ಬನ್ನೂರಿನಲ್ಲಿ ಹೇಮಾದ್ರಂಬ ಜಾತ್ರಾ ಮಹೋತ್ಸವದ ಅಂಗವಾಗಿ ಹಳ್ಳಿಕಾರ್ ತಳಿಯ ರಾಸುಗಳ ಪ್ರದರ್ಶನ ನಡೆಯುತ್ತಿದ್ದು, ಸಿದ್ದರಾಮುರವರ ಹಳ್ಳಿಕಾರ್ ತಳಿಯ ರಾಸುಗಳು ಪ್ರಮುಖ ಆಕರ್ಷಣೀಯವಾಗಿದೆ. 
ಮೈಸೂರು

ಗಮನ ಸೆಳೆಯುತ್ತಿದೆ ಹಳ್ಳಿಕಾರ್ ತಳಿ ರಾಸುಗಳು

ಶಿವಶಂಕರ್ ಎಂ. ಹೆಬ್ಬಳ್ಳ

ಪ್ರಮುಖ ಮುಖ್ಯಾಂಶಗಳು

  • ಹೇಮಾದ್ರಂಬ ಜಾತ್ರಾ ಮಹೋತ್ಸವ
ಬನ್ನೂರು: ಪಟ್ಟಣದಲ್ಲಿ ಹೇಮಾದ್ರಂಬ ಜಾತ್ರಾ ಮಹೋತ್ಸವದ ಅಂಗವಾಗಿ ದನಗಳ ಜಾತ್ರೆ ಆರಂಭವಾಗಿದ್ದು, ಕಳ್ಳಿಕಾರ್ ತಳಿಯ ಎತ್ತುಗಳು ಗಮನ ಸೆಳೆಯುತ್ತಿವೆ. ಹಳ್ಳಿಕಾರ್ ತಳಿಯ ರಾಸುಗಳು ಹೆಚ್ಚಾಗಿ ಆಗಮಿಸಿದ್ದು, ಈ ತಳಿಯ ರಾಸುಗಳನ್ನು ಸಾಕುವವರಿಗೆ ಮಾಹಿತಿ ಸಿಗುತ್ತಿದೆ.
ಯಾಚೇನಹಳ್ಳಿ ಗ್ರಾಮದ ಹಳ್ಳಿಕಾರ್ ತಳಿಯ ಸಂರಕ್ಷಕ ಎಂದೇ ಖ್ಯಾತರಾದ ಸಿದ್ದರಾಮು ಮಾತನಾಡಿ, ಇಂದು ಹೇಮಾದ್ರಂಬ ಜಾತ್ರೆಯು ವಿಧ್ಯುಕ್ತವಾಗಿ ಆರಂಭವಾಗಿದ್ದು, ಹಳ್ಳಿಕಾರ್ ತಳಿಯ ರಾಸುಗಳೇ ಹೆಚ್ಚಾಗಿ ಕಟ್ಟಲಾಗುತ್ತಿದೆ. ಇದರಿಂದ ರೈತರಿಗೆ ಹೆಚ್ಚು ಅನುಕೂಲವಾಗಲಿದೆ. ಮುಂದಿನ ದಿನಗಳಲ್ಲಿ ಪ್ರತಿ ಮನೆ ಮನೆಗಳಲ್ಲಿ ಹಳ್ಳಿಕಾರ್ ತಳಿಯ ರಾಸುಗಳನ್ನು ಯುವಕರು ಸಾಕಲಿ ಎಂದು ಆಶಿಸಿದರು.
ಜಾತ್ರಾ ಮಹೋತ್ಸವದಲ್ಲಿ ರಾಮನಗರ, ಕೊಳ್ಳೇಗಾಲ, ಸಾತನೂರು ಸೇರಿದಂತೆ ಅನೇಕ ಕಡೆಗಳಿಂದ ಹಳ್ಳಿಕಾರ್ ತಳಿಯ ರಾಸುಗಳು ಬಂದಿದ್ದು, ರೈತರಿಂದ ರಾಸುಗಳ ಮಾರಾಟವು ಸಹ ನಡೆಯುತ್ತಿದೆ. ಉತ್ತಮ ಹಳ್ಳಿಕಾರ್ ತಳಿಯ ರಾಸುಗಳಿಗೆ ಬಹುಮಾನ ಸಹ ನೀಡಲಾಗುತ್ತಿದೆ.