ಹುಣಸೂರು ನಗರದ ಪ್ರವಾಸಿಮಂದಿರದಲ್ಲಿ ಆಯೋಜಿಸಿದ್ದ ಸಭೆಯಲ್ಲಿ ಗ್ರಾಮ ಪಂಚಾಯತ್ ಜಿಲ್ಲಾಧ್ಯಕ್ಷ ಕೆ.ಬಸವರಾಜು ಮಾತನಾಡಿದರು. ಹೊಸೂರು ಕುಮಾರ್, ಬಸವರಾಜು ಕಲ್ಕುಣಿಕೆ, ಕಾಮಾಕ್ಷಮ್ಮ, ಶಿವಮ್ಮ ಇತರರಿದ್ದಾರೆ.
- ಸಿಐಟಿಯು, ರೈತಸಂಘ, ವಿವಿಧ ಕಾರ್ಮಿಕ ಸಂಘಟನೆಗಳ ಪೂರ್ವಭಾವಿ ಸಭೆ
ಹುಣಸೂರು: ಪೆಬ್ರವರಿ 12 ರಂದು ಸಿಐಟಿಯು, ರೈತಸಂಘ, ವಿವಿಧ ಕಾರ್ಮಿಕ ಸಂಘಟನೆಗಳು ಹಮ್ಮಿಕೊಂಡಿರುವ ಅಖಿಲ ಭಾರತ ಮುಷ್ಕರವನ್ನು ಯಶಸ್ವಿಗೊಳಿಸಲು ಸಂಘಟನೆಗಳು ತೀರ್ಮಾನಿಸಿದವು.
ನಗರದ ಪ್ರವಾಸಿ ಮಂದಿರದಲ್ಲಿ ಸೋಮವಾರ ಈ ಕುರಿತು ಆಯೋಜಿಸಿದ್ದ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದ ಗ್ರಾಮಪಂಚಾಯತ್ ಜಿಲ್ಲಾಧ್ಯಕ್ಷ ಕೆ.ಬಸವರಾಜು, ಕೇಂದ್ರ ಸರ್ಕಾರ ಕಾರ್ಮಿಕ ಕಾನೂನು ನಾಲ್ಕು ಸಂಹಿತೆಗಳಾಗಿ ಮಾಡಿ ಕಾರ್ಮಿಕ ಬದುಕನ್ನು ಕಿತ್ತು ಕೊಳ್ಳಲು ಹೊರಟಿದೆ. ರೈತ ಬೆಳೆದ ಬೆಳೆಗಳಿಗೆ ಬೆಲೆ ನಿಗದಿ, ಕಾನೂನು ಜಾರಿ ಮಾಡಲು ಮೀನಾ ಮೇಷ ಮಾಡುತ್ತಿದೆ. ಶಿಕ್ಷಣ ಆರೋಗ್ಯ ಸೇರಿದಂತೆ ಹಲವು ಸಾರ್ವಜನಿಕ ಸೇವೆಗಳನ್ನು ಖಾಸಗೀಕರಣ ಮಾಡಲು ಹುನ್ನಾರ ಮಾಡುತ್ತಿದ್ದಾರೆ. ರೈತರ ಕೃಷಿ ಭೂಮಿ ಕಿತ್ತು ದೊಡ್ಡ ದೊಡ್ಡ ಬಂಡವಾಳಗಾರರರಿಗೆ ಬಹಳ ಕಡಿಮೆ ಬೆಲೆಯಲ್ಲಿ ನೀಡಲಾಗುತ್ತಿದೆ. ಇವೆಲ್ಲ ಪ್ರಶ್ನೆಗಳ ಮೇಲೆ ದೇಶದ ಸುಮಾರು 500ಕ್ಕೂ ಸಂಘಟನೆಗಳು ಅಖಿಲ ಭಾರತ ಮುಷ್ಕರಕ್ಕೆ ಕರೆ ನೀಡಿದ್ದು ಮುಷ್ಕರ ಯಶಸ್ವಿ ಗೊಳಿಸುವಂತೆ ಕರೆ ನೀಡಿದರು.
ರೈತ ಸಂಘದ ಜಿಲ್ಲಾಧ್ಯಕ್ಷ ಹೊಸೂರು ಕುಮಾರ್ ಮಾತನಾಡಿ. ಈ ಹೋರಾಟ ಜನ ಸಾಮಾನ್ಯರ ಅಳಿವು ಉಳಿವಿಗಾಗಿ ನಡೆಯುತ್ತಿದ್ದು. ರೈತ ಕಾರ್ಮಿಕರು. ಮಹಿಳೆಯರು. ಶೋಷಿತ ವರ್ಗ ಹೆಚ್ಚಿನ ಸಂಖ್ಯೆಯಲ್ಲಿ ಸೇರಬೇಕೆಂದು ಮನವಿ ಮಾಡಿದರು.
ಸಭೆಯಲ್ಲಿ ಸಿಐಟಿಯು ತಾ ಸಂಚಾಲಕ ವಿ. ಬಸವರಾಜು ಕಲ್ಕುಣಿಕೆ. ಮುಖಂಡರಾದ ಮಂಗಳಗೌರಮ್ಮ. ಲೋಕೇಶ್. ದಿನೇಶ್. ಪ್ರಾಂತ ರೈತ ಸಂಘದ ತಾ ಅಧ್ಯಕ್ಷ ಎಂ.ಎಸ್. ಚಂದ್ರಶೇಖರ ಕಾರ್ಯದರ್ಶಿ ಎಚ್ ಡಿ ಬೀರೇಶ್ವರ್. ರೈತ ಸಂಘದ ಕಿರಿಜಾಜಿ ಧನಂಜಯ. ರಾಮು ಕಾಮಾಕ್ಷಮ್ಮ್. ಶಿವಮ್ಮ.ಇದ್ದರು.