ಪಟ್ಟಣದ ಭೈರವೇಶ್ವರ ಇಂಟರ್‌ನ್ಯಾಷನಲ್ ಶಿಕ್ಷಣ ಸಂಸ್ಥೆಯಲ್ಲಿ ಹೊಸ ವರ್ಷ ಮತ್ತು ಕ್ರಿಸ್ಮಸ್ ಆಚರಣೆ ಅಂಗವಾಗಿ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು. 
ಮೈಸೂರು

ಶ್ರೀ ಭೈರವೇಶ್ವರ ಇಂಟರ್‌ನ್ಯಾಷನಲ್ ಶಾಲೆಯಲ್ಲಿ ಹೊಸ ವರ್ಷಾಚರಣೆ

ಸಾಲಿಗ್ರಾಮ: ಪಟ್ಟಣದ ಶ್ರೀ ಭೈರವೇಶ್ವರ ಇಂಟರ್‌ನ್ಯಾಷನಲ್ ಶಾಲೆಯಲ್ಲಿ ನವವರ್ಷ ದಿನ ಹಾಗೂ ಕ್ರಿಸ್‌ಮಸ್ ಹಬ್ಬವನ್ನು ಸಂಭ್ರಮದಿಂದ ಆಚರಿಸಲಾಯಿತು.
ಸಂಸ್ಥೆಯ ಕಾರ್ಯದರ್ಶಿ ಸಿ.ಪಿ. ತ್ರಿವೇಣಿ ಮಾತನಾಡಿ, 2025 ವರ್ಷ ಮುಗಿಸಿ 2026ನೇ ವರ್ಷಕ್ಕೆ ಹೋಗುತ್ತಿರುವ ನೀವು ನಾವುಗಳೆಲ್ಲರೂ ಕಳೆದ ವರ್ಷ ಶಿಕ್ಷಣದಲ್ಲಿ ಮಾಡಿದ ಸಾಧನೆಗಿಂತ ಈ ವರ್ಷ ಹೆಚ್ಚಿನ ಸಾಧನೆ ಮಾಡುವತ್ತ ಗಮನಹರಿಸೋಣ. ತಂದೆ, ತಾಯಿ ಮತ್ತು ಶಿಕ್ಷಕರು ಹೇಳಿದ ಮಾರ್ಗದರ್ಶನದಲ್ಲಿ ವಿದ್ಯಾರ್ಥಿಗಳು ನಡೆಯುವ ಮೂಲಕ ಹೊಸ ವರ್ಷ ಬರಮಾಡಿಕೊಳ್ಳೋಣ ಎಂದರು.
ಸಂಸ್ಥೆಯ ಅಧ್ಯಕ್ಷೆ ಕಮಲಮ್ಮ ಸಾಂಸ್ಕೃತಿಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳು ವೇಷಭೂಷಣಗಳನ್ನು ಧರಿಸಿ ವಿವಿಧ ನೃತ್ಯ ಮಾಡಿದರು. ಜಾನಪದ, ಚಿತ್ರಗೀತೆಗಳು, ಭಾವಗೀತೆಗಳು, ಭಕ್ತಿಗೀತೆಗಳನ್ನು ಹಾಡಿದರು. ಶಿಕ್ಷಣದ ಅರಿವು ಮೂಡಿಸುವ ನಾಟಕಗಳನ್ನು ಪ್ರದರ್ಶಿಸಿದರು. ಶಾಂತಿ, ಪ್ರೀತಿ, ಏಕತೆ ಮತ್ತು ಮಾನವೀಯ ಮೌಲ್ಯಗಳ ಸಂದೇಶವನ್ನು ಸಾರುವ ಮೂಲಕ ಯೇಸು ಕ್ರಿಸ್ತರ ಜನ್ಮ ದಿನವನ್ನು ವಿಶೇಷವಾಗಿ ಆಚರಿಸುವ ಮೂಲಕ ಕೇಕ್ ಕತ್ತರಿಸಿ ಎಲ್ಲ ಪಾಲಕರಿಗೆ, ವಿದ್ಯಾರ್ಥಿಗಳಿಗೆ ಸಿಹಿ ಹಂಚುವ ಮೂಲಕ ಆಚರಿಸಲಾಯಿತು.
ಶಿಕ್ಷಣ ಸಂಯೋಜಕಿ ಅರ್ಪಿತಾ ಸೇನ್, ಮುಖ್ಯ ಶಿಕ್ಷಕಿ ಯಶಸ್ವಿನಿ ಸೇರಿದಂತೆ ಎಲ್ಲ ಸಹ ಶಿಕ್ಷಕರು ಮತ್ತು ಶಾಲೆಯ ಸಿಬ್ಬಂದಿ ಇದ್ದರು.