ಮೈಸೂರು: ನಗರ ಪಾಲಿಕೆಯಲ್ಲಿ ಆಟೋ ಚಾಲಕರಾಗಿ ಕರ್ತವ್ಯ ನಿರ್ವಹಿಸುತ್ತಿರುವ ಪೈಲ್ವಾನ್ ನಾಗರಾಜು (ಗುಂಡ) ರಾಷ್ಟ್ರೀಯ ಕುಸ್ತಿ ಪಂದ್ಯಾವಳಿಗೆ ಆಯ್ಕೆಯಾಗಿ ಗಮನ ಸೆಳೆದಿದ್ದಾರೆ.
ಉತ್ತರ ಪ್ರದೇಶದ ಆಗ್ರಾದಲ್ಲಿ ನ.18 ಮತ್ತು 19ರಂದು ನಡೆಯಲಿರುವ 2026ನೇ ಸಾಲಿನ ಹಿರಿಯ ಪುರುಷ ಹಾಗೂ ಮಹಿಳೆಯರ ಪ್ರೀಸ್ಟೈಲ್ ಮತ್ತು ಸಾಂಪ್ರದಾಯಿಕ ಕುಸ್ತಿಗೆ ಕರ್ನಾಟಕ ತಂಡದ ಆಯ್ಕೆ ಪ್ರಕ್ರಿಯೆ ಚಾಮುಂಡಿ ವಿಹಾರ ಕ್ರೀಡಾಂಗಣದಲ್ಲಿ ನಡೆಯಿತು.
ಸಾಂಪ್ರದಾಯಿಕ ವಿಭಾಗದಲ್ಲಿ ನಡೆದ ಸ್ಪರ್ಧೆಯ 125 ಕೆ.ಜಿ.ಸೀನಿಯರ್ ವಿಭಾಗದಲ್ಲಿ ನಾಗರಾಜ್ ಪ್ರಥಮ ಸ್ಥಾನ ಗಳಿಸಿ ರಾಷ್ಟ್ರ ಮಟ್ಟಕ್ಕೆ ಆಯ್ಕೆಯಾಗಿದ್ದಾರೆ. ಅಗ್ರಹಾರದ ನಿವಾಸಿ ಮುರಳೀಧರ್ ಮತ್ತು ಭಾಗ್ಯ ದಂಪತಿ ಪುತ್ರ. ಇವರು ಕಳೆದ ಆರೇಳು ವರ್ಷಗಳಿಂದ ನಾಡಕುಸ್ತಿ ಅಭ್ಯಾಸ ಮಾಡುತ್ತಿದ್ದಾರೆ ಎಂದು ಪ್ರಕಟಣೆ ತಿಳಿಸಿದೆ.