ಪೌರಾಡಳಿತ ಸಚಿವ ಎಚ್.ಸಿ.ಬಾಲಕೃಷ್ಣ  
ಮೈಸೂರು

ನಾಗೇಂದ್ರ ರಾಜೀನಾಮೆಯಿಂದ ಮುಜುಗರ ಆಗಿಲ್ಲ

ಮಂಜುನಾಥ ತಿಮ್ಮಯ್ಯ

ಪ್ರಮುಖ ಮುಖ್ಯಾಂಶಗಳು

  • ಪೌರಾಡಳಿತ ಸಚಿವ ಎಚ್.ಸಿ.ಬಾಲಕೃಷ್ಣ ಹೇಳಿಕೆ

ಮೈಸೂರು: 

ಸಚಿವ ಸ್ಥಾನಕ್ಕೆ ಬಿ.ನಾಗೇಂದ್ರ ರಾಜೀನಾಮೆಯಿಂದ ಸರ್ಕಾರಕ್ಕೆ ಮುಜುಗರ ಆಗಿಲ್ಲ. ಸಣ್ಣಪುಟ್ಟ ವ್ಯತ್ಯಾಸಗಳಾಗಿವೆ. ರಾಜಕಾರಣದಲ್ಲಿ ಇದು ಸಹಜ ಎಂದು ಪೌರಾಡಳಿತ ಸಚಿವ ಎಚ್.ಸಿ.ಬಾಲಕೃಷ್ಣ ಹೇಳಿದರು.

ನಗರದಲ್ಲಿ  ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಾಗೇಂದ್ರ ಅಪರಾಧಿಯಲ್ಲ. ಆರೋಪಿಯಷ್ಟೇ. ಕೋರ್ಟ್‌ನಲ್ಲಿ ಎಲ್ಲವೂ ತೀರ್ಮಾನವಾಗುತ್ತದೆ ಎಂದರು
ಈ ವಿಚಾರವನ್ನು ಇಟ್ಟುಕೊಂಡು ಬಿಜೆಪಿಯವರು ಬಳ್ಳಾರಿಗೆ ಪಾದಯಾತ್ರೆ ಮಾಡಲಿ ಬಿಡಿ. ಅವರು ನಮ್ಮನ್ನು ಹೊಗಳಲು ಪಾದಯಾತ್ರೆ ಮಾಡುತ್ತಾರೆಯೇ? ಪ್ರತಿಪಕ್ಷದವರು ವಿರೋಧವನ್ನೇ ಮಾಡಬೇಕು. ಹೀಗಾಗಿ, ಪಾದಯಾತ್ರೆ ಮಾಡುತ್ತಿದ್ದಾರೆ, ಮಾಡಲಿ ಎಂದರು.

ಎಚ್‌ಡಿಕೆ ಬಾಂಬ್ ಬಗ್ಗೆ ಕುತೂಹಲ

ಇನ್ನೂ 10 ದಿನಗಳಲ್ಲಿ ದಾಖಲೆ ಬಿಡುಗಡೆ ಮಾಡುತ್ತೇನೆ ಎಂದಿರುವ ಕೇಂದ್ರ ಸಚಿವ ಎಚ್.ಡಿ ಕುಮಾರಸ್ವಾಮಿ ಹೇಳಿಕೆಗೆ ಪ್ರತಿಕ್ರಿಯೆ ನೀಡಿದ ಸಚಿವರು ಅವರು, ಆಗಾಗ್ಗೆ ಕುಮಾರಸ್ವಾಮಿ ಚಿಂತನೆ ಬದಲಾಗುತ್ತಿರುತ್ತದೆ. ಯಾವ ಬಾಂಬ್ ಎಂಬ ಕುತೂಹಲ ನನಗೂ ಇದೆ.
ಮೇಕೆದಾಟು ಕುಡಿಯುವ ನೀರು ಯೋಜನೆಗೆ ಕೇಂದ್ರ ಸರ್ಕಾರದಿಂದ ಒಪ್ಪಿಗೆ ಕೊಡಿಸುವ ಬಾಂಬ್ ಇರಬೇಕು. ಅವರನ್ನು ಕರ್ನಾಟಕದ ಅಭಿವೃದ್ಧಿ ಮಾಡಿ ಎಂದು ಕೇಂದ್ರ ಸಚಿವರನ್ನಾಗಿ ಮಾಡಿದ್ದು, ಅವರು ಅಭಿವೃದ್ಧಿ ವಿಚಾರದ ಬಾಂಬ್ ಸಹ ಸಿಡಿಸಬಹುದು. ಆದರೆ, ಅವರ ತಲೆಯಲ್ಲಿ ಏನು ಓಡುತ್ತಿದೆ ಎಂಬುದು ನಮಗೇನು ಗೊತ್ತು ಎಂದು ವ್ಯಂಗ್ಯವಾಡಿದರು.