Online fraud  
ಮೈಸೂರು

ಆನ್‌ಲೈನ್‌ನಲ್ಲಿ 19.65 ಲಕ್ಷ ರೂ ವಂಚನೆ

ಮೈಸೂರು: ಆನ್‌ಲೈನ್ ವಂಚನೆಯಿಂದ ವೃದ್ಧರೊಬ್ಬರು 19.65 ಲಕ್ಷ ರೂ.ಕಳೆದು ಕೊಂಡಿದ್ದಾರೆ. ಯಾದವಗಿರಿ ನಿವಾಸಿ ವಂಚನೆಗೆ ಒಳಗಾದವರು.
ಗೂಗಲ್‌ನಲ್ಲಿ ಹೂಡಿಕೆ ಜಾಹೀರಾತು ನೋಡಿ ಅರ್ಜಿ ಭರ್ತಿ ಮಾಡಿದ ಬಳಿಕ ಜಸ್ಪ್ರೀತ್ ಎಂಬ ವ್ಯಕ್ತಿ ಕರೆ ಮಾಡಿ ಹಣ ಹೂಡಿಕೆಯ ಬಗ್ಗೆ ಮಾಹಿತಿ ನೀಡಿದ. ಆತನ ಮಾತನ್ನು ನಂಬಿ ಆತ ಹೇಳಿದ ನಾನಾ ಬ್ಯಾಂಕ್ ಖಾತೆಗೆ ಹಣ ವರ್ಗಾವಣೆ ಮಾಡಿದ್ದು, ಲಾಭದ ಹಣವನ್ನು ಕೇಳಿದ ಮೇಲೆ ಮತ್ತಷ್ಟು ಹೂಡಿಕೆ ಮಾಡಬೇಕು ಎಂದು ಹೇಳಿದ್ದಾರೆ.
ಇದರಿಂದ ಅನುಮಾನಗೊಂಡು ಪರಿಶೀಲಿಸಿದಾಗ ವಂಚನೆಯಾಗಿರುವುದು ಗೊತ್ತಾಗಿದೆ ಎಂದು ಹಿರಿಯ ನಾಗರಿಕರು ದೂರಿನಲ್ಲಿ ತಿಳಿಸಿದ್ದು, ಈ ಸಂಬಂಧ ಸೆನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.