ಕೆ.ಆರ್.ನಗರ ಪಟ್ಟಣದ ಶ್ರೀ ಆದಿಶಕ್ತಿ ತೋಪಮ್ಮನವರ ದೇವಸ್ಥಾನದ ಸೇವಾ ಟ್ರಸ್ಟ್ ವತಿಯಿಂದ ಎಂಸಿಡಿಸಿಸಿ ಬ್ಯಾಂಕ್ ನೂತನ ಅಧ್ಯಕ್ಷ ದೊಡ್ಡಸ್ವಾಮೇಗೌಡ ಅವರನ್ನು ಸನ್ಮಾನಿಸಿದರು. ಅಣ್ಣಯ್ಯನಾಯಕ, ಸಿ.ಎ.ರಾಜು, ಕೆ.ಪಿ.ಜಗದೀಶ್, ಟಿ.ಎಲ್.ಪರಶಿವ ಮೂರ್ತಿ, ಮೊಟೇಗೌಡ, ಯೋಗೇಶ್, ಸಣ್ಣಬಸಪ್ಪ, ನಂಜುಂಡ, ಜವರೇಗೌಡ, ಚನ್ನಕೇಶವ, ಅರ್ಚಕ ಮಹದೇವಸ್ವಾಮಿದೇವರು ಇನ್ನಿತರರು ಇದ್ದರು. 
ಮೈಸೂರು

ಶ್ರೀ ತೋಪಮ್ಮನವರ ದೇವಸ್ಥಾನದಕ್ಕೆ ಅಗತ್ಯ ಮೂಲಸೌಕರ್ಯ

ಎಂಸಿಡಿಸಿಸಿ ಬ್ಯಾಂಕ್ ಅಧ್ಯಕ್ಷ ದೊಡ್ಡಸ್ವಾಮೇಗೌಡ ಭರವಸೆ

ಕೆ.ಆರ್.ನಗರ: ಪಟ್ಟಣದ ಶ್ರೀ ಆದಿಶಕ್ತಿ ತೋಪಮ್ಮನವರ ದೇವಸ್ಥಾನಕ್ಕೆ ಮೂಲ ಸೌಕರ್ಯ, ಶಾಶ್ವತ ಪರಿಹಾರ ಕಲ್ಪಿಸುವ ಕುರಿತು ಶಾಸಕ ಡಿ.ರವಿಶಂಕರ್ ಅವರ ಜತೆ ಚರ್ಚಿಸಿ ಅನುದಾನ ಒದಗಿಸಲು ಕ್ರಮ ವಹಿಸುವುದಾಗಿ ಎಂಸಿಡಿಸಿಸಿ ಬ್ಯಾಂಕ್ ನೂತನ ಅಧ್ಯಕ್ಷ ದೊಡ್ಡಸ್ವಾಮೇಗೌಡ ಭರವಸೆ ನೀಡಿದರು.
ಪಟ್ಟಣದ ಶ್ರೀ ಆಧಿಶಕ್ತಿ ತೋಪಮ್ಮನವರ ದೇವಸ್ಥಾನದ ಸೇವಾ ಟ್ರಸ್ಟ್ ವತಿಯಿಂದ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಸನ್ಮಾನ ಸ್ವೀಕರಿಸಿ, ಟ್ರಸ್ಟ್ ನ ನೂತನ ವರ್ಷದ ಕ್ಯಾಲೆಂಡರ್ ಬಿಡುಗಡೆಗೊಳಿಸಿ ಮಾತನಾಡಿದ ಅವರು, ದೇವಸ್ಥಾನಕ್ಕೆ ಭಕ್ತರೊಬ್ಬರು ಜಮೀನು ದಾನ ನೀಡಿದ್ದು ಇದುವರೆವಿಗೂ ದೇವಾಲಯದ ಹೆಸರಿಗೆ ಖಾತೆ ಆಗಿಲ್ಲ ಎಂದು ಟ್ರಸ್ಟ್ ನ ಆಡಳಿತ ಮಂಡಳಿಯವರು ಮನವಿ ಮಾಡಿದ್ದರಿಂದ ದೊಡ್ಡಸ್ವಾಮೇಗೌಡರು ಈ ಸಂಬಂಧ ದೇವಸ್ಥಾನದ ಹೆಸರಿಗೆ ಅಧಿಕೃತವಾಗಿ ಖಾತೆ ಮಾಡಿಸಿ ಕೊಡಲಾಗುವುದು ಎಂದು ಭರವಸೆ ನೀಡಿದರು.
ದೇವಸ್ಥಾನದ ಪರಿಸರ ಉತ್ತಮವಾಗಿರಲು ಸ್ವಚ್ಛತೆಗೆ ಆದ್ಯತೆ ಕೊಡಿ ಎಂದರಲ್ಲದೆ ಶುದ್ಧ ಕುಡಿಯುವ ನೀರು, ಶೌಚಗೃಹದ ಸೌಕರ್ಯ ಸೇರಿದಂತೆ ಅನೇಕ ಸಮಸ್ಯೆಗಳಿದ್ದು ಅತಿ ಶೀಘ್ರದಲ್ಲಿ ಶಾಸಕರ ಅನುದಾನದ ಮೂಲಕ ಅಗತ್ಯಕ್ಕೆ ತಕ್ಕಂತೆ ಅನುದಾನ ನೀಡುವಂತೆ ಕ್ರಮ ವಹಿಸುವುದಾಗಿ ತಿಳಿಸಿದರು.
ಶ್ರೀ ಆದಿಶಕ್ತಿ ತೋಪಮ್ಮನವರ ಜಾತ್ರಾ ಮಹೋತ್ಸವಕ್ಕೆ ಬರುವ ಭಕ್ತರಿಗೆ ಅನುಕೂಲ ಕಲ್ಪಿಸುವ ದೃಷ್ಟಿಯಿಂದ ಎಲ್ಲ ರೀತಿಯ ಮೂಲಸೌಕರ್ಯ ಒದಗಿಸಿ ಭಕ್ತರಿಗೆ ತಂಗುದಾಣಗಳನ್ನು ನಿರ್ಮಿಸಲು ವೈಯಕ್ತಿಕವಾಗಿ ಆರ್ಥಿಕ ವ್ಯವಸ್ಥೆ ಮಾಡುವುದಾಗಿ ಹೇಳಿದರು.
ಟ್ರಸ್ಟ್ ಗೌರವಾಧ್ಯಕ್ಣ ಅಣ್ಣಯ್ಯನಾಯಕ, ಅಧ್ಯಕ್ಷ ಸಿ.ಎ.ರಾಜು, ಕಾರ್ಯದರ್ಶಿ ಕೆ.ಪಿ.ಜಗದೀಶ್, ಪದಾಧಿಕಾರಿಗಳಾದ ಟಿ.ಎಲ್.ಪರಶಿವಮೂರ್ತಿ, ಮೊಟೇಗೌಡ, ಯೋಗೇಶ್, ಸಣ್ಣಬಸಪ್ಪ, ನಂಜುಂಡ, ಜವರೇಗೌಡ, ಚನ್ನಕೇಶವ, ಅರ್ಚಕ ಮಹದೇವಸ್ವಾಮಿ ದೇವರು ಸೇರಿದಂತೆ ಇನ್ದಿತರರು ಇದ್ದರು.