ಎಲ್ಲ ವಿದ್ಯಾರ್ಥಿಗಳಿಗೆ ಉಚಿತ ಬಸ್ ಪಾಸ್ ವಿಸ್ತರಿಸಿ ಸರ್ಕಾರ ಆದೇಶ ಹೊರಡಿಸಿರುವುದಕ್ಕೆ ಎನ್‌ಎಸ್‌ಯುಐನಿಂದ ನಗರದಲ್ಲಿ ಸಿಹಿ ಹಂಚಿ ಸಂಭ್ರಮಾಚರಣೆ ಮಾಡಲಾಯಿತು. ಎನ್.ಮನೋಜ್ ಕುಮಾರ್,ರಜತ್ ಅರ್.ಅಭಯ್, ಇಬ್ರಾಹಿಂ ಪಾಷ, ಹರ್ಷವರ್ಧನ್ ಇತರರು ಇದ್ದರು.  
ಮೈಸೂರು

ಉಚಿತ ಬಸ್‌ಪಾಸ್ ವಿಸ್ತರಣೆಗೆ ಎನ್‌ಎಸ್‌ಯುಐಯಿಂದ ಸಿಹಿ ಹಂಚಿ ಸಂಭ್ರಮಾಚರಣೆ

ಪ್ರಮುಖ ಮುಖ್ಯಾಂಶಗಳು

  • ಎಲ್ಲ ವಿದ್ಯಾರ್ಥಿಗಳಿಗೂ ಉಚಿತ ಬಸ್ ಪಾಸ್ ಘೋಷಿಸಿದ್ದು, ವಿದ್ಯಾರ್ಥಿಗಳ ಬಗ್ಗೆ ಕಾಂಗ್ರೆಸ್ ಗೆ ಇರುವ ಕಾಳಜಿ ತೋರಿಸುತ್ತದೆ
  • ಎಲ್ಲರಿಗೂ ಯೋಜನೆ ವಿಸ್ತರಿಸುವ ಮೂಲಕ ಸರ್ಕಾರ ಮತ್ತೊಂದು ಕೊಡುಗೆ ನೀಡಿದೆ
ಮೈಸೂರು:ವಿದ್ಯಾರ್ಥಿಗಳಿಗೆ ಉಚಿತ ಬಸ್‌ಪಾಸ್ ವಿಸ್ತರಿಸಿರುವುದಕ್ಕೆ ಭಾರತೀಯ ರಾಷ್ಟ್ರೀಯ ವಿದ್ಯಾರ್ಥಿ ಒಕ್ಕೂಟ (ಎನ್‌ಎಸ್‌ಯುಐ)ದಿಂದ ನಗರದಲ್ಲಿ ಸಿಹಿ ಹಂಚಿ ಸಂಭ್ರಮಾಚರಣೆ ಮಾಡಲಾಯಿತು.
ನಗರದ ಬಸ್ ನಿಲ್ದಾಣದಲ್ಲಿ ವಿದ್ಯಾರ್ಥಿಗಳಿಗೆ ಉಚಿತ ಬಸ್ ಪಾಸ್ ಅರ್ಜಿ ಹಾಗೂ ಸಿಹಿ ವಿತರಿಸಿದ ಬಳಿಕ ಮಾತನಾಡಿದ ಒಕ್ಕೂಟದ ನಗರ ಅಧ್ಯಕ್ಷ ಎನ್.ಮನೋಜ್ ಕುಮಾರ್, ಡಿ.ಕೆ.ಶಿವಕುಮಾರ್ ಮುಖ್ಯಮಂತ್ರಿಯಾಗಿ ಅಧಿಕಾರ ವಹಿಸಿಕೊಂಡ ಬಳಿಕ ಮೊಟ್ಟ ಮೊದಲನೆಯದಾಗಿ ಎಲ್ಲ ವಿದ್ಯಾರ್ಥಿಗಳಿಗೂ ಉಚಿತ ಬಸ್ ಪಾಸ್ ಘೋಷಿಸಿದ್ದು, ವಿದ್ಯಾರ್ಥಿಗಳ ಬಗ್ಗೆ ಅವರಿಗೆ ಇರುವ ಕಾಳಜಿ ತೋರಿಸುತ್ತದೆ ಎಂದರು.
ಯಾವುದೇ ಜಾತಿ, ಮತ ಬೇಧವಿಲ್ಲದೆ ಎಲ್ಲರಿಗೂ ಯೋಜನೆ ವಿಸ್ತರಿಸುವ ಮೂಲಕ ಸರ್ಕಾರ ಮತ್ತೊಂದು ಕೊಡುಗೆ ನೀಡಿದೆ. ಗ್ಯಾರಂಟಿ ಯೋಜನೆಗಳು ಮಹಿಳೆಯರಿಗೆ ಸೀಮಿತವಾಗಿವೆ ಎಂದು ಕೆಲವರು ಟೀಕಿಸುತ್ತಿದ್ದರು. ಇದೀಗ ಎಲ್ಲ ವಿದ್ಯಾರ್ಥಿಗಳಿಗೆ ಯೋಜನೆ ವಿಸ್ತರಿಸಿರುವುದು ಸಂತಸದ ಸಂಗತಿ ಎಂದರು. 
ಎನ್‌ಎಸ್‌ಯುಐ ಉಪಾಧ್ಯಕ್ಷ ರಜತ್ ಅರ್.ಅಭಯ್, ಪ್ರಧಾನ ಕಾರ್ಯದರ್ಶಿ ನಹುಷ್, ಮುಖಂಡರಾದ ಇಬ್ರಾಹಿಂ ಪಾಷ, ಹರ್ಷವರ್ಧನ್, ಅಮರ್ತ ಗಣೇಶ್, ಸ್ಟಾಲಿನ್, ಯೋಗೇಶ್, ಗೌರವ್ ಇತರರು ಇದ್ದರು.