ಬಾಲಕಿಯರ ವಿಭಾಗದ ಬಸವನಗುಡಿ ಅಕ್ವಾಟಿಕ್ ಸೆಂಟರ್ ಮತ್ತು ಸೀವರ್ಲ್ಡ್ ತಂಡಗಳ ನಡುವಿನ ಲೀಗ್ ಪಂದ್ಯ.
- ಸರಸ್ವತಿಪುರಂನಲ್ಲಿರುವ ಮೈಸೂರು ವಿಶ್ವವಿದ್ಯಾಲಯದ ಈಜುಕೊಳದಲ್ಲಿ ರಾಜ್ಯ ಮಟ್ಟದ ಎನ್‌ಆರ್‌ಜೆ ಜೂನಿಯರ್ ವಾಟರ್ ಪೋಲೊ ಚಾಂಪಿಯನ್‌ಷಿಪ್ ಆಯೋಜನೆ
- ಎಂಟು ವರ್ಷಗಳ ಬಳಿಕ ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ರಾಜ್ಯಮಟ್ಟದ ‘ವಾಟರ್ ಪೋಲೊ’ ಕ್ರೀಡಾಕೂಟ ನಡೆಯುತ್ತಿದ್ದು, ಕರ್ನಾಟಕ ಈಜು ಸಂಸ್ಥೆಯಲ್ಲಿ ನೋಂದಾಯಿತ ವಿವಿಧ ಕ್ಲಬ್‌ಗಳ ಒಂಬತ್ತು ತಂಡಗಳು ಭಾಗವಹಿಸಿವೆ
- ಬಾಲಕಿಯರ ವಿಭಾಗದಲ್ಲಿ ‘ಬಸವನಗುಡಿ ಅಕ್ವಾಟಿಕ್ ಸೆಂಟರ್’ ಹಾಗೂ ‘ನೆಟ್ಟಕಲ್ಲಪ್ಪ ಅಕ್ವಾಟಿಕ್ ಸೆಂಟರ್’ ತಂಡಗಳು ಅಂತಿಮ ಹಂತ ಪ್ರವೇಶಿಸಿವೆ
ಮೈಸೂರು: ನೀರಿನಲ್ಲಿ ಚಾಕಚಕ್ಯ ಪ್ರದರ್ಶನ ನೀಡಿದ ‘ಸ್ಟಾರ್ ಅಕ್ವಾಟಿಕ್ಸ್’ ಹಾಗೂ ‘ನೆಟ್ಟಕಲ್ಲಪ್ಪ ಅಕ್ವಾಟಿಕ್ ಸೆಂಟರ್’ ತಂಡಗಳು ರಾಜ್ಯ ಮಟ್ಟದ ಎನ್‌ಆರ್‌ಜೆ ಜೂನಿಯರ್ ‘ವಾಟರ್ ಪೋಲೊ ಚಾಂಪಿಯನ್‌ಷಿಪ್’ ಸ್ಪರ್ಧೆಯ ಬಾಲಕರ ವಿಭಾಗದಲ್ಲಿ ಫೈನಲ್ ಪ್ರವೇಶಿಸಿವೆ.
ಬಾಲಕಿಯರ ವಿಭಾಗದಲ್ಲಿ ‘ಬಸವನಗುಡಿ ಅಕ್ವಾಟಿಕ್ ಸೆಂಟರ್’ ಹಾಗೂ ‘ನೆಟ್ಟಕಲ್ಲಪ್ಪ ಅಕ್ವಾಟಿಕ್ ಸೆಂಟರ್’ ತಂಡಗಳು ಅಂತಿಮ ಹಂತ ಪ್ರವೇಶಿಸಿವೆ. ನಗರದ ಸರಸ್ವತಿಪುರಂನಲ್ಲಿರುವ ಮೈಸೂರು ವಿಶ್ವವಿದ್ಯಾಲಯದ ಈಜುಕೊಳದಲ್ಲಿ ನ.16 ರಂದು ಬೆಳಗ್ಗೆ 10 ಗಂಟೆಗೆ ಫೈನಲ್ ಪಂದ್ಯ ನಡೆಯಲಿದೆ.
ಕರ್ನಾಟಕ ರಾಜ್ಯ ಈಜು ಸಂಸ್ಥೆ ವತಿಯಿಂದ ಮೈಸೂರು ವಿಶ್ವವಿದ್ಯಾಲಯದ ಈಜುಕೊಳದಲ್ಲಿ ಶನಿವಾರ ನಡೆದ ಬಾಲಕರ ವಿಭಾಗದ ಮೊದಲ ಸೆಮಿಫೈನಲ್ ಪಂದ್ಯದಲ್ಲಿ ಸ್ಟಾರ್ ಅಕ್ವಾಟಿಕ್ಸ್ ತಂಡವು 14-8 ಗೋಲುಗಳಿಂದ ಸ್ವಿಮ್‌ಲೈಫ್ ತಂಡವನ್ನು ಸೋಲಿಸಿತು. ಮತ್ತೊಂದು ಸೆಮಿಫೈನಲ್‌ನಲ್ಲಿ ನೆಟ್ಟಕಲ್ಲಪ್ಪ ಅಕ್ವಾಟಿಕ್ ಸೆಂಟರ್ ತಂಡ 10-2 ಗೋಲುಗಳಿಂದ ಬಸವನಗುಡಿ ಅಕ್ವಾಟಿಕ್ ಸೆಂಟರ್ ತಂಡದ ವಿರುದ್ಧ ಸುಲಭ ಗೆಲುವು ದಾಖಲಿಸಿತು.
ಬಾಲಕಿಯರ ವಿಭಾಗದ ಮೊದಲ ಸೆಮಿಫೈನಲ್ ಪಂದ್ಯದಲ್ಲಿ ಬಸವನಗುಡಿ ಅಕ್ವಾಟಿಕ್ ಸೆಂಟರ್ ತಂಡ 20-8 ಗೋಲುಗಳಿಂದ ಸ್ವಿಮ್‌ಲೈಫ್ ತಂಡವನ್ನು ಮಣಿಸಿದರೆ, ಮತ್ತೊಂದು ಸೆಮಿಫೈನಲ್‌ನಲ್ಲಿ ನೆಟ್ಟಕಲ್ಲಪ್ಪ ಅಕ್ವಾಟಿಕ್ ಸೆಂಟರ್ ತಂಡ 19-4 ಗೋಲುಗಳಿಂದ ಸೀವರ್ಲ್ಡ್ ತಂಡದ ವಿರುದ್ಧ ಜಯ ಪಡೆಯಿತು.
ಎಂಟು ವರ್ಷಗಳ ಬಳಿಕ ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ರಾಜ್ಯಮಟ್ಟದ ‘ವಾಟರ್ ಪೋಲೊ’ ಕ್ರೀಡಾಕೂಟ ನಡೆಯುತ್ತಿದ್ದು, ಕರ್ನಾಟಕ ಈಜು ಸಂಸ್ಥೆಯಲ್ಲಿ ನೋಂದಾಯಿತ ವಿವಿಧ ಕ್ಲಬ್‌ಗಳ ಒಂಬತ್ತು ತಂಡಗಳು ಭಾಗವಹಿಸಿವೆ.
ಇದಕ್ಕೂ ಮುನ್ನ ನಡೆದ ಉದ್ಘಾಟನಾ ಕಾರ್ಯಕ್ರಮದಲ್ಲಿ ಮೈಸೂರು ವಿವಿ ದೈಹಿಕ ಶಿಕ್ಷಣ ವಿಭಾಗದ ನಿವೃತ್ತ ನಿರ್ದೇಶಕ ಡಾ.ಸಿ.ಕೃಷ್ಣ, ಹಿರಿಯ ಈಜು ತರಬೇತುದಾರ ಎಂ.ಪಿ.ನಾಭಿರಾಜ್, ಹಿರಿಯ ವಾಟರ್ ಪೋಲೊ ಆಟಗಾರ ಜಯಕುಮಾರ್, ಕರ್ನಾಟಕ ಈಜು ಸಂಸ್ಥೆಯ ಜಂಟಿ ಕಾರ್ಯದರ್ಶಿಗಳಾದ ಬಿ.ರಮ್ಯಾ, ಎಸ್.ಸುಂದರೇಶ್, ಮೈಸೂರು ಜಿಲ್ಲಾ ಈಜು ಸಂಸ್ಥೆ ಅಧ್ಯಕ್ಷ ಅಮರ್‌ನಾಥ್, ಕಾರ್ಯದರ್ಶಿ ಸಂಜಯ್ ವಿ.ದೇವ್ ಇತರರಿದ್ದರು.