ಶ್ರೀರಾಂಪುರದ ಪರಸಯ್ಯಹುಂಡಿ ಶ್ರೀಚನ್ನಕೇಶವ ಸ್ವಾಮಿ ಪ್ರೌಢಶಾಲೆಯ ವಾರ್ಷಿಕೋತ್ಸವ, ಗುರುವಂದನೆ ಹಾಗೂ ಸ್ನೇಹಸಮ್ಮಿಲನ ಕಾರ್ಯಕ್ರಮಎಚ್.ವಿ.ರಾಜೀವ್, ಅಂಶಿ ಪ್ರಸನ್ನಕುಮಾರ್, ಕೆ.ಆರ್.ಬಸವರಾಜು, ಚನ್ನಮಲ್ಲಯ್ಯ, ಗುರುಪ್ರಸಾದ್ ಿತರರು ಇದ್ದರು 
ಮೈಸೂರು

ಗುಣಾತ್ಮಕ ಶಿಕ್ಷಣ ನೀಡಿದರೆ ಪಾಲಕರು ಶುಲ್ಕಕ್ಕೆ ಚಿಂತಿಸಲ್ಲ: ಮುಡಾ ಮಾಜಿ ಅಧ್ಯಕ್ಷ ಎಚ್.ವಿ.ರಾಜೀವ್ ಅಭಿಮತ

