ಸರಗೂರು ತಾಲೂಕಿನ ಮೊಳೆಯೂರು ಗ್ರಾಮದಲ್ಲಿ ಮಂಗಳವಾರ ರಸ್ತೆ ಅಭಿವೃದ್ಧಿ ಕಾಮಗಾರಿಗೆ ಶಾಸಕ ಅನಿಲ್ ಚಿಕ್ಕಮಾದು ಭೂಮಿ ಪೂಜೆ ನೆರವೇರಿಸಿದರು. ಕಂದೇಗಾಲ ಶಿವರಾಜು, ಚೆನ್ನಿಪುರ ಚಲುವರಾಜು, ಎಸ್.ಎನ್.ನಾಗರಾಜು, ಕೋಟೆ ಶಿವಪ್ಪ, ಮೊಳೆಯೂರು ಆನಂದ್, ಗುಣಪಾಲ್, ಶಂಭುಲಿಂಗನಾಯಕ, ದೇವಲಾಪುರ ಪ್ರಭಾಕರ್, ಎಂ.ಕೆ.ಹರಿದಾಸ್ ಇತರರು ಇದ್ದರು.
ಕ್ಷೇತ್ರದ ಕಾಡಂಚಿನ ಗ್ರಾಮಗಳ ಅಭಿವೃದ್ಧಿಗೆ ಹೆಚ್ಚಿನ ಆದ್ಯತೆ ನೀಡಲಾಗಿದ್ದು, ಬಹುತೇಕ ಗ್ರಾಮಗಳಲ್ಲಿ ಸಿಸಿ ರಸ್ತೆ, ಚರಂಡಿ, ಡಾಂಬರೀಕರಣ ಸಂಪೂರ್ಣ ಯಶಸ್ವಿಯಾಗಿದೆ ಎಂದು ಶಾಸಕ ಅನಿಲ್ ಚಿಕ್ಕಮಾದು ತಿಳಿಸಿದರು.
ತಾಲೂಕಿನ ದೇವಲಾಪುರ ಹುಂಡಿ, ಬಾಡಗ, ಹೊಸಕೋಟೆ, ಕಂದಲಿಕೆ ತಿಟ್ಟು, ಮೊಳೆಯೂರು, ನಡಾಡಿ, ಬಂಕವಾಡಿ, ಗದ್ದೆಹಳ್ಳ, ಸಾಗರೆ ಗ್ರಾಮಗಳಲ್ಲಿ ಮಂಗಳವಾರ ಸುಮಾರು 3.5 ಕೋಟಿ ರೂ. ವೆಚ್ಚದ ಅಭಿವೃದ್ಧಿ ಕಾಮಗಾರಿಗೆ ಭೂಮಿಪೂಜೆ ನೆರವೇರಿಸಿ ಮಾತನಾಡಿದರು. ಮೈಸೂರು-ಮಾನಂದವಾಡಿ 4 ಪಥದ ರಸ್ತೆ ವಿಸ್ತರಣೆಗೆ ಶೀಘ್ರದಲ್ಲೇ ಭೂಮಿ ಪೂಜೆ ನೆರವೇರಿಸಲಾಗುವುದು ಎಂದರು.
ಜಿಲ್ಲೆಯಲ್ಲೇ ಅತ್ಯಂತ ವಿಶಾಲ ಕ್ಷೇತ್ರವಾದ ಎಚ್.ಡಿ.ಕೋಟೆ ಅತ್ಯಂತ ಹಿಂದುಳಿದ ತಾಲೂಕಾಗಿದೆ. ಈ ಹಿನ್ನೆಲೆಯಲ್ಲಿ ಕಾಂಗ್ರೆಸ್ ಸರಕಾರ ಹೆಚ್ಚಿನ ಕಾಳಜಿ ವಹಿಸಿ ಕ್ಷೇತ್ರದ ಅಭಿವೃದ್ಧಿಗೆ ಅಗತ್ಯ ಅನುದಾನ ನೀಡಿದ್ದು, ಅದರಂತೆ ಅಭಿವೃದ್ಧಿ ಕಾರ್ಯಗಳನ್ನು ಕೈಗೊಳ್ಳಲಾಗುತ್ತಿದೆ. ಮುಂದಿನ ದಿನಗಳಲ್ಲಿಯೂ ಕ್ಷೇತ್ರದ ಅಭಿವೃದ್ಧಿಗೆ ಹೆಚ್ಚು ಶ್ರಮಿಸಲಾಗುವುದು ಎಂದರು.
ಹಾಡಿ ಜನರಿಗೆ 6 ತಿಂಗಳಿದ್ದ ಪಡಿತರ ವಿತರಣೆಯನ್ನು ಸರ್ಕಾರದ ಗಮನ ಸೆಳೆದು ವರ್ಷಪೂರ್ತಿ ಕೊಡುವಂತೆ ಮಾಡಿಸಿದ್ದೇನೆ. ಸ್ಥಗಿತಗೊಂಡ ವೃದ್ಧಾಪ್ಯ ವೇತನದ ಬಗ್ಗೆ ಸರ್ಕಾರದ ಗಮನ ಸೆಳೆಯಲಾಗುವುದು. ಮಳೆ ಕೊರತೆಯಿಂದಾಗಿ ಕೆರೆಗಳಲ್ಲಿ ನೀರಿಲ್ಲದೆ ಒಣಗುತ್ತಿವೆ. ಹೀಗಾಗಿ ಕೆರೆಗಳಿಗೆ ನೀರು