ಮಾನವೀಯ ಸ್ನೇಹಿತರ ಒಕ್ಕೂಟದ ವತಿಯಿಂದ ವಿದ್ಯಾರ್ಥಿಗಳಿಗೆ ಕೀಡಾ ಪರಿಕರಗಳ ವಿತರಣೆ ಮಾಡಲಾಯಿತು.
ಸಿದ್ದಾಪುರ: ಮಾನವೀಯ ಸ್ನೇಹಿತರ ಒಕ್ಕೂಟದ ವತಿಯಿಂದ ಅಮ್ಮತಿ ಹೊಸಕೋಟೆಯ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯ ವಿದ್ಯಾರ್ಥಿಗಳ ಕ್ರೀಡಾ ಚಟುವಟಿಕೆಗೆ ಬೇಕಾದ ಟ್ರಾೃಕ್ ಸೂಟ್, ಕೇರಂ ಬೋರ್ಡ್, ಶಟಲ್ ಬ್ಯಾಟ್, ಕಾಕ್, ಫುಟ್ಬಾಲ್, ಪಾದರಕ್ಷೆ ಹಾಗೂ ಲೇಖನಿಗಳನ್ನು ವಿದ್ಯಾರ್ಥಿಗಳಿಗೆ ಬುಧವಾರ ವಿತರಿಸಲಾಯಿತು,
ಶಾಲೆಯ 8 ವಿದ್ಯಾರ್ಥಿಗಳು ಆರ್ಥಿಕವಾಗಿ ಹಿಂದುಳಿದಿದ್ದು ಅವರಿಗೆ ಅಗತ್ಯವಾದ ಕ್ರೀಡಾ ಪರಿಕರಗಳನ್ನು ಒದಗಿಸಿ ಕೊಡುವಂತೆ ಶಾಲೆಯ ಶಿಕ್ಷಕರು ಬೇಡಿಕೆಯೊಂದನ್ನು ಒಕ್ಕೂಟದ ಮುಂದಿಟ್ಟಿದ್ದರು. ಅದನ್ನು ಪರಿಗಣಿಸಿದ ಒಕ್ಕೂಟದ ಅಡ್ಮಿನ್ ಬಳಗ ಮಕ್ಕಳ ಕ್ರೀಡಾ ಪರಿಕರಗಳನ್ನು ಒದಗಿಸಿಕೊಡಲು ಕೆಲವು ದಾನಿಗಳ ಸಹಾಯದಿಂದ ಮಕ್ಕಳ ಬೇಡಿಕೆ ಈಡೇರಿಸಿದ್ದಾರೆ.
ಒಕ್ಕೂಟದ ವಕ್ತಾರ ಶಶಿಕುಮಾರ್ ಚೆಟ್ಟಳ್ಳಿ, ಪ್ರತಿನಿಧಿಗಳಾದ ಆಲೆಮಾಡ ನವೀನ್, ದೇವಯ್ಯ, ಅಡ್ಮಿನ್‌ಗಳಾದ ಚೀರಂಡ ಚಂಗಪ್ಪ, ಅಗ್ನಿ ಚೆನ್ನನಾಯಕ, ಮುದ್ದಿಯಡ ರತೀಶ್ ಬಿದ್ದಪ್ಪ, ಐಮಣಿಯಂಡ ನವೀನ್ ಮುದ್ದಿಯಡ ನಿತಿನ್, ಶಿಕ್ಷಕಿ ಉಷಾ ದೇವರಾಜ್, ಅಂಗನವಾಡಿ ಶಿಕ್ಷಕಿ ಸುನಿತಾ, ಅಡುಗೆ ಸಿಬ್ಬಂದಿ ಭವ್ಯಾ ಮತ್ತಿತರರು ಹಾಜರಿದ್ದರು.