ಬನ್ನೂರು ರೋಟರಿ ಸಂಸ್ಥೆ, ಕಾನ್‌ಸಿಂಗ್ ಜೀ ರಾಜ್‌ಪುರೋಹಿತ್, ಶ್ರೀಗೌರಿದೇವಿ, ಲಯನ್ಸ್ ಕ್ಲಬ್ ಆಫ್ ಈರೋಡ್ ಕಾವೇರಿ ಟ್ರಸ್ಟ್, ಕೊಯಮತ್ತೂರು ಕಣ್ಣಿನ ಆಸ್ಪತ್ರೆ ಸಂಯುಕ್ತಾಶ್ರಯದಲ್ಲಿ ಶನಿವಾರ ಕಣ್ಣಿನ ಉಚಿತ ತಪಾಸಣಾ ಶಿಬಿರವನ್ನು ಹಮ್ಮಿಕೊಳ್ಳಲಾಗಿತ್ತು. ಎಂ.ಪ್ರಕಾಶ್, ಗೌರಿದೇವಿ ಕಾನ್‌ಸಿಂಗ್, ಡಾ.ಮಹೇಂದ್ರಸಿಂಗ್ ಕಾಳಪ್ಪ ಇತರರು ಇದ್ದರು.
- free health check-up camp
ಬನ್ನೂರು: ಕಣ್ಣಿನ ಉಚಿತ ತಪಾಸಣೆ ಶಿಬಿರ ಎನ್ನುವುದು ಸಾರ್ವಜನಿಕರಿಗೆ, ವಿಶೇಷವಾಗಿ ಬಡವರು ಮತ್ತು ಗ್ರಾಮೀಣ ಜನರಿಗೆ ಕಣ್ಣಿನ ಆರೋಗ್ಯ ಸೇವೆಯನ್ನು ಉಚಿತವಾಗಿ ಒದಗಿಸುವ ಕಾರ್ಯಕ್ರಮ ಎಂದು ವಿವೇಕಾನಂದ ಶಿಕ್ಷಣ ಸಂಸ್ಥೆಯ ಧರ್ಮದರ್ಶಿ ಎಂ.ಪ್ರಕಾಶ್ ತಿಳಿಸಿದರು.
ಪಟ್ಟಣದ ರೋಟರಿ ಸಂಸ್ಥೆ, ಕಾನ್‌ಸಿಂಗ್‌ಜೀ ರಾಜ್‌ಪುರೋಹಿತ್, ಶ್ರೀಗೌರಿದೇವಿ, ಲಯನ್ಸ್ ಕ್ಲಬ್ ಆಫ್ ಈರೋಡ್ ಕಾವೇರಿ ಟ್ರಸ್ಟ್, ಕೊಯಮತ್ತೂರು ಕಣ್ಣಿನ ಆಸ್ಪತ್ರೆ ಸಂಯುಕ್ತಾಶ್ರಯದಲ್ಲಿ ಶನಿವಾರ ಏರ್ಪಡಿಸಿದ್ದ ಕಣ್ಣಿನ ಉಚಿತ ತಪಾಸಣೆ ಶಿಬಿರದಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ಉತ್ತಮ ತಜ್ಞ ವೈದ್ಯರಿಂದ ಕಣ್ಣಿನ ಪರೀಕ್ಷೆ, ಕಣ್ಣಿನ ಒತ್ತಡ ಪರೀಕ್ಷೆಯನ್ನು ಮಾಡಿ, ಕಣ್ಣಿನ ಪೊರೆ ಇರುವವರನ್ನು ಗುರುತಿಸಿ, ಅವರಿಗೆ ಉಚಿತ ಶಸ್ತ್ರ ಚಿಕಿತ್ಸೆಯನ್ನು ನಿರಂತರವಾಗಿ ಮಾಡುತ್ತಾ ಬರುತ್ತಿರುವುದು ಮಹತ್ವದ ಕಾರ್ಯಕ್ರಮವಾಗಿದೆ ಎಂದು ತಿಳಿಸಿದರು. ಗ್ರಾಮೀಣ ಭಾಗದ ಜನರಿಗೆ ಹತ್ತಿರದ ಸ್ಥಳದಲ್ಲೇ ಚಿಕಿತ್ಸೆ ನೀಡಿ, ಅಂಧತ್ವ ನಿವಾರಣೆ ಮಾಡುವ ಮೂಲಕ, ಸಕಾಲದಲ್ಲಿ ದೃಷ್ಟಿ ಉಳಿಯುವಂತ ಕೆಲಸವನ್ನು ನಿರಂತರವಾಗಿ 18 ವರ್ಷದಿಂದ ಮಾಡುತ್ತಾ ಬಂದಿರುವುದು ಉತ್ತಮ ಕಾರ್ಯ ಎಂದರು.
ರೋಟರಿ ಮಾಜಿ ಅಧ್ಯಕ್ಷ ಡಾ.ಮಹೇಂದ್ರಸಿಂಗ್ ಕಾಳಪ್ಪ ಮಾತನಾಡಿ, ದೃಷ್ಟಿಹೀನತೆಯಿಂದ ಜೀವನ ಸಾಗಿಸುತ್ತಿರುವ ಪ್ರತಿಯೊಬ್ಬರು, ದೃಷ್ಠಿಹೀನರಿಗಾಗಿ ನಡೆಸುತ್ತಿರುವಂತ ಶಿಬಿರವನ್ನು ಸದ್ಬಳಕೆ ಮಾಡಿಕೊಂಡು, ಉತ್ತಮ ಜೀವನ ನಡೆಸಿ ಎಂದು ತಿಳಿಸಿದರು.
ವಿವಿಧ ಗ್ರಾಮದಿಂದ ಸುಮಾರು 200ಕ್ಕೂ ಹೆಚ್ಚು ಶಿಬಿರಾರ್ಥಿಗಳು ಆಗಮಿಸಿ ಕಣ್ಣಿನ ತಪಾಸಣೆ ಮಾಡಿಸಿಕೊಂಡರು. ಗೌರಿದೇವಿ ಕಾನ್‌ಸಿಂಗ್, ಲಯನ್ ಕೆ.ರಾಜೇಶ್ ಕುಮಾರ್, ವಿಜಯ್‌ಕುಮಾರ್, ಡಾ. ನಿಕ್‌ಲಾಂಕ್ ಮೆಹ್ತಾ, ಡಾ.ಅಮರ್ ಸಿದ್ದಿಕ್, ಡಾ. ಡೆನ್ನಿ ಪ್ರಸಾದ್ ವನ್ಯರಾಜ್ ಪುರೋಹಿತ್, ವಿರಾಟ್‌ರಾಜ್ ಪುರೋಹಿತ್, ಸಂತೋಷ್ ಕುಮಾರಿ, ಯಾಸೀನ್, ನಂಜುಂಡಸ್ವಾಮಿ, ನಟರಾಜು, ಮೂರ್ತಿ ಸೇರಿದಂತೆ ಹಲವರು ಉಪಸ್ಥಿತರಿಸಿದ್ದರು.