ಹುಣಸೂರು ತಾಲೂಕಿನ ಹನಗೋಡು ಹೋಬಳಿ ವ್ಯಾಪ್ತಿಯ ಹುಣಸೆಗಾಲ ಗ್ರಾಮದ ಗೇಟ್ ಬಳಿ ಮದ್ಯದಂಗಡಿ ತೆರೆಯಲು ಅವಕಾಶ ನೀಡಬಾರದೆಂದು ಆಗ್ರಹಿಸಿ ಗ್ರಾಮಸ್ಥರು ಅಬಕಾರಿ ಅಧಿಕಾರಿಗಳಿಗೆ ಮನವಿ ಸಲ್ಲಿಸಿದರು.  
ಮೈಸೂರು

ಮದ್ಯದಂಗಡಿ ತೆರೆಯಲು ಅವಕಾಶ ಬೇಡ

ಪ್ರಮುಖ ಮುಖ್ಯಾಂಶಗಳು

  • ಹುಣಸೆಗಾಲ ಗ್ರಾಮಸ್ಥರಿಂದ ಅಬಕಾರಿ ಅಧಿಕಾರಿಗಳಿಗೆ ಮನವಿ
ಹುಣಸೂರು : ತಾಲೂಕಿನ  ಹನಗೋಡು ಹೋಬಳಿ ವ್ಯಾಪ್ತಿಯ ಹುಣಸೆಗಾಲ ಗ್ರಾಮದ ಗೇಟ್ ಬಳಿ ಮದ್ಯದಂಗಡಿ ತೆರೆಯಲು ಅವಕಾಶ ನೀಡಬಾರದೆಂದು ಆಗ್ರಹಿಸಿ ಗ್ರಾಮಸ್ಥರು ಅಬಕಾರಿ ಅಧಿಕಾರಿಗಳಿಗೆ ಮನವಿ ಸಲ್ಲಿಸಿದರು. 
ಈ ವೇಳೆ ಮಾತನಾಡಿದ ಗ್ರಾಮದ ಪುಟ್ಟಸ್ವಾಮಿಗೌಡ, ಗ್ರಾಮದ ಗೇಟ್‌ಬಳಿ ಮದ್ಯದಂಗಡಿ ತೆರೆಯಲು ಕಟ್ಟಡ ನಿರ್ಮಾಣ ಮಾಡಲಾಗುತ್ತಿದೆ. ಭೂಮಾಲೀಕರಿಂದ ಕೋರಿದ್ದ ನಿರಪೇಕ್ಷಣಾ ಪತ್ರಕ್ಕಾಗಿ ಗ್ರಾ.ಪಂ.ಗೆ ನೀಡಿದ್ದ ಅರ್ಜಿಯನ್ನು ಪಂಚಾಯಿತಿ ಪಿಡಿಒ ಗ್ರಾಮಸ್ಥರ ಅಭಿಪ್ರಾಯ ಸಂಗ್ರಹಿಸದೇ ಪತ್ರ ನೀಡಲು ಮುಂದಾಗಿರುವುದು ಖಚಿತವಾಗಿದೆ. ಗ್ರಾಮದಲ್ಲಿ ಸುಮಾರು 300 ಮನೆಗಳಿದ್ದು, ಎಲ್ಲರೂ ವ್ಯವಸಾಯಗಾರರು. ನಮ್ಮ ಗ್ರಾಮದಿಂದ ಸುಮಾರು 100 ರಿಂದ 150 ಮಕ್ಕಳು ಪ್ರತಿದಿನ ಶಾಲಾ ಕಾಲೇಜಿಗೆ ಹೋಗಲು ಹುಣಸೇಗಾಲ ಗ್ರಾಮದ ಗೇಟ್ ಬಳಿ ಹೋಗುತ್ತಾರೆ, ಇದರಿಂದ ಇಡೀ ಪರಿಸರ ಹಾಳಾಗುತ್ತದೆ ಮತ್ತು ವಿದ್ಯಾರ್ಥಿಗಳ ಮೇಲೆ ಪರಿಣಾಮ ಬೀರುವ ಸಾಧ್ಯತೆಯಿದೆ. ಯಾವುದೇ ಕಾರಣಕ್ಕೂ ಮದ್ಯದಂಗಡಿ ತೆರೆಯಲು ಅವಕಾಶ ನೀಡಬಾರದೆಂದು ಒತ್ತಾಯಿಸಿದರು. ಅಲ್ಲದೇ ತಾ.ಪಂ.ಕಾರ್ಯ ನಿರ್ವಹಣಾದಿಕಾರಿಗಳಿಗೂ ಮನವಿ ಸಲ್ಲಿಸಲಾಗುವುದೆಂದರು. 
ಮನವಿ ಸಲ್ಲಿಕೆ ವೇಳೆ ಗ್ರಾಮದ ವೆಂಕಟೇಶ್‌ಗೌಡ, ಮಂಜುನಾಥ್, ಪಾಂಡು, ಚಂದ್ರಶೇಖರ, ದಯಾನಂದ, ನಂಜು, ಪರಮೇಶ್, ರವಿ, ಶ್ರೀನಿವಾಸ್, ರಘು, ರುದ್ರೇಗೌಡ, ಇತರರು ಹಾಜರಿದ್ದರು.