- ಪಿಂಚಣಿಗಾಗಿ 157 ಕೋಟಿ ರೂ.ಬೇಕು. ಆದರೆ ಸರ್ಕಾರದಿಂದ ಬರುತ್ತಿರುವುದು 50 ಕೋಟಿ ರೂ. ಮಾತ್ರ.
- ಆದಾಯವೂ ಕಡಿಮೆಯಾಯಿತು. ನಿರ್ವಹಣಾ ಖರ್ಚು-ವೆಚ್ಚ ಮಾತ್ರ ಕಡಿಮೆಯಾಗಿಲ್ಲ.
ಮೈಸೂರು: ನಿವೃತ್ತ ನೌಕರರಿಗೆ ಪಿಂಚಣಿ ಕೊಡಲು ವಿವಿಯಲ್ಲಿ ದುಡ್ಡಿಲ್ಲ. ಈಗಲೂ ಪರದಾಡುವ ಸ್ಥಿತಿ ಮುಂದುವರಿದಿದೆ ಎಂದು ಮೈಸೂರು ವಿಶ್ವವಿದ್ಯಾಲಯ ಕುಲಪತಿ ಪ್ರೊ.ಎನ್.ಕೆ.ಲೋಕನಾಥ್ ಅಸಹಾಯಕತೆ ವ್ಯಕ್ತಪಡಿಸಿದರು.
ಪಿಂಚಣಿಗಾಗಿ 157 ಕೋಟಿ ರೂ.ಬೇಕು. ಆದರೆ ಸರ್ಕಾರದಿಂದ ಬರುತ್ತಿರುವುದು 50 ಕೋಟಿ ರೂ. ಮಾತ್ರ. ಇದರಿಂದ ಸಮಸ್ಯೆ ಸೃಷ್ಟಿಯಾಗಿದೆ. ಈ ಕುರಿತು ರಾಜ್ಯ ಸರ್ಕಾರ ಗಮನ ಸೆಳೆಯಲಾಗಿದೆ. ವಿವಿಯ ಪಿಂಚಣಿ ನಿಧಿಯಲ್ಲಿ ನಿರ್ವಹಿಸುವಂತೆ ಸೂಚಿಸಲಾಗಿತ್ತು. ಅದೂ ಹೋದ ವರ್ಷ ಬರಿದಾಗಿದೆ. ಕರೊನಾ ಸಂದರ್ಭದಲ್ಲಿ ಪಿಂಚಣಿಗೆ ಸರ್ಕಾರದ ಆರ್ಥಿಕ ನೆರವು ತಗ್ಗಿದೆ. ಬಳಿಕ ಸುಧಾರಣೆಯಾಗಿಲ್ಲ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.
ಹಿಂದೆ ಮೈವಿವಿ ಶಿವಮೊಗ್ಗ, ಮಂಗಳೂರುವರೆಗೆ ಕಾರ್ಯವ್ಯಾಪ್ತಿ ಇತ್ತು. ಆದರೀಗ ಮೈಸೂರು ಜಿಲ್ಲೆಷ್ಟೇ ಸೀಮಿತವಾಗಿದೆ. ಆದಾಯವೂ ಕಡಿಮೆಯಾಯಿತು. ನಿರ್ವಹಣಾ ಖರ್ಚು-ವೆಚ್ಚ ಮಾತ್ರ ಕಡಿಮೆಯಾಗಿಲ್ಲ. ಆದ್ದರಿಂದ ನಿರ್ವಹಣೆ ಮೊದಲಾದವುಗಳಿಗೆ ಖರ್ಚು-ವೆಚ್ಚ ನಿಭಾಯಿಸಲು ಸರ್ಕಾರದ ಆರ್ಥಿಕ ನೆರವು ಬೇಕಾಗಿದೆ. ಜತೆಗೆ, 14 ವರ್ಷಗಳಿಂದ ಬೋಧಕರ ನೇಮಕಾತಿ ಆಗಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.