ನಂಜನಗೂಡಿನ ಲಯನ್ಸ್ ವಿದ್ಯಾಸಂಸ್ಥೆಯಲ್ಲಿ ಗುರುಕುಲದ ಮಾದರಿಯಲ್ಲಿ ಅಕ್ಷತೆಯಲ್ಲಿ ಅಕ್ಷರಾಭ್ಯಾಸ ಮಾಡಿಸಲಾಯಿತು. ಲಯನ್ ಸಂಸ್ಥೆ ಮುಖ್ಯಸ್ಥ ಮಂಜುನಾಥ್, ಕಾರ್ಯದರ್ಶಿ ಉಮೇಶ್, ಮುಖ್ಯಶಿಕ್ಷಕ ಮಹೇಶ್ ಇದ್ದರು. 
ಮೈಸೂರು

ಲಯನ್ಸ್ ವಿದ್ಯಾಸಂಸ್ಥೆಯಲ್ಲಿ ಮಕ್ಕಳಿಗೆ ಅಕ್ಷರಾಭ್ಯಾಸ

ನಂಜನಗೂಡು: ಪಟ್ಟಣದ ಲಯನ್ಸ್ ವಿದ್ಯಾಸಂಸ್ಥೆಯಲ್ಲಿ ಗುರುಕುಲದ ಮಾದರಿಯಲ್ಲಿ ಅಕ್ಷತೆಯಲ್ಲಿ ಅಕ್ಷರಾಭ್ಯಾಸ ಮಾಡಿಸಲಾಯಿತು.
ಲಯನ್ಸ್ ವಿದ್ಯಾಸಂಸ್ಥೆಯಲ್ಲಿ ಇತ್ತೀಚೆಗೆ ಪ್ರೀ ಕೆಜಿ, ಎಲ್‌ಕೆಜಿಯ 50ಕ್ಕೂ ಹೆಚ್ಚು ಮಕ್ಕಳಿಗೆ ಗುರುಕುಲ ಮಾದರಿಯಲ್ಲಿ ಪಾಲಕರ ಮಡಿಲಲ್ಲಿ ಕೂರಿಸಿ ಅಕ್ಷತೆಯಲ್ಲಿ ಅ ಆ ಇ ಈ ಬರೆಸುವ ಮೂಲಕ ಅಕ್ಷರಾಭ್ಯಾಸ ಮಾಡಿಸಲಾಯಿತು.
ಸಂಸ್ಥೆಯ ಮುಖ್ಯಸ್ಥ ಎನ್.ಎಂ.ಮಂಜುನಾಥ ಮಾತನಾಡಿ, ಹಿಂದೆ ಗುರುಕುಲದಲ್ಲಿ ನೆಲದ ಮೇಲೆ ಮರಳಿನಲ್ಲಿ ಅಕ್ಷರಾಭ್ಯಾಸ ಮಾಡುತ್ತಿದ್ದರು. ಕಾಲ ಬದಲಾದಂತೆ ಮಕ್ಕಳಿಗೆ ದೇವಾಲಯಗಳಲ್ಲಿ ಅಕ್ಷತೆಯ ಮೇಲೆ ಅಕ್ಷರಾಭ್ಯಾಸ ಮಾಡಿಸಲಾಗುತ್ತಿದೆ. ಇಂದು ಅಕ್ಷರಾಭ್ಯಾಸ ಪದ್ಧತಿ ನಶಿಸಿ ಹೋಗುತ್ತಿದೆ. ನಮ್ಮ ಶಾಲೆಯಲ್ಲಿ ಆ ಪದ್ಧತಿಯನ್ನು ಮುಂದುವರಿಸಲು ನಿರ್ಧಾರ ಮಾಡಿ ಅಕ್ಷರಾಭ್ಯಾಸ ಮಾಡಿಸಲಾಗುತ್ತಿದೆ. ಇದರಿಂದ ಮಕ್ಕಳಿಗೆ ಶಾರದೆ ಒಲಿಯುತ್ತಾಳೆ ಎಂಬ ನಂಬಿಕೆ ಇದೆ ಎಂದರು.