ಮೈಸೂರು ನಗರಪಾಲಿಕೆ ಆಯುಕ್ತರಾಗಿ ವರ್ಗವಣೆಗೊಂಡಿರುವ ಎಂ.ಕೆ.ಸವಿತಾ ಅವರಿಗೆ ಬುಧವಾರ ನಿರ್ಗಮಿತ ಆಯುಕ್ತ ಶೇಖ್ ತನ್ವೀರ್ ಆಸಿಫ್ ಹೂ ಗುಚ್ಛನೀಡಿ ಅಧಿಕಾರ ಹಸ್ತಾಂತರಿಸಿದರು.
- ಈ ಬಾರಿ ಮತ್ತೆ ಮೈಸೂರು ಸ್ವಚ್ಛತೆ ಪಾಲನೆಯಲ್ಲಿ ಮೊದಲ ಸ್ಥಾನಕ್ಕೇರುವಂತೆ ಪ್ರಯತ್ನಿಸುವುದೇ ಮೊದಲ ಆದ್ಯತೆ
- ಈಗಾಗಲೇ ಅಧಿಕಾರಿಗಳು ಸ್ವಚ್ಛ ಸರ್ವೇಕ್ಷಣ ಕೆಲಸವನ್ನು ತ್ವರಿತವಾಗಿ ಮಾಡುತ್ತಿದ್ದಾರೆ. ಅದಕ್ಕೆ ಮತ್ತಷ್ಟು ವೇಗ ನೀಡಲಾಗುವುದು
ಮೈಸೂರು:ಮೈಸೂರು ನಗರಪಾಲಿಕೆ ಆಯುಕ್ತರಾಗಿ ಎಂ.ಕೆ.ಸವಿತಾ ಆಧಿಕಾರ ಸ್ವೀಕರಿಸಿದರು. ನಿರ್ಗಮಿತ ಆಯುಕ್ತ ಶೇಖ್ ತನ್ವೀರ್ ಆಸಿಫ್ ಅವರು ನೂತನ ಆಯುಕ್ತರಿಗೆ ಹೂ ಗುಚ್ಛನೀಡಿ ಅಧಿಕಾರ ಹಸ್ತಾಂತರಿಸಿದರು.
ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಸವಿತಾ, ಪ್ರವಾಸಿತಾಣ, ಸಾಂಸ್ಕೃತಿಕ ನಗರವಾಗಿರುವ ಮೈಸೂರಿನಲ್ಲಿ ಸ್ವಚ್ಛತೆಗೆ ಮೊದಲ ಅದ್ಯತೆ ನೀಡಲಾಗುವುದು. ಈಗ ಸ್ವಚ್ಛ ಸರ್ವೇಕ್ಷಣ ಕೆಲಸಗಳು ನಡೆಯುತ್ತಿವೆ. ಈ ಬಾರಿ ಮತ್ತೆ ಮೈಸೂರು ಸ್ವಚ್ಛತೆ ಪಾಲನೆಯಲ್ಲಿ ಮೊದಲ ಸ್ಥಾನಕ್ಕೇರುವಂತೆ ಪ್ರಯತ್ನಿಸುವುದೇ ಮೊದಲ ಆದ್ಯತೆ ಎಂದರು.
ಈಗಾಗಲೇ ಅಧಿಕಾರಿಗಳು ಸ್ವಚ್ಛ ಸರ್ವೇಕ್ಷಣ ಕೆಲಸವನ್ನು ತ್ವರಿತವಾಗಿ ಮಾಡುತ್ತಿದ್ದಾರೆ. ಅದಕ್ಕೆ ಮತ್ತಷ್ಟು ವೇಗ ನೀಡಲಾಗುವುದು. ಪಾಲಿಕೆ ಕಂದಾಯ ಸಂಗ್ರಹಣೆ ಸೇರಿದಂತೆ ಸಂಪನ್ಮೂಲ ಕ್ರೋಡೀಕರಣಕ್ಕೂ ಗಮನ ನೀಡಲಾಗುವುದು ಎಂದು ಹೇಳಿದರು.
ಸುಪ್ರೀಂಕೋರ್ಟ್ ನಿರ್ದೇಶನದ ಮೇರೆಗೆ ಈಗಾಗಲೇ ಬೆಂಗಳೂರಿನಲ್ಲಿ ುಟ್‌ಪಾತ್ ತೆರವು ಕಾರ್ಯಾಚರಣೆ ನಡೆಯುತ್ತಿದೆ. ಮೈಸೂರಿನಲ್ಲೂ ಹಂತ ಹಂತವಾಗಿ ುಟ್‌ಪಾತ್ ತೆರವು ಕಾರ್ಯಾಚರಣೆ ಮಾಡಲಾಗುವುದು ಎಂದರು.
ಮೈಸೂರು ನಗರಕ್ಕೆ ತನ್ನದೇ ಆದ ಸೌಂದರ್ಯ ಮತ್ತು ಇತಿಹಾಸವಿದೆ. ಹೀಗಾಗಿ ರಸ್ತೆ ಬದಿ ವ್ಯಾಪಾರಿಗಳ ಜೀವನಕ್ಕೂ ತೊಂದರೆ ಆಗದ ರೀತಿಯಲ್ಲಿ ುಟ್‌ಪಾತ್ ತೆರವು ಹಾಗೂ ಸರ್ಕಾರಿ ಜಾಗಗಳ ಒತ್ತುವರಿ ತೆರವು ಕಾರ್ಯ ಮಾಡಲಾಗುವುದು ಎಂದು ತಿಳಿಸಿದರು.
ನಗರದಲ್ಲಿ ಮೂರನೇ ಹಂತದಲ್ಲಿ ಎಸ್‌ಐಆರ್ ಪರಿಷ್ಕರಣೆ ಕಾರ್ಯ ನಡೆಯುತ್ತಿದೆ. ಅದನ್ನು ಯಾವುದೇ ರೀತಿ ಗೊಂದಲ ಉಂಟಾಗದಂತೆ ಕ್ರಮ ವಹಿಸುವುದು. ಇದಕ್ಕೆ ಎಲ್ಲರೂ ಸಹಕಾರ ನೀಡಬೇಕು ಎಂದು ಕೋರಿದರು.