ಪ್ರಮುಖ ಮುಖ್ಯಾಂಶಗಳು

  • ಇವತ್ತು ಸರ್ಕಾರಿ ಶಾಲೆಗಳಲ್ಲಿ ವಿದ್ಯಾರ್ಥಿಗಳ ಸಂಖ್ಯೆ ಕುಸಿದಿದೆ
  • ಅತ್ಯುತ್ತಮ ಶಿಕ್ಷಕರನ್ನು ನೇಮಿಸಿಕೊಂಡು ಗುಣಾತ್ಮಕ ಶಿಕ್ಷಣ ನೀಡುವ ಮೂಲಕ ಶಾಲೆಯನ್ನು ಉಳಿಸಬೇಕು
ಮೈಸೂರು: ಗುಣಾತ್ಮಕ ಶಿಕ್ಷಣ ನೀಡಿದರೆ ಪಾಲಕರು ಶುಲ್ಕದ ಬಗ್ಗೆ ಗಮನ ಕೊಡದೆ ಬೆಂಬಲ ನೀಡುತ್ತಾರೆ ಎಂದು ಮುಡಾ ಮಾಜಿ ಅಧ್ಯಕ್ಷ ಎಚ್.ವಿ.ರಾಜೀವ್ ಹೇಳಿದರು.
ನಗರದ ಶ್ರೀರಾಂಪುರದ ಪರಸಯ್ಯಹುಂಡಿ ಶ್ರೀಚನ್ನಕೇಶವ ಸ್ವಾಮಿ ಪ್ರೌಢಶಾಲೆಯ ವಾರ್ಷಿಕೋತ್ಸವ, ಗುರುವಂದನೆ ಹಾಗೂ ಸ್ನೇಹಸಮ್ಮಿಲನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಇವತ್ತು ಸರ್ಕಾರಿ ಶಾಲೆಗಳಲ್ಲಿ ವಿದ್ಯಾರ್ಥಿಗಳ ಸಂಖ್ಯೆ ಕುಸಿದಿದೆ. ಆದರೆ ಖಾಸಗಿ ಶಾಲೆಗಳಲ್ಲಿ ಉತ್ತಮ ಶಿಕ್ಷಣ ನೀಡಿದರೆ ಪಾಲಕರು ಶುಲ್ಕದ ಬಗ್ಗೆ ಯೋಚನೆ ಮಾಡುವುದಿಲ್ಲ. ಆದ್ದರಿಂದ ಅತ್ಯುತ್ತಮ ಶಿಕ್ಷಕರನ್ನು ನೇಮಿಸಿಕೊಂಡು ಗುಣಾತ್ಮಕ ಶಿಕ್ಷಣ ನೀಡುವ ಮೂಲಕ ಶಾಲೆಯನ್ನು ಉಳಿಸಬೇಕು ಎಂದು ಸಲಹೆ ನೀಡಿದರು.
ಹಿಂದೆ ಕಾಳಯ್ಯ ಅವರು ಗ್ರಾಮೀಣ ಪ್ರದೇಶದ ಮಕ್ಕಳಿಗೂ ಉತ್ತಮ ಶಿಕ್ಷಣ ಸಿಗಲಿ ಎಂಬ ಸೇವಾ ಮನೋಭಾವದಿಂದ ಈ ಶಾಲೆಯನ್ನು ಆರಂಭಿಸಿದರು. ಯಾವುದೇ ಶುಲ್ಕ ಪಡೆಯುತ್ತಿರಲಿಲ್ಲ. ಆದರೆ ಈಗ ಪರಿಸ್ಥಿತಿ ಬದಲಾಗಿದೆ. ಬಂಡವಾಳ ಹಾಕಿ ಬಂಡವಾಳ ತೆಗೆಯುತ್ತಿದ್ದಾರೆ. ಶುಲ್ಕ ಪಡೆಯದೆ ಶಾಲೆಗಳನ್ನು ಅದರಲ್ಲೂ ಕನ್ನಡ ಮಾಧ್ಯಮ ಶಾಲೆಗಳನ್ನು ನಡೆಸಲು ಸಾಧ್ಯವೇ ಇಲ್ಲ ಎಂದರು. 
ಹಿರಿಯ ಪತ್ರಕರ್ತ ಅಂಶಿ ಪ್ರಸನ್ನಕುಮಾರ್ ಮಾತನಾಡಿದರು. ಸಾಲಿಗ್ರಾಮ ಎಸ್‌ಸಿಇಎಲ್ ಅಧ್ಯಕ್ಷ ಲೋಕೇಶ್ವರ, ನಿರ್ದೇಶಕ ಕೆ.ಆರ್.ಬಸವರಾಜು, ಗೌರವ ಕಾರ್ಯದರ್ಶಿ ಚನ್ನಮಲ್ಲಯ್ಯ, ವಸತಿ ನಿಲಯ ಪಾಲಕ ಗುರುಪ್ರಸಾದ್, ಎಸ್‌ಸಿಇಎಲ್  ನಿರ್ದೇಶಕರಾದ ಶಿವಪ್ಪ, ಎಂ.ಎಲ್. ಯುಕ್ತಶ್ರೀ, ರಂಗರಾಮು, ಅಶೋಕಪುರಂ ಅಶೋಕ ಪ್ರೌಢಶಾಲೆ ಮುಖ್ಯ ಶಿಕ್ಷಕ ಎಂ.ರಾಜೀವ್, ಆಡಳಿತಾಧಿಕಾರಿ ತತ್ಸಮ, ಸಿ.ಕೆ.ಡ್ರೀಮ್ ಇಂಗ್ಲಿಷ್ ಶಾಲೆಯ ಆಡಳಿತಾಧಿಕಾರಿ ವಿ.ಸುಶ್ಮಿತಾ ಪವಾರ್, ಮುಖ್ಯ ಶಿಕ್ಷಕ ಶಂಕರ್, ಜಾನ್ ಪೀಟರ್, ದೇವರಾಜ್ ಇತರರು ಇದ್ದರು.
ಗಿರೀಶ್, ಜೂ.ಅಂಬರೀಷ್, ಜೂ.ಮಾಲಾಶ್ರೀ ಅವರಿಂದ ಮನರಂಜನೆ, ಅಮ್ಮ ರಾಮಚಂದ್ರ ಗಾಯನ ಕಾರ್ಯಕ್ರಮ ನಡೆಯಿತು.