ಪ್ರಗತಿಪರ ರೈತರು ಹಾಜರಿದ್ದರು.