ಬೆಟ್ಟದಪುರ ಸಮೀಪದ ನಂದೀಪುರ ಹಾಲು ಉತ್ಪಾದಕ ಸಹಕಾರ ಸಂಘದಲ್ಲಿ ನಡೆದ ನೂತನ ವರ್ಷಾಚರಣೆ ಕಾರ್ಯಕ್ರಮವನ್ನು ನಿತಿನ್ ವೆಂಕಟೇಶ್ ಉದ್ಘಾಟಿಸಿದರು. ರುದ್ರಾರಾಧ್ಯ, ರಾಜಮ್ಮ, ಸತೀಶ್, ಕರುಣಾನಿಧಿ, ಸಚಿನ್, ಮಹದೇವ್, ನಂದೀಶ್ ಇದ್ದರು. 
ಮೈಸೂರು

ಬಡ ಮಕ್ಕಳ ಶಿಕ್ಷಣಕ್ಕಾಗಿ ಲಾಭಾಂಶ ಮೀಸಲಿಡಿ

ಬೆಟ್ಟದಪುರ: ಸಂಸ್ಥೆಯ ಹೈನುಗಾರಿಕೆ ಉದ್ಯಮದಲ್ಲಿ ಲಾಭದ ಒಂದು ಭಾಗವನ್ನು ಸಮಾಜದ ಏಳಿಗೆಗಾಗಿ, ವಿಶೇಷವಾಗಿ ಬಡ ಮಕ್ಕಳ ಶಿಕ್ಷಣಕ್ಕಾಗಿ ಮೀಸಲಿಡಿ ಎಂದು ಆಶ್ರಯ ಹಾಗೂ ಗ್ಯಾರಂಟಿ ಅನುಷ್ಠಾನ ಸಮಿತಿ ಅಧ್ಯಕ್ಷ ನಿತಿನ್ ವೆಂಕಟೇಶ್ ಸಲಹೆ ನೀಡಿದರು.
ಬೆಟ್ಟದಪುರ ಸಮೀಪದ ನಂದೀಪುರ ಹಾಲು ಉತ್ಪಾದಕ ಸಹಕಾರ ಸಂಘದ ನೂತನ ಆಡಳಿತ ಮಂಡಳಿ ವತಿಯಿಂದ ಸೋಮವಾರ ಆಯೋಜಿಸಿದ್ದ ವರ್ಷಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಗ್ರಾಮೀಣ ಭಾಗದಲ್ಲಿ ರೈತರಿಗೆ ವ್ಯವಸಾಯದ ಜತೆಗೆ ಹೈನುಗಾರಿಕೆ ಆದಾಯದ ಮೂಲವಾಗಿದೆ. ಇಂತಹ ಕಾರ್ಯಕ್ರಮಗಳು ಡೇರಿಗಳ ಪ್ರಗತಿಗೆ ಪ್ರೇರಣೆ ಆಗಲಿದೆ ಎಂದು ತಿಳಿಸಿದರು.
ಸಂಘದ ಅಧ್ಯಕ್ಷ ರುದ್ರಾರಾಧ್ಯ, ಉಪಾಧ್ಯಕ್ಷೆ ರಾಜಮ್ಮ, ವಿಸ್ತರಣಾಧಿಕಾರಿ ಸತೀಶ್, ಮುಖಂಡರಾದ ಕರುಣಾನಿಧಿ, ಸಚಿನ್, ಮಹದೇವ್, ನಂದೀಶ್, ದೊಡ್ಡೇಗೌಡ, ಕರುಣಾನಿಧಿ, ಗ್ರಾಮ ಪಂಚಾಯಿತಿ ಸದಸ್ಯ ಬಸವರಾಜು, ಜಯಣ್ಣ, ಶಿವಣ್ಣೇಗೌಡ, ಕೆಂಪೇಗೌಡ, ಚಂದ್ರಪ್ಪ, ನಿರ್ದೇಶಕರಾದ ಚೆನ್ನಯ್ಯ, ಕಾಳೇಗೌಡ, ಅನಿಲ್ ಕುಮಾರ್, ಮಣಿಕಂಠ, ಗುರುರಾಜ್, ಯಶೋದಮ್ಮ, ರೇಖಾ, ದಿನೇಶ್, ಕಾರ್ಯದರ್ಶಿ ಚಿಕ್ಕೇಗೌಡ, ಮಾದಪ್ಪ ಇದ್ದರು.