ಸರಗೂರು ಪಟ್ಟಣದ 3ನೇ ವಾರ್ಡ್ ವ್ಯಾಪ್ತಿಯ ಪೌರಕಾರ್ಮಿಕರ ಬೀದಿಯಲ್ಲಿ ಪಟ್ಟಲದಮ್ಮ ದೇವಿ ವಾರ್ಷಿಕೋತ್ಸವವನ್ನು ವಿಜೃಂಭಣೆಯಿಂದ ಆಚರಿಸಲಾಯಿತು. 
ಮೈಸೂರು

ಪಟ್ಟಲದಮ್ಮ ದೇವಿ ವಾರ್ಷಿಕೋತ್ಸವ ಸಂಭ್ರಮ

ಲಲಾಟಾಕ್ಷ ಎಸ್
ಸರಗೂರು: ಪಟ್ಟಣದ 3ನೇ ವಾರ್ಡ್ ವ್ಯಾಪ್ತಿಯ ಪೌರಕಾರ್ಮಿಕರ ಬೀದಿಯಲ್ಲಿ ಪಟ್ಟಲದಮ್ಮ ದೇವಿ ಹಬ್ಬದ 51ನೇ ವರ್ಷದ ವಾರ್ಷಿಕೋತ್ಸವದ ಅಂಗವಾಗಿ ಬುಧವಾರ ನಡೆದ ತಂಬಿಟ್ಟು ಆರತಿ ಮೆರವಣಿಗೆಯು ಹಬ್ಬಕ್ಕೆ ಕಳೆ ತಂದಿತು.
ಪ್ರತಿ ವರ್ಷದಂತೆ ಪೌರಕಾರ್ಮಿಕರ ಬೀದಿ ಬಡಾವಣೆಯ ನಿವಾಸಿಗಳು ಮನೆ ಅಂಗಳಗಳನ್ನು ಸ್ವಚ್ಛಗೊಳಿಸಿ ಹಸಿರು ತೋರಣ ಹಾಗೂ ರಂಗೋಲಿಗಳನ್ನು ಬಿಡಿಸಿದ್ದರು. ಬಡಾವಣೆಯ ಹೆಂಗೆಳೆಯರು ಮಕ್ಕಳೊಂದಿಗೆ ತಮ್ಮ ಮನೆಗಳಿಂದ ತಂಬ್ಬಿಟಿನ ಆರತಿಯನ್ನು ಪಟ್ಟಲದಮ್ಮ ದೇವಸ್ಥಾನಕ್ಕೆ ತಂದರು. ಮಂಗಳವಾದ್ಯ ಹಾಗೂ ಪೂಜಾ ಕುಣಿತದೊಂದಿಗೆ ಕಬಿನಿ ನದಿಯಲ್ಲಿ ಗಂಗಾ ಪೂಜೆ ಸಲ್ಲಿಸಿ ಅದೇ ಮಾರ್ಗವಾಗಿ ಮಹಿಳೆಯರು ಮತ್ತು ಯುವಕರು ಬಾಯಿಗೆ ಬೀಗ ಹಾಕಿ ಮೆರವಣಿಗೆಯಲ್ಲಿ ಸಾಗಿದರು. ಪಟ್ಟಲದಮ್ಮ ದೇವಸ್ಥಾನಕ್ಕೆ ತೆರಳಿ ಸಾಮೂಹಿಕವಾಗಿ ಪೂಜೆ ಸಲ್ಲಿಸಿದರು.
ಶಾಸಕ ಅನಿಲ್ ಚಿಕ್ಕಮಾದು ತಾಯಿ ನಾಗಮ್ಮ ದರ್ಶನ ಪಡೆದರು. ಅರ್ಚಕ ಪಳಿನಿಸ್ವಾಮಿ, ಮಾಗಲಿ, ಎಸ್.ಆರ್.ರಾಜು, ಸಂಘದ ಉಪಾಧ್ಯಕ್ಷ ಆರ್.ಸೋಮು, ಕಾರ್ಯದರ್ಶಿ ಶಿವು, ಮುಖಂಡರಾದ ಸುಬ್ರಹ್ಮಣ್ಯ, ಚಿನ್ನಸ್ವಾಮಿ, ಅರ್ಜುನ್, ಮಂಜು, ಶಶಿಕುಮಾರ್,ಧರ್ಮರಾಜು, ಶಿವಕುಮಾರ್, ಚಂದ್ರ, ವಿಜಯ್, ರಂಗನಾಥ್, ಮಂಜು, ಹರೀಶ್, ಧರ್ಮರಾಜು, ಸ್ವಾಮಿನಾಥ, ನಾಗರಾಜು, ಗ್ರಾಮದ ಮುಖಂಡರು ಪಾಲ್ಗೊಂಡಿದ್ದರು.