ಆಟೋರಿಕ್ಷಾ 
ಮೈಸೂರು

ಆಟೋಗಳ ಪರ್ಮಿಟ್‌ಗಿಲ್ಲ ಕಡಿವಾಣ

ಮಂಜುನಾಥ ತಿಮ್ಮಯ್ಯ

ಪ್ರಮುಖ ಮುಖ್ಯಾಂಶಗಳು

  • ಜಿಲ್ಲಾಡಳಿತದ ವಿರುದ್ಧ ಚಾಲಕರ ಆಕ್ರೋಶ ಪ್ರತಿಭಟನೆ ಎಚ್ಚರಿಕೆ

ಮೈಸೂರು: 

ರಾಜ್ಯದೆಲ್ಲೆಡೆ ಬೈಕ್ ಟ್ಯಾಕ್ಸಿ ತಪಾಸಣೆ ಮಾಡುತ್ತಿದ್ದು, ಆದರೆ ನಗರದಲ್ಲಿ ಕಾರ್ಯಾಚರಣೆ ನಡೆಯುತ್ತಿಲ್ಲ. ಜತೆಗೆ ಯಾವುದೇ ಮಿತಿಯಿಲ್ಲದೆ ಆಟೋಗಳಿಗೆ ಪರ್ಮಿಟ್ ನೀಡಲಾಗುತ್ತಿದೆ ಎಂದು ಆಟೋರಿಕ್ಷಾ ಸರ್ವೀಸ್ ಸಂಘಟನೆ ದೂರಿದೆ.

ಈ ನಿಟ್ಟಿನಲ್ಲಿ ಅಗತ್ಯ ಕ್ರಮ ವಹಿಸಲು ಆ.25ರ ವರೆಗೆ ಗಡುವು ನೀಡಲಾಗಿದೆ. ಬೇಡಿಕೆ ಈಡೇರದಿದ್ದಲ್ಲಿ ಆ.26ರಿಂದ 15 ದಿನಗಳ ಕಾಲ ಆಟೋರಿಕ್ಷಾಗಳಿಗೆ ಕಪ್ಪು ಬಾವುಟ ಕಟ್ಟಿಕೊಂಡು ಕಾರ್ಯನಿರ್ವಹಿಸಿ ಸಂಬಂಧಿಸಿದವರ ಗಮನ ಸೆಳೆಯಲಾಗುವುದು ಎಂದು ಸಂಘಟನೆಯ ಸಾಯಿಬಾಬ ನಾಗರಾಜ್  ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಜಿಲ್ಲಾಡಳಿತ ಆಟೋ ಚಾಲಕರನ್ನು ಸಂಪೂರ್ಣವಾಗಿ ನಿರ್ಲಕ್ಷೃ  ಮಾಡುತ್ತಿದೆ. ನಗರದಲ್ಲಿ ಹೊರ ರಾಜ್ಯ ಆಟೋಗಳು ಹೆಚ್ಚಾಗಿ ಓಡಾಡುತ್ತಿದೆ. ಅಗ್ರಿಗೇಟ್ ಆ್ಯಪ್ ಆಧಾರಿತ ಸಂಸ್ಥೆಗಳು ಸರ್ಕಾರ ನಿಗದಿ ಪಡಿಸಿರುವ ಬಾಡಿಗೆ ಮೊತ್ತವನ್ನೂ ಕೊಡುತ್ತಿಲ್ಲ. ಈ ಬಗ್ಗೆ ಅಧಿಕಾರಿಗಳು ಗಮನಕ್ಕೆ ತಂದರೂ ಯಾವುದೇ ಕ್ರಮವಾಗಿಲ್ಲ ಎಂದು ದೂರಿದರು.
ನಿರಂತರ ಪರ್ಮಿಟ್ ನೀಡುತ್ತಿರುವುದರಿಂದ ಆಟೋಗಳ ಸಂಖ್ಯೆ ಹೆಚ್ಚಾಗಿದೆ. ನಗರದ ಜನಸಂಖ್ಯೆಗೆ ಅನುಗುಣವಾಗಿ ಆಟೋಗೆ ಅನುಮತಿ ನೀಡಲು ತಿಳಿಸಿದರೂ ಪ್ರಯೋಜನವಾಗಿಲ್ಲ. ಮುಕ್ತ ಪರವಾನಗಿ ಹಾಗೂ ವೈಟ್ ಬೋರ್ಡ್ ಅನುಮತಿ ನಿಲ್ಲಿಸದಿದ್ದರೆ ಹೋರಾಟ ಕೈಗೊಳ್ಳುವುದು ಅನಿವಾರ್ಯವಾಗಲಿದೆ ಎಂದರು.
ವಿವಿಧ ಆಟೋ ಚಾಲಕ ಸಂಘಟನೆ ಮುಖಂಡರಾದ ಸೌಮ್ಯಾ, ಶಿವಕುಮಾರ್, ವೆಂಕಟೇಶ್, ಸೋಮಶೇಖರ್ ಇದ್ದರು.