ಎಚ್.ಡಿ.ಕೋಟೆ ಪಟ್ಟಣದ ಅಂಬೇಡ್ಕರ್ ಭವನದಲ್ಲಿ ಆಯೋಜಿಸಿದ್ದ ರಾಷ್ಟ್ರೀಯ ವಿಜ್ಞಾನ ದಿನ ಕಾರ್ಯಕ್ರಮವನ್ನು ಗಣ್ಯರು ಉದ್ಘಾಟಿಸಿದರು. ಹುಲಿಕಲ್ ನಟರಾಜು, ಸಿ.ಎನ್.ರಾಜು, ಸೌಮ್ಯಾ ಅನಿಲ್ ಚಿಕ್ಕಮಾದು, ಎಚ್.ಸಿ.ನರಸಿಂಹಮೂರ್ತಿ, ಜೀವಿಕಾ ಬಸವರಾಜು ಇದ್ದರು. 
ಮೈಸೂರು

ಮನೆಯ ವಾಸ್ತು ಚಿಂತೆ ಬಿಡಿ

ಲಲಾಟಾಕ್ಷ ಎಸ್
ಎಚ್.ಡಿ. ಕೋಟೆ: ಪಟ್ಟಣದ ಅಂಬೇಡ್ಕರ್ ಭವನದಲ್ಲಿ ಎಚ್.ಡಿ.ಕೋಟೆ ತಾಲೂಕು ಕ್ಷೇತ್ರ ಶಿಕ್ಷಣಾಧಿಕಾರಿ ಕಚೇರಿ, ಶಾಲಾ ಶಿಕ್ಷಣ ಇಲಾಖೆ, ಸರಗೂರಿನ ಸ್ವಾಮಿ ವಿವೇಕಾನಂದ ಯೂತ್‌ಮೂವ್‌ಮೆಂಟ್ ವತಿಯಿಂದ ರಾಷ್ಟ್ರೀಯ ವಿಜ್ಞಾನ ದಿನ ಕಾರ್ಯಕ್ರಮ ಆಯೋಜಿಸಲಾಗಿತ್ತು.
ಪವಾಡ ಬಯಲು ಖ್ಯಾತಿಯ ಹುಲಿಕಲ್ ನಟರಾಜು ಮಾತನಾಡಿ, ಪಂಚಾಂಗವನ್ನು ಬಿಟ್ಟು ಪಂಚ ಅಂಗಗಳ ಕಡೆ ಗಮನಕೊಡಬೇಕು. ಮನೆಯ ವಾಸ್ತು ಬಗ್ಗೆ ಚಿಂತಿಸದೆ ಮನಸ್ಸಿನ ವಾಸ್ತು ಸ್ಥಿತಿಯನ್ನು ಅರಿತುಕೊಂಡಾಗ ಮನುಷ್ಯನಲ್ಲಿರುವ ಮೂಢನಂಬಿಕೆ ದೂರವಾಗಲಿದೆ ಎಂದರು.
ಕ್ಷೇತ್ರ ಶಿಕ್ಷಣಾಧಿಕಾರಿ ಸಿ.ಎನ್.ರಾಜು ಮಾತನಾಡಿ, ಎಚ್.ಡಿ. ಕೋಟೆ ತಾಲೂಕು ಕಾಡಂಚಿನ ಭಾಗದಿಂದ ವಿದ್ಯಾರ್ಥಿಗಳು ವಿದ್ಯಾಭ್ಯಾಸಕ್ಕೆ ಪಟ್ಟಣಕ್ಕೆ ಆಗಮಿಸುತ್ತಿದ್ದಾರೆ. ಇಂತಹ ವಿದ್ಯಾರ್ಥಿಗಳಿಗೆ ಗುಣಮಟ್ಟದ ಶಿಕ್ಷಣ ನೀಡುವತ್ತ ಶಿಕ್ಷಕರು ಪಣ ತೊಟ್ಟಿದ್ದಾರೆ. ಎಚ್.ಡಿ.ಕೋಟೆ ತಾಲೂಕು ಹಿಂದುಳಿದಿದೆ ಎಂದು ಹೇಳಲಾಗುತ್ತದೆ. ಆದರೆ, ಇಲ್ಲಿಗೆ ಕಾರ್ಯನಿರ್ವಹಿಸಲು ಬರುವ ಅಧಿಕಾರಿಗಳಿಂದ ತಾಲೂಕು ಹಿಂದುಳಿದಿದೆ ಎಂದು ಹೇಳಿದರು.
ತಾಲೂಕಿನ 100 ಶಾಲೆಯ ವಿದ್ಯಾರ್ಥಿಗಳು ವಿವಿಧ ವಿಜ್ಞಾನ ಮಾದರಿಗಳನ್ನು ಪ್ರದರ್ಶಿಸಿದರು. ಉತ್ತಮ ಮಾದರಿಗಳಿಗೆ ಬಹುಮಾನ ವಿತರಿಸಲಾಯಿತು. ಶಿಕ್ಷಕರಿಗೆ ಕ್ವಿಜ್ ನಡೆಸಿ ವಿಜೇತರಿಗೆ ಬಹುಮಾನ ವಿತರಿಸಲಾಯಿತು.
ಸೌಮ್ಯಾ ಅನಿಲ್ ಚಿಕ್ಕಮಾದು, ಮುಖಂಡರಾದ ಎಚ್.ಸಿ.ನರಸಿಂಹಮೂರ್ತಿ, ಜೀವಿಕಾ ಬಸವರಾಜು, ನಾರಾಯಣಸ್ವಾಮಿ, ಜಿನ್ನಹಳ್ಳಿ ರಾಜನಾಯಕ, ಕನ್ನಡ ಪ್ರಮೋದ್, ಸತೀಶ್, ಹರ್ಷ, ಜಯಪ್ರಕಾಶ್, ಚಿಕ್ಕದೇವು, ಚಂದ್ರಶೇಖರ್, ಕಿರಣ್, ಜೀವಿಕಾ ಉಮೇಶ್, ಪ್ರಸನ್ನ, ಪದ್ಮರಾಜು, ಪ್ರಮೋದ್, ಪ್ರಕಾಶ್, ಕೃಷ್ಣಯ್ಯ, ನಾಗರಾಜು, ಪ್ರಕಾಶ್, ಮಹೇಂದ್ರ, ಮಹೇಶ್, ಪ್ರಸನ್ನ, ಮಹದೇವಸ್ವಾಮಿ, ವಿನೋದ್, ಗಿರೀಶ್ ಮೂರ್ತಿ, ಮಹದೇವು, ರಾಮಮೂರ್ತಿ ಇದ್ದರು.