ತಿ.ನರಸೀಪುರ ಪಟ್ಟಣದ ಆಲಗೂಡು ಬಳಿಯಿರುವ ಎನ್‌ಕೆಎಫ್ ಪಬ್ಲಿಕ್ ಶಾಲೆಯಲ್ಲಿ ಆಯೋಜಿಸಲಾಗಿದ್ದ ವಾರ್ಷಿಕೋತ್ಸವವನ್ನು ವಾಟಾಳು ಮಠದ ಸಿದ್ದಲಿಂಗ ಶಿವಾಚಾರ್ಯ ಸ್ವಾಮೀಜಿ ಉದ್ಘಾಟಿಸಿದರು. ಎ.ಆರ್.ಕೃಷ್ಣಮೂರ್ತಿ, ಅಬ್ದುಲ್ ಅಜೀಜ್, ಎನ್.ಕೆ. ಫರೀದ್, ಸಯೀದ್ ಅಹಮ್ಮದ್, ಎಸ್.ಸಿ.ಶಿವಮೂರ್ತಿ, ಎಸ್.ಚಂದ್ರಶೇಖರ್ ಇತರರು ಇದ್ದರು. 
ಮೈಸೂರು

ಎನ್‌ಕೆಎಫ್ ಶಾಲೆಯಿಂದ ಶಿಕ್ಷಣ ಕ್ಷೇತ್ರಕ್ಕೆ ಉತ್ತಮ ಸೇವೆ

ಪ್ರಮುಖ ಮುಖ್ಯಾಂಶಗಳು

  • ಶಾಸಕ ಎ.ಆರ್.ಕೃಷ್ಣಮೂರ್ತಿ ಮೆಚ್ಚುಗೆ
ತಿ.ನರಸೀಪುರ : ಗ್ರಾಮೀಣ ಭಾಗದ ಮಕ್ಕಳಿಗೆ ಉತ್ತಮವಾದ ಶಿಕ್ಷಣ ಕಲ್ಪಿಸಲು ಆಧುನಿಕತೆಗೆ ತಕ್ಕಂತೆ ಎನ್‌ಕೆಎಫ್ ಶಾಲೆಯು ವಿದ್ಯಾಭ್ಯಾಸಕ್ಕೆ ಪೂರಕವಾದ ವಾತಾವರಣವನ್ನು ಸೃಷ್ಠಿಸಿ, ಶಿಕ್ಷಣ ಕ್ಷೇತ್ರದಲ್ಲಿ ಸೇವೆಯನ್ನು ನೀಡುತ್ತಿರುವುದು ಶ್ಲಾಘನೀಯ ಎಂದು ಕೊಳ್ಳೇಗಾಲ ವಿಧಾನಸಭಾ ಕ್ಷೇತ್ರದ ಶಾಸಕ ಎ.ಆರ್.ಕೃಷ್ಣಮೂರ್ತಿ ಮೆಚ್ಚುಗೆ ವ್ಯಕ್ತಪಡಿಸಿದರು.
ಪಟ್ಟಣದ ರಾಷ್ಟ್ರೀಯ ಹೆದ್ದಾರಿ ಆಲಗೂಡು ಬಳಿಯಿರುವ ಎನ್‌ಕೆಎಫ್ ಪಬ್ಲಿಕ್ ಶಾಲೆಯ ಆವರಣದಲ್ಲಿ ಇತ್ತೀಚೆಗೆ ಆಯೋಜಿಸಲಾಗಿದ್ದ, 17ನೇ ವರ್ಷದ ಶಾಲಾ ವಾರ್ಷಿಕೋತ್ಸವ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.
ಗ್ರಾಮೀಣ ಪ್ರದೇಶದ ವ್ಯಾಪ್ತಿಯಲ್ಲಿರುವ ಶಾಲೆ ಗುಣಾತ್ಮಕ ಶಿಕ್ಷಣ ನೀಡುತ್ತಿದ್ದು, ಪ್ರತಿಯೊಬ್ಬ ವಿದ್ಯಾರ್ಥಿಯು ಯಶಸ್ಸು ಸಾಧಿಸಬೇಕು ಎಂದರು.
ಮಕ್ಕಳ ಭವಿಷ್ಯ ರೂಪಿಸುವಲ್ಲಿ ಶಿಕ್ಷಕರು ಹಾಗೂ ಪಾಲಕರ ಪಾತ್ರ ಮಹತ್ವದ್ದಾಗಿದೆ, ಇಂದಿನ ಶಿಕ್ಷಣ ಕೇವಲ ಫಲಿತಾಂಶ ಬಯಸುವ ಮನೋಭಾವನೆ ಇರುವ ಪಾಲಕರಾಗಿದ್ದಾರೆ. ಆ ಮನೋಭಾವನೆ ಬದಲಾವಣೆಯಾಗಬೇಕು. ಮಕ್ಕಳಲ್ಲಿ ವಿವಿಧ ರೀತಿಯ ಪ್ರತಿಭೆಗಳು ಅಡಕವಾಗಿದ್ದು, ಅವುಗಳನ್ನು ಹುಡುಕುವ ಜವಾಬ್ದಾರಿ ಶಿಕ್ಷಕರ ಜಗೆ ಪಾಲಕರಿಗೂ ಬಹು ಮುಖ್ಯವಾಗಿರುತ್ತದೆ. ಮಕ್ಕಳ ಸಾಮರ್ಥ್ಯಕ್ಕೆ ತಕ್ಕಂತೆ ಅವರ ಬೇಕು-ಬೇಡಗಳನ್ನು ಅರಿತು ಉತ್ತಮ ಶಿಕ್ಷಣದ ಜತೆಗೆ ಸಂಸ್ಕಾರ ನೀಡಿದರೆ ಉತ್ತಮ ಸಮಾಜ ನಿರ್ಮಾಣ ಮಾಡಬಹುದಾಗಿದೆ. ಇಂದಿನ ಪಾಲಕರ ಮನೋಭಾವನೆ ಹೇಗಿದೆ ಎಂದರೆ ಪಠ್ಯ, ಪುಸ್ತಕ, ಪರೀಕ್ಷೆ ,ಫಲಿತಾಂಶ, ಪ್ರಮಾಣ ಪತ್ರ, ಇದಕ್ಕಷ್ಟೇ ಸೀಮಿತವಾಗಿದೆ. ಹಾಗಾಗಿ ಒಂದಷ್ಟು ಬದಲಾವಣೆಗಳನ್ನು ಪಾಲಕರು ಮಾಡಿಕೊಳ್ಳಬೇಕು ಎಂದು ಸಲಹೆ ನೀಡಿದರು.
ವಾಟಾಳು ಮಠದ ಸಿದ್ದಲಿಂಗಶಿ ವಾಚಾರ್ಯ ಮಹಾಸ್ವಾಮಿ ಮಾತನಾಡಿ, ಮಕ್ಕಳಿಗೆ ಪಠ್ಯದ ಜತೆಗೆ ಪಠ್ಯೇತರ ಚಟುವಟಿಕೆಗಳು ಸಹ ಅತೀ ಅಗತ್ಯ. ಹಾಗಾಗಿ ಶಾಲಾ ವಾರ್ಷಿಕೋತ್ಸವ ಕಾರ್ಯಕ್ರಮ ಮಕ್ಕಳಲ್ಲಿರುವ ಪ್ರತಿಭೆಯನ್ನು ಅನಾವರಣ ಮಾಡಲು ಅನುವು ಮಾಡಿಕೊಡುತ್ತದೆ, ಪಾಲಕರು ಮತ್ತು ಶಿಕ್ಷಕರು ಬಾಲ್ಯದಿಂದಲೇ ಮಕ್ಕಳಲ್ಲಿನ ಪ್ರತಿಭೆಯನ್ನು ಗುರುತಿಸಿ ಅದಕ್ಕೆ ತಕ್ಕಂತೆ ಪ್ರೋತ್ಸಾಹ ನೀಡಿದರೆ ದೇಶಕ್ಕೆ ಆಸ್ತಿಯಾಗಲಿದ್ದಾರೆ. ಆರೋಗ್ಯವಂತ ಸಮಾಜ ಕಟ್ಟುವಲ್ಲಿ ಮನೆ ಮತ್ತು ಶಾಲೆಗಳು ಪ್ರಧಾನ ಪಾತ್ರವಹಿಸಲಿವೆ.ಇಂದಿನ ಮಕ್ಕಳೇ ಮುಂದಿನ ಪ್ರಜೆಗಳು ಎಂಬುದನ್ನು ಮರೆಯಬಾರದು ಎಂದರು.
ಕ್ಷೇತ್ರ ಶಿಕ್ಷಣಾಧಿಕಾರಿ ಎಸ್.ಸಿ.ಶಿವಮೂರ್ತಿ, ಅಲ್ಪ ಸಂಖ್ಯಾತರ ವಿಭಾಗದ ಅಧ್ಯಕ್ಷ ಅಬ್ದುಲ್ ಅಜೀಜ್(ಅಜ್ಜು), ಪುರಸಭೆ ಮಾಜಿ ಸದಸ್ಯ ಅಹಮದ್ ಸೈಯೀದ್, ಮೊಹಮ್ಮದ್ ಆಯೂಬ್, ಜಹರಾ ಸುಲ್ತಾನ್, ಇನಾಯತ್, ಶಾಲೆಯ ಕಾರ್ಯದರ್ಶಿ ಜಹರಾ ಸುಲ್ತಾನ, ದಸಂಸ ಮುಖಂಡ ಆಲಗೂಡು ಚಂದ್ರಶೇಖರ್, ಮುಖ್ಯ ಶಿಕ್ಷಕಿ ಹೇಮಾ, ಶಿಕ್ಷಕಿಯರಾದ ಗೀತಾ, ನೂರ್ ಹಾಜಿರಾ, ರೇಖಾ, ಶಿಲ್ಪಶಶ್ರೀ, ರೇಖಾ, ರಶ್ಮಿ, ಶಿಲ್ಪಾ, ಅನಿತಾ, ಶೈಲಾ, ಪಲ್ಲವಿ, ಅರ್ಜುನ್ ಭಾನು, ರಕ್ಷಿತ, ನಾಗವೇಣಿ, ಪ್ರಿಯಾಂಕ, ಪದ್ಮಪ್ರಿಯ, ರಝಿಯಾ ಹಾಗೂ ಇತರರು ಇದ್ದರು.