- ಕಡಂಬೂರ್ ನಿಲ್ದಾಣದಲ್ಲಿ ಪ್ರಾಯೋಗಿಕವಾಗಿ ನಿಲುಗಡೆ
ಮೈಸೂರು: ಮೈಸೂರು- ಟ್ಯುಟಿಕೋರಿನ್- ಮೈಸೂರು ಎಕ್ಸ್ ಪ್ರೆಸ್ ರೈಲಿಗೆ ಕಡಂಬೂರ್ ನಿಲ್ದಾಣದಲ್ಲಿ ಪ್ರಾಯೋಗಿಕವಾಗಿ ನಿಲುಗಡೆಯನ್ನು ನೀಡಲು ದಕ್ಷಿಣ ರೈಲ್ವೆಯು ನಿರ್ಧರಿಸಿದೆ.
ಮೈಸೂರು -ಟ್ಯುಟಿಕೋರಿನ್‌ಗೆ ತೆರಳುವ ರೈಲು (ಸಂಖ್ಯೆ 16236) ಬೆಳಗ್ಗೆ 9.13ಕ್ಕೆ ಕಡಂಬೂರ್ ನಿಲ್ದಾಣಕ್ಕೆ ಬರಲಿದ್ದು, 9.15ಕ್ಕೆ ಪ್ರಯಾಣ ಮುಂದುವರಿಸಲಿದೆ.
ಅದೇ ರೀತಿ ಟ್ಯುಟಿಕೋರಿನ್- ಮೈಸೂರಿಗೆ ಮರಳುವ ರೈಲು (ಸಂಖ್ಯೆ 16235) ಸಂಜೆ 6.14ಕ್ಕೆ ಕಡಂಬೂರ್ ನಿಲ್ದಾಣಕ್ಕೆ ಆಗಮಿಸಿ, 6.16ಕ್ಕೆ ಅಲ್ಲಿಂದ ಹೊರಡಲಿದೆ ಎಂದು ರೈಲ್ವೆ ಪ್ರಕಟಣೆ ತಿಳಿಸಿದೆ.