ನರಸಾಪುರ-ಮೈಸೂರು-ನರಸಾಪುರ ವಿಶೇಷ ರೈಲು
ಮೈಸೂರು: ನರಸಾಪುರ-ಮೈಸೂರು-ನರಸಾಪುರ ವಿಶೇಷ ರೈಲುವನ್ನು(7033/34 ) ಕಾಕಿನಾಡಾ ನಗರದವರೆಗೆ ವಿಸ್ತರಿಸಲಾಗಿದ್ದು, ಇದು ನ.3ರಿಂದ 29ರವರೆಗೆ ಜಾರಿಯಲ್ಲಿರುತ್ತದೆ.
ಈ ರೈಲು ಕಾಕಿನಾಡಾದಿಂದ ಬೆಳಗ್ಗೆ 9ಕ್ಕೆ ಹೊರಟು, ಮುಂದಿನ ದಿನ ಸಂಜೆ 5ಕ್ಕೆ ಮೈಸೂರಿಗೆ ತಲುಪುತ್ತದೆ. ಹಿಂದಿರುಗುವಾಗ, ಮೈಸೂರು ಕಾಕಿನಾಡಾ ಟೌನ್ ಎಕ್ಸ್‌ಪ್ರೆಸ್ ವಿಶೇಷ ರೈಲು ಮೈಸೂರಿನಿಂದ ಸಂಜೆ 5.20 ಗಂಟೆಗೆ ಹೊರಟು, ಮುಂದಿನ ದಿನ ರಾತ್ರಿ 11 ಗಂಟೆಗೆ ಕಾಕಿನಾಡಾ ಟೌನ್ ತಲುಪುತ್ತದೆ.
ಈ ರೈಲು ಇದೀಗ ನರಸಾಪುರ ಬದಲಿಗೆ ಕಾಕಿನಾಡಾದಿಂದಲೇ ಪ್ರಾರಂಭವಾಗಿ ಅಲ್ಲಿಯೇ ಅಂತ್ಯಗೊಳ್ಳುತ್ತದೆ.