ರಾಷ್ಟ್ರೀಯ ಪ್ಯಾರಾ ಈಜು ಚಾಂಪಿಯನ್ ಶಿಪ್‌ನಲ್ಲಿ ಪದಕ ಪಡೆದ ಎಸ್.ಬಿ. ಮೋಹಿತ್ 
ಮೈಸೂರು

ರಾಷ್ಟ್ರೀಯ ಪ್ಯಾರಾ ಈಜು: ಮೈಸೂರಿನ ಎಸ್.ಬಿ. ಮೋಹಿತ್ ಗೆ ಕಂಚಿನ ಪದಕ

ಅವಿನಾಶ್ ಜೈನಹಳ್ಳಿ

ಪ್ರಮುಖ ಮುಖ್ಯಾಂಶಗಳು

  • ಹೈದರಾಬಾದಿನಲ್ಲಿ ಮಂಗಳವಾರ ಮುಕ್ತಾಯಗೊಂಡ 25ನೇ ರಾಷ್ಟ್ರೀಯ ಪ್ಯಾರಾ ಈಜು ಸ್ಪರ್ಧೆಯ 50ಮೀಟರ್ ಫ್ರೀ ಸ್ಟೈಲ್ ಈ ಸಾಧನೆ
  • ಮೈಸೂರಿನ ಜೆ.ಪಿ.ನಗರದಲ್ಲಿರುವ ಜಿ.ಎಸ್.ಎ. ಈಜುಕೊಳದಲ್ಲಿ ತರಬೇತಿ
  • ಅ. ೨೬ರಂದು ಬೆಂಗಳೂರಿನ ವೈಟ್‌ಫೀಲ್ಡ್ನಲ್ಲಿರುವ ದೀನ್ಸ್ ಸ್ವಿಮ್ ಅಕಾಡೆಮಿಯಲ್ಲಿ ನಡೆದ ಈಜು ಸ್ಪರ್ಧೆಯಲ್ಲಿ ಮೋಹಿತ್ 100 ಮತ್ತು 50 ಮೀಟರ್ ಫ್ರೀ ಸ್ಟೈಲ್ ಹಾಗೂ 50 ಮೀಟರ್ ಬ್ಯಾಕ್‌ ಸ್ಟ್ರೋಕ್ ಸ್ಪರ್ಧೆಯಲ್ಲಿ ಚಿನ್ನದ ಪದಕ
ಮೈಸೂರು: ರಾಷ್ಟ್ರೀಯ ಪ್ಯಾರಾ ಈಜು ಚಾಂಪಿಯನ್ ಶಿಪ್‌ನಲ್ಲಿ ಮೈಸೂರಿನ ಎಸ್.ಬಿ. ಮೋಹಿತ್ ಕಂಚಿನ ಪದಕ ಪಡೆದು ಗಮನ ಸೆಳೆದಿದ್ದಾರೆ.
 ಹೈದರಾಬಾದಿನಲ್ಲಿ ಮಂಗಳವಾರ ಮುಕ್ತಾಯಗೊಂಡ 25ನೇ ರಾಷ್ಟ್ರೀಯ ಪ್ಯಾರಾ ಈಜು ಸ್ಪರ್ಧೆಯ 50ಮೀಟರ್ ಫ್ರೀ ಸ್ಟೈಲ್ ಈ ಸಾಧನೆ ಮಾಡಿದ್ದಾರೆ.
ಇದಕ್ಕೂ ಮುನ್ನ ಅ. ೨೬ರಂದು ಬೆಂಗಳೂರಿನ ವೈಟ್‌ಫೀಲ್ಡ್ನಲ್ಲಿರುವ ದೀನ್ಸ್ ಸ್ವಿಮ್ ಅಕಾಡೆಮಿಯಲ್ಲಿ ನಡೆದ ಈಜು ಸ್ಪರ್ಧೆಯಲ್ಲಿ ಮೋಹಿತ್  100 ಮತ್ತು 50 ಮೀಟರ್ ಫ್ರೀ ಸ್ಟೈಲ್ ಹಾಗೂ 50 ಮೀಟರ್ ಬ್ಯಾಕ್‌ ಸ್ಟ್ರೋಕ್ ಸ್ಪರ್ಧೆಯಲ್ಲಿ ಚಿನ್ನದ ಪದಕವನ್ನು ಪಡೆದು ಅತ್ಯುತ್ತಮ ಸಾಧನೆಯನ್ನು ಮಾಡುವ ಮೂಲಕ ರಾಷ್ಟ್ರ ಮಟ್ಟದ ಈಜು ಸ್ಪರ್ಧೆಗೆ ಆಯ್ಕೆಯಾಗಿದ್ದರು.
ಇವರು ಮೈಸೂರಿನ ಜೆ.ಪಿ.ನಗರದಲ್ಲಿರುವ ಜಿ.ಎಸ್.ಎ. ಈಜುಕೊಳದಲ್ಲಿ ತರಬೇತಿಯನ್ನು ಪಡೆಯುತ್ತಿದ್ದಾರೆ.  ಇವರು ಗುರುಕುಲ ಕಾಲೇಜಿನ ಕನ್ನಡ ಪ್ರಾಧ್ಯಾಪಕ ಎಸ್.ಎಸ್.ಬಸವರಾಜು, ಡಿ.ತೇಜಸ್ವಿನಿ ದಂಪತಿಯ ಪುತ್ರ.
ಮೋಹಿತ್ ಅವರ ಈ ಸಾಧನೆ ಯುವ ಪ್ಯಾರಾ ಕ್ರೀಡಾಪಟುಗಳಿಗೆ ಪ್ರೇರಣೆಯಾಗಿದ್ದು, ತನ್ನ ಪರಿಶ್ರಮದಿಂದ ಪ್ಯಾರಾ ಈಜು ಕ್ಷೇತ್ರದಲ್ಲಿ  ಕರ್ನಾಟಕ ಮತ್ತು ಭಾರತದ ಹೆಮ್ಮೆ ಹೆಚ್ಚಿಸುವ ನಿರೀಕ್ಷೆಯೊಂದಿಗೆ ಪದಕ ಬೇಟೆ ನಡೆಸುತ್ತಿದ್ದಾರೆ.   ಅವರ ಈ ಯಶಸ್ಸು ಕೇವಲ ವೈಯಕ್ತಿಕ ಸಾಧನೆಯೇ ಆಗದೆ, ಸಮಾಜದಲ್ಲಿ ಪ್ಯಾರಾ ಕ್ರೀಡಾಪಟುಗಳು ಈಜು ಸ್ಪರ್ಧೆಯಲ್ಲಿ ಮುಂದುವರಿಸಲು ಪ್ರೇರಣೆಯಾಗಿದೆ.