ಮೈಸೂರು

ಸಿ.ಟಿ.ರವಿ ವಿರುದ್ಧ ಪ್ರತಿಭಟನೆ ಸರಿಯಲ್ಲ

ಎಂ.ರವಿ
ಮೈಸೂರು: ವಿಧಾನಪರಿಷತ್ ಸದಸ್ಯ ಸಿ.ಟಿ.ರವಿ ಅವರು ಸವಿತಾ ಸಮಾಜದ ಬಗ್ಗೆ ಪದ ಬಳಸಿದ್ದಕ್ಕೆ ಕ್ಷಮೆ ಯಾಚಿಸಿದ್ದಾರೆ. ಆದರೂ ಈ ಪ್ರಕರಣ ಜೀವಂತವಾಗಿರಿಸಿ, ತೇಜೋವಧೆ ಮುಂದುವರಿದಿದೆ ಎಂದು ಸವಿತಾ ಸಮಾಜದ ಅಧ್ಯಕ್ಷ ಮೈ.ನಾ.ಲೋಕೇಶ್ ತಿಳಿಸಿದರು.
ಪ್ರಕರಣದ ದುರ್ಬಳಕೆ ಮಾಡಿಕೊಳ್ಳುತ್ತಿರುವ ಸಚಿವ ಮಧುಬಂಗಾರಪ್ಪ ಅವರು ಸಿ.ಟಿ.ರವಿ ವಿರುದ್ಧ ನ.5 ಮತ್ತು 6 ರಂದು ರಾಜ್ಯಾದ್ಯಂತ ಪ್ರತಿಭಟನೆ ನಡೆಸಲು ಮುಂದಾಗಿರುವುದನ್ನು ಜಿಲ್ಲಾ ಕಾಯಕ ಸಮುದಾಯಗಳ ಒಕ್ಕೂಟ ಖಂಡಿಸುತ್ತದೆ ಎಂದು ಮಂಗಳವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಕ್ಷಮೆ ಕೇಳಿಯೂ ಸಿ.ಟಿ.ರವಿ ವಿರುದ್ಧ ಪ್ರತಿಭಟನೆ ನಡೆಸುವುದು ಸರಿಯಲ್ಲ. ಒಂದು ವೇಳೆ ಆ ರೀತಿ ಮಾಡಿದಲ್ಲಿ ನಾವು ಸಹ ಅದನ್ನು ವಿರೋಧಿಸಿ ಹೋರಾಟ ನಡೆಸುವುದಾಗಿ ಎಚ್ಚರಿಸಿದರು. ಸಂಘದ ಗೌರವಾಧ್ಯಕ್ಷ ಎಂ.ನಾಗರಾಜ್, ಮಡಿವಾಳ ಸಮುದಾಯದ ಮುಖಂಡ ಪಿ.ಗಿರೀಶ್, ಈಡಿಗ ಸಮುದಾಯದ ಮುಖಂಡ ಪರಶುರಾಮಪ್ಪ ಇದ್ದರು.