ಭುವನಹಳ್ಳಿ ಗ್ರಾಮದಲ್ಲಿ ತಾಲೂಕು ರೋಟರಿ ಮಿಡ್‌ಟೌನ್ ವತಿಯಿಂದ ಆರೋಗ್ಯ ಉಚಿತ ತಪಾಸಣೆ ಶಿಬಿರ ಆಯೋಜಿಸಲಾಗಿತ್ತು. ಜಿ.ಕೆ.ಜಗನ್, ತಿರುಮಲಾಪುರ ರಾಜೇಗೌಡ, ಡಾ.ಪ್ರಕಾಶ್ ಬಾಬು ರಾವ್, ಐಕೆಪಿ ಹೆಗಡೆ, ಟಿ.ಕೆ.ಚೇತನ್ ಇದ್ದರು 
ಮೈಸೂರು

ಆರೋಗ್ಯದ ಮೇಲೆ ಹೆಚ್ಚು ಗಮನ ಹರಿಸಿ

ಪ್ರಮುಖ ಮುಖ್ಯಾಂಶಗಳು

  • ತಾಲೂಕು ರೋಟರಿ ಮಿಡ್‌ಟೌನ್ ಅಧ್ಯಕ್ಷ ಜಿ.ಕೆ.ಜಗನ್ ಸಲಹೆ
ಬೈಲುಕುಪ್ಪೆ : ಇತ್ತೀಚಿನ ದಿನಗಳಲ್ಲಿ ವೃದ್ಧರು ಹಾಗೂ ಮಕ್ಕಳು ಆರೋಗ್ಯದ ಕಡೆ ಹೆಚ್ಚು ಗಮನ ಹರಿಸುವುದು ಸೂಕ್ತ ಎಂದು ತಾಲೂಕು ರೋಟರಿ ಮಿಡ್ ಟೌನ್ ಅಧ್ಯಕ್ಷ ಜಿ.ಕೆ.ಜಗನ್ ತಿಳಿಸಿದರು.
ಪಿರಿಯಾಪಟ್ಟಣ ತಾಲೂಕಿನ ಭುವನಹಳ್ಳಿ ಗ್ರಾಮದ ಶ್ರೀ ಲಕ್ಷ್ಮೀ ದೇವಸ್ಥಾನದ ಆವರಣದಲ್ಲಿ ತಾಲೂಕು ರೋಟರಿ ಮಿಡ್‌ಟೌನ್ ವತಿಯಿಂದ ಗುರುವಾರ ಆಯೋಜಿಸಿದ್ದ ಆರೋಗ್ಯ ಉಚಿತ ತಪಾಸಣೆ ಶಿಬಿರ ಉದ್ಘಾಟಿಸಿ ಮಾತನಾಡಿದರು.
ಗ್ರಾಮೀಣ ಭಾಗದ ಜನರು, ವೃದ್ಧರು, ಮಕ್ಕಳು ಸೇರಿದಂತೆ ಕೆಲಸದ ಒತ್ತಡಕ್ಕೆ ಮಣಿದು ಆರೋಗ್ಯದ ಮೇಲೆ ಬೀರುವ ದುಷ್ಪರಿಣಾಮ ತಡೆಗಟ್ಟುವಲ್ಲಿ ನಿರ್ಲಕ್ಷೃ ವಹಿಸದೆ ವೈದ್ಯರ ಸಲಹೆ ಸೂಚನೆ ತಪ್ಪದೆ ಪಾಲಿಸಬೇಕು. ಆರೋಗ್ಯ ಕಾಪಾಡಿಕೊಂಡರೆ ನಿಮ್ಮ ಜೀವನದಲ್ಲಿ ಏನು ಬೇಕಾದರೂ ಸಾಧಿಸಬಹುದು ಎಂದರು.
ರೋಟರಿ ಮಿಡ್‌ಟೌನ್ ವಲಯ 6ರ ಸಹಾಯಕ ಪ್ರಾಂತಪಾಲ ತಿರುಮಲಪುರದ ರಾಜೇಗೌಡ ಮಾತನಾಡಿದರು. ಉಚಿತ ಆರೋಗ್ಯ ತಪಾಸಣೆ ಶಿಬಿರದಲ್ಲಿ ಗ್ರಾಮದ 90ಕ್ಕೆ ಹೆಚ್ಚು ಜನ ಆರೋಗ್ಯ ತಪಾಸಣೆ ಮಾಡಿಸಿಕೊಂಡರು.
ತಾಲೂಕು ರೋಟರಿ ಮಿಟ್‌ಟೌನ್ ಕಾರ್ಯದರ್ಶಿ ಟಿ.ಕೆ.ಚೇತನ್, ಖಜಾಂಚಿ ಐಕೆಪಿ ಹೆಗಡೆ, ಸದಸ್ಯರ ಬಿ ಟಿ ದೇವರಾಜ್, ಪಿರಿಯಾಪಟ್ಟಣದ ಲಕ್ಷ್ಮೀ ಹೆಲ್ತ್ ಸೆಂಟರ್ ಡಾ.ಪ್ರಕಾಶ್ ಬಾಬುರಾವ್, ಎಸ್‌ಎಂಎಸ್ ಮೆಡಿಕಲ್ ಸ್ಟೋರ್ ಮಾಲೀಕ ಕೆ ಬಿ ರವಿಕುಮಾರ್, ಡಾ.ಚೇತನ್, ಗ್ರಾಮದ ಮುಖಂಡರಾದ ಬಿ.ವಿ.ಗಿರೀಶ್, ಚೆನ್ನೇಗೌಡ, ರಾಜೇಗೌಡ, ಭದ್ರ ಶೆಟ್ಟಿ, ನಾಗೇಂದ್ರ ಇತರರು ಇದ್ದರು.