ಲೈಂಗಿಕ ಅಲ್ಪಸಂಖ್ಯಾತ ವ್ಯಕ್ತಿಗಳ 
ಮೈಸೂರು

ಲೈಂಗಿಕ ಅಲ್ಪಸಂಖ್ಯಾತರ ಹಕ್ಕುಗಳ ರಕ್ಷಣೆ ತಿದ್ದುಪಡಿ ಮಸೂದೆಗೆ ವಿರೋಧ

ಪ್ರಮುಖ ಮುಖ್ಯಾಂಶಗಳು

  • ಮಸೂದೆಯಲ್ಲಿ ಟ್ರಾನ್ಸ್ಜೆಂಡರ್ ಎಂಬ ಪದಕ್ಕೆ ಸೀಮಿತ ಮತ್ತು ತಪ್ಪಾದ ವ್ಯಾಖ್ಯಾನ ನೀಡಲಾಗಿದೆ.
  • . ಹಲವಾರು ಲಿಂಗ ವೈವಿಧ್ಯತೆಯ ಗುರುತುಗಳನ್ನು ಹೊರತು ಪಡಿಸಲಾಗಿದೆ.
ಮೈಸೂರು: ಕೇಂದ್ರ ಸರ್ಕಾರದ ಲೈಂಗಿಕ ಅಲ್ಪಸಂಖ್ಯಾತ ವ್ಯಕ್ತಿಗಳ ಹಕ್ಕುಗಳ ರಕ್ಷಣೆ ತಿದ್ದುಪಡಿ ಮಸೂದೆಯನ್ನು ರಾಜ್ಯ ಮಟ್ಟದ ಸಮುದಾಯದ ಸಂಘಟನೆಗಳ ಒಕ್ಕೂಟದ ವಿರೋಧಿಸಿದೆ.
 ಈ ಸಮುದಾಯದವರ ಹಕ್ಕುಗಳಿಗೆ ಗಂಭೀರ ಹಾನಿಯುಂಟು ಮಾಡುವ ಕಾರಣ ಈ ಮಸೂದೆಯನ್ನು ವಿರೋಧಿಸಲಾಗುವುದು. ಈ ಮಸೂದೆ ಈಗಾಗಲೇ ಇರುವ ಸಮಾನತೆ, ಗೌರವ ಮತ್ತು ಸ್ವಯಂ ಗುರುತಿನ ಹಕ್ಕುಗಳನ್ನು ದುರ್ಬಲಗೊಳಿಸುವ ಯತ್ನವಾಗಿದೆ  ಎಂದು ಒಕ್ಕೂಟದ ಪದಾಧಿಕಾರಿ ಪೃಥ್ವಿ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಲಿಂಗ ಗುರುತಿಗೆ ವೈದ್ಯಕೀಯ ಪರಿಶೀಲನೆ ಮತ್ತು ಪ್ರಮಾಣಪತ್ರಗಳ ಮೂಲಕ ಮಾತ್ರ ಮಾನ್ಯಗೊಳಿಸುವ ವ್ಯವಸ್ಥೆ ಬೇಕೆಂದು ಮಸೂದೆಯಲ್ಲಿ ತಿಳಿಸಲಾಗಿದೆ. 
ಆದರೆ ಈ ಹಿಂದಿನ ಸುಪ್ರೀಂಕೋರ್ಟ್ ತೀರ್ಪಿನ ಅಡಿಯಲ್ಲಿನ ಪ್ರತಿಯೊಬ್ಬ ವ್ಯಕ್ತಿಗೂ ತನ್ನ ಲಿಂಗ ಗುರುತನ್ನು ಸ್ವಯಂ ನಿರ್ಧರಿಸುವ ಹಕ್ಕು ಇದೆ. ಯಾವುದೇ ವೈದ್ಯಕೀಯ ಅಥವಾ ಆಡಳಿತಾತ್ಮಕ ಅನುಮತಿ ಅಗತ್ಯ ಇಲ್ಲ ಎಂಬ ಅಂಶಕ್ಕೆ ವಿರುದ್ಧವಾಗಿದೆ ಎಂದೂ ಕಿಡಿಕಾರಿದರು.
ಮಸೂದೆಯಲ್ಲಿ ಟ್ರಾನ್ಸ್ಜೆಂಡರ್ ಎಂಬ ಪದಕ್ಕೆ ಸೀಮಿತ ಮತ್ತು ತಪ್ಪಾದ ವ್ಯಾಖ್ಯಾನ ನೀಡಲಾಗಿದೆ. ಹಲವಾರು ಲಿಂಗ ವೈವಿಧ್ಯತೆಯ ಗುರುತುಗಳನ್ನು ಹೊರತು ಪಡಿಸಲಾಗಿದೆ. ಇದೇ ರೀತಿಯ ಹಲವಾರು ಲೋಪಗಳು ಈ ಮಸೂದೆಯಲ್ಲಿ ಇವೆ ಎಂದು ಹೇಳಿದರು. ಟಿ.ಶಿವರಾಮು, ಬಿ.ಎಚ್. ಮಂಜುನಾಥ್ ಇನ್ನಿತರರಿದ್ದರು.