ತತೀಯ ಲಿಂಗಿಗಳ 
ಮೈಸೂರು

ಮಂಗಳಮುಖಿ ವಿರುದ್ಧ ಯುವಕ ದೂರು

ಯುವಕನನ್ನು ಅಪಹರಿಸಿದ ತತೀಯ ಲಿಂಗಿಗಳ ಗುಂಪೊಂದು ಆತನಿಗೆ ಮಂಗಳಮುಖಿ ವೇಷ ಹಾಕಿಸಿ ಲಕ್ಷಾಂತರ ರೂ.ಹಣ ಗಳಿಸಿ ದೌರ್ಜನ್ಯ ನಡೆಸಿದೆ ಎಂದು ಆರೋಪಿಸಿ ಮೈಸೂರಿನಲ್ಲಿ ದೂರು ದಾಖಲಾಗಿದೆ.
ನಂಜನಗೂಡಿನ ತ್ಯಾಗರಾಜ ಕಾಲನಿಯ ಅನಿಲ್‌ಕುವಾರ್ ಎಂಬಾತ ಮಂಗಳೂರು ಮೂಲದ ಮಂಗಳಮುಖಿ ಅನಿತಾ ವಿರುದ್ಧ ಲಷ್ಕರ್ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾನೆ.

ದೂರಿನಲ್ಲಿ ಏನಿದೆ?

ಕಳೆದ ಐದು ತಿಂಗಳ ಹಿಂದೆ ಕೆಲಸ ಹುಡುಕಿಕೊಂಡು ಮೈಸೂರಿಗೆ ಬಂದಿದ್ದು, ಮೈಸೂರು ಗ್ರಾವಾಂತರ ಬಸ್ ನಿಲ್ದಾಣದ ಬಳಿ ನಂಜನಗೂಡು ಬಸ್‌ಗಾಗಿ ಕಾಯುತ್ತಿದ್ದೆ. ಈ ವೇಳೆ ಅಲ್ಲಿಗೆ ಬಂದ ಮಂಗಳಮುಖಿ ಅನಿತಾ ಮತ್ತು ತಂಡ ನನಗೆ ಮುಸುಕು ಹಾಕಿ ಮತ್ತು ಬರುವಂತೆ ವಾಡಿ ಬಲವಂತವಾಗಿ ಕಾರಿನಲ್ಲಿ ಅಪಹರಿಸಿ ಮಂಗಳೂರಿಗೆ ಕರೆದೊಯ್ದರು.
ನಂತರ ಮಂಗಳಮುಖಿಯಾಗಿ ವೇಷ ಹಾಕಿ ಬಲವಂತವಾಗಿ ಬೀದಿಗಳಲ್ಲಿ, ಅಂಗಡಿಗಳ ಮುಂದೆ ಭಿಕ್ಷೆ ಬೇಡಿಸಿ ಹಣ ಸಂಪಾದಿಸಿದರು.
ಇದರ ಜತೆಗೆ ರೀಲ್ಸ್‌ನಲ್ಲಿಯೂ ನನ್ನನ್ನು ಬಳಸಿಕೊಂಡರು. ಜತೆಗೆ ನನ್ನ ಮೇಲೆ ಲೈಂಗಿಕ ದೌರ್ಜನ್ಯವನ್ನೂ ನಡೆಸಿದರು. ನಂತರ ಆಧಾರ್ ಕಾರ್ಡ್‌ನಲ್ಲಿ ತತೀಯ ಲಿಂಗಿ ಎಂದು ಮಹಿಳಾ ಮತ್ತು ಮಕ್ಕಳ ಅಭಿವದ್ಧಿ ಇಲಾಖೆಯಿಂದ ಅಧಿಕತ ಪ್ರವಾಣ ಪತ್ರ ಕೊಡಿಸಿದ್ದಾರೆ. ಮುಂದಿನ ತಿಂಗಳು ಬಾಂಬೆಗೆ ಕರೆದೊಯ್ದು ಶಸ್ತ್ರಚಿಕಿತ್ಸೆ ಮೂಲಕ ಶಾಶ್ವತವಾಗಿ ಮಂಗಳಮುಖಿಯಾಗಿ ಬದಲಾಯಿಸಲು ತೀರ್ವಾನಿಸಿದ್ದಾರೆ.
ಈ ಕರಾಳ ದಂಧೆಯ ಕಪಿಮುಷ್ಟಿಯಿಂದ ಹೊರಬರಲು ನಿರ್ಧರಿಸಿ ತನ್ನ ಸಂಪಾದನೆ 3 ಲಕ್ಷ ರೂ.ಕೊಡುವಂತೆ ಕೇಳಿದಾಗ ಅನಿತಾ ಉಲ್ಟಾ ಹೊಡೆದಿದ್ದಾರೆ. ತನ್ನ ಮನೆಯಿಂದ 5 ಲಕ್ಷ ರೂ.ನಗದು, ಚಿನ್ನಾಭರಣ ಕಳ್ಳತನ ವಾಡಿರುವುದಾಗಿ ಸುಳ್ಳು ದೂರು ನೀಡಿ ಜೈಲಿಗೆ ಹಾಕಿಸುತ್ತೇನೆ ಎಂದು ಬೆದರಿಸಿದ್ದಾರೆ. ಅಲ್ಲಿಂದ ತಪ್ಪಿಸಿಕೊಂಡು ನಂಜನಗೂಡಿಗೆ ಬಂದು ಸೇರಿದ್ದು, ಮತ್ತೆ ಅಲ್ಲಿಗೆ ಬಂದು ನನ್ನನ್ನು ಅಪಹರಿಸಿಕೊಂಡು ಮಂಗಳೂರಿಗೆ ಕರೆದುಕೊಂಡು ಹೋಗಿದ್ದು, ಅಲ್ಲಿಂದ ತಪ್ಪಿಸಿಕೊಂಡು ಬಂದಿದ್ದೇನೆ ಎಂದು ಅನಿಲ್ ಕುವಾರ್ ದೂರಿನಲ್ಲಿ ತಿಳಿಸಿದ್ದಾರೆ.

ಅನಿಲ್ ವಿರುದ್ಧ ದೂರು:

ಅನಿಲ್ ಕುವಾರ್ ವಿರುದ್ಧವೂ ಅಲ್ಲಿನ ತತೀಯ ಲಿಂಗಿಗಳು ಸ್ಥಳೀಯ ಕಂಕನವಾಡಿ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದು, ಆತ ಮಂಗಳಮುಖಿ ಅಲ್ಲದಿದ್ದರೂ ಸೌಲಭ್ಯ ಪಡೆಯಲು ಮುಂದಾಗಿದ್ದಾನೆ ಎಂದು ಅವರು ದೂರಿನಲ್ಲಿ ಆರೋಪಿಸಿದ್ದಾರೆ.