ರಾಜನಬಿಳಗೂಲಿ ಗ್ರಾಮದಲ್ಲಿ ಬೆಟ್ಟದಪುರದ ಎಸ್‌ಎಂಎಸ್ ಪದವಿ ಪೂರ್ವ ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನೆ ಘಟಕ ಹಮ್ಮಿಕೊಂಡಿದ್ದ ವಾರ್ಷಿಕ ವಿಶೇಷ ಶಿಬಿರದ ಸಮಾರೋಪ ಸಮಾರಂಭದಲ್ಲಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲ ಜಲೇಂದ್ರ ಮಾತನಾಡಿದರು. ಪ್ರಾಂಶುಪಾಲ ಎಸ್.ಕೆ ರಾಜು, ಶಿಬಿರಾಧಿಕಾರಿಗಳಾದ ಯಶವಂತ ಕುಮಾರ್ ಇತರರು ಇದ್ದರು.  NSS
ಮೈಸೂರು

ಸಮಾಜ ಸೇವೆಗಾಗಿ ಸಮಯ ಮೀಸಲಿಡಿ

ಪ್ರಾಂಶುಪಾಲ ಜಲೇಂದ್ರ ಸಲಹೆ . ಎನ್ನೆಸ್ಸೆಸ್ ವಿಶೇಷ ವಾರ್ಷಿಕ ಶಿಬಿರ ಸಮಾರೋಪ

ಬೆಟ್ಟದಪುರ: ಸಾಮಾಜಿಕ ಒಡನಾಟದಿಂದ ವ್ಯಕ್ತಿತ್ವ ವಿಕಸನವಾಗುತ್ತದೆ ಎಂದು ಬೆಟ್ಟದಪುರ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲ ಜಲೇಂದ್ರ ಹೇಳಿದರು.

ಪಿರಿಯಾಪಟ್ಟಣ ತಾಲೂಕಿನ ರಾಜನಬಿಳಗೂಲಿ ಗ್ರಾಮದಲ್ಲಿ ಬೆಟ್ಟದಪುರದ ಎಸ್‌ಎಂಎಸ್ ಪದವಿ ಪೂರ್ವ ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನೆ ವಾರ್ಷಿಕ ವಿಶೇಷ ಶಿಬಿರದ ಸಮಾರೋಪ ಸಮಾರಂಭದಲ್ಲಿ ಮಾತನಾಡಿದರು. ಯುವಜನರು ತಮ್ಮಲ್ಲಿರುವ ಪ್ರತಿಭೆ, ಶಕ್ತಿ ಮತ್ತು ಸಮಯವನ್ನು ಸಮಾಜದ ಅಭಿವೃದ್ಧಿಗಾಗಿ

ಬಳಸಬೇಕು. ಇದಕ್ಕಾಗಿ ಸ್ವಾರ್ಥವನ್ನು ಬದಿಗಿಟ್ಟು ಪರರ ನೋವಿಗೆ ಸ್ಪಂದಿಸಬೇಕು ಎಂದರು. ಸ್ಥಳೀಯ ಸೇವಾ ಕಾರ್ಯಗಳಲ್ಲಿ ಭಾಗಿಯಾಗುವ ಹವ್ಯಾಸ ರೂಢಿಸಿಕೊಂಡರೆ ಮುಂದೊಂದು ದಿನ ರಾಷ್ಟ್ರದ ಪ್ರಗತಿಗೆ ಕೊಡುಗೆ ನೀಡಬಹುದು. ಇದಕ್ಕೆ ಎನ್ನೆಸ್ಸೆಸ್ ಶಿಬಿರಗಳು ಪ್ರೇರಣೆ ನೀಡಲಿವೆ ಎಂದರು. ಎನ್ನೆಸ್ಸೆಸ್ ಸ್ವಯಂ ಸೇವಕರು ಸಮಾಜ ಸುಧಾರಣೆಯ ವಿಶೇಷ ಅಂಗವಾದರೆ ಒಂದು ಶಿಕ್ಷಣ ಸಂಸ್ಥೆ ಮಾದರಿಯಾಗುತ್ತದೆ ಎಂದವರು ನುಡಿದರು.

ಆತ್ಮವಿಶ್ವಾಸ ಮೂಡಿಸಿವೆ: ಎಸ್‌ಎಂಎಸ್ ವಿದ್ಯಾಸಂಸ್ಥೆ ಕಾರ್ಯಾಧ್ಯಕ್ಷ ಬಿ.ವಿ. ಮಂಜುನಾಥ್ ಮಾತನಾಡಿ, ಶಿಬಿರದ ಏಳು ದಿನಗಳಲ್ಲಿ ವಿದ್ಯಾರ್ಥಿಗಳು ಹಲವು ಸಮಾಜಮುಖಿ ಚಟುವಟಿಕೆಗಳನ್ನು ನಿರ್ವಹಿಸಿದ್ದಾರೆ. ಇವುಗಳು ಆತ್ಮವಿಶ್ವಾಸ, ಪರಸ್ಪರ ಸಹಕಾರ ಹಾಗೂ ಸಮುದಾಯದೊಂದಿಗೆ ಬೆರೆಯುವ ಮನೋಭಾವವನ್ನು ರೂಢಿಸಿವೆ. ವಿದ್ಯಾರ್ಥಿಗಳು ಶಿಬಿರದಲ್ಲಿ ಕಲಿತ ಜೀವನ ಮೌಲ್ಯಗಳನ್ನು ತಮ್ಮ ದೈನಂದಿನ ಬದುಕಿನಲ್ಲಿ ಅಳವಡಿಸಿಕೊಳ್ಳಬೇಕು ಎಂದರು.

ಪ್ರಾಂಶುಪಾಲ ಎಸ್.ಕೆ ರಾಜು, ಶಿಬಿರಾಧಿಕಾರಿಗಳಾದ ಯಶವಂತ ಕುಮಾರ್, ಸತೀಶ್, ಸಹ ಶಿಬಿರಾಧಿ ಕಾರಿಗಳಾದ ಕುಬೇರ್ ಬಸವರಾಜ್, ಹರ್ಷಿತಾ, ಶಿಕ್ಷಕರಾದ ನಿತಿನ್, ಯೋಗಾನಂದ, ಮುಖಂಡರಾದ ರಾಜೇಗೌಡ, ಜಯರಾಮೇಗೌಡ, ಮಹದೇವ, ಮಂಜು, ಚಂದ್ರಶೇಖರ, ಗಂಗಾಧರ, ರಾಮೇಗೌಡ, ಸ್ವಾಮಿಗೌಡ ಇದ್ದರು.