ಅವಧಿ ಮೀರಿದ ಮದ್ಯ ನಾಶಪಡಿಸಿದ ಅಧಿಕಾರಿಗಳು 
ಮೈಸೂರು

ಅವಧಿ ಮೀರಿದ ಮದ್ಯ ನಾಶಪಡಿಸಿದ ಅಧಿಕಾರಿಗಳು

ಮಂಜುನಾಥ ತಿಮ್ಮಯ್ಯ

ಪ್ರಮುಖ ಮುಖ್ಯಾಂಶಗಳು

  • ಅಬಕಾರಿ ಇಲಾಖೆಯ ಅಧಿಕಾರಿಗಳ ಕಾರ್ಯಾಚರಣೆ
  • ಬಿಯರ್ , ವೈನ್ ನಾಶ
ಮೈಸೂರು: ಅವಧಿ ಮೀರಿದ ಹಾಗೂ ದೀರ್ಘಕಾಲದಿಂದ ಮಾರಾಟವಾಗದೆ ಉಳಿದಿದ್ದ ಮದ್ಯವನ್ನು ನಾಶ ಪಡಿಸುವ ಕಾರ್ಯಾಚರಣೆಯನ್ನು ಅಬಕಾರಿ ಇಲಾಖೆ ಗುರುವಾರ ಕೈಗೊಂಡಿತ್ತು.
ಅಬಕಾರಿ ಉಪ ಅಧೀಕ್ಷಕ ಎಲ್.ಬಿ.ವಿಕ್ರಂ, ಕೆಎಸ್‌ಬಿಸಿಎಲ್ ಲಿಕ್ಕರ್ ಡಿಪೋ ಹಾಗೂ ಮೈಸೂರು ಉಪ ವಿಭಾಗದ ಅಧಿಕಾರಿಗಳ ನೇತೃತ್ವದಲ್ಲಿ ನಗರದ ಕೂರ್ಗಳ್ಳಿಯಲ್ಲಿರುವ ಕೆಎಸ್‌ಬಿಸಿಎಲ್ ಲಿಕ್ಕರ್ ಡಿಪೋ ಮೈಸೂರು-1 ಮತ್ತು ಮೈಸೂರು-2ರಲ್ಲಿ ನಾಶ ಪ್ರಕ್ರಿಯೆ ನಡೆಯಿತು.
ವಿವಿಧ ಬ್ರಾೃಂಡ್‌ಗಳ ಅವಧಿ ಮೀರಿದ 929 ರೆಡಿ ಪ್ಯಾಕ್‌ಗಳ (8,870 ಲೀಟರ್) ಬಿಯರ್ ಹಾಗೂ ಬಹುದಿನಗಳಿಂದ ಮಾರಾಟವಾಗದೇ ಉಳಿದಿದ್ದ 138 ರೆಡಿ ಪ್ಯಾಕ್‌ಗಳ (1,216 ಲೀಟರ್) ವೈನ್ ನಾಶಪಡಿಸಲಾಯಿತು.
 ನಾಶಪಡಿಸಲಾದ ಮದ್ಯದ ಒಟ್ಟಾರೆ ಮೌಲ್ಯ ಸುಮಾರು 24 ಲಕ್ಷ ರೂಪಾಯಿ.
ಕೆಎಸ್‌ಬಿಸಿಎಲ್ ಮೈಸೂರು-1 ಡಿಪೋದ ಮಳಿಗೆ ವ್ಯವಸ್ಥಾಪಕ ಡಿ.ಕೆ.ವೆಂಕಟೇಶ್, ಮೈಸೂರು-2 ಡಿಪೋದ ಮಳಿಗೆ ವ್ಯವಸ್ಥಾಪಕ ಎಂ.ಆರ್.ಯೋಗೇಶ್, ಅಬಕಾರಿ ನಿರೀಕ್ಷಕರಾದ ನಂದಿತಾ, ಎಸ್.ಪಿ.ರಾಧಾ, ಅಬಕಾರಿ ಉಪ ನಿರೀಕ್ಷಕ ಆನಂದ್ ಸೇರಿದಂತೆ ಅಬಕಾರಿ ಇಲಾಖೆ ಮತ್ತು ಡಿಪೋ ಸಿಬ್ಬಂದಿ ಉಪಸ್ಥಿತರಿದ್ದರು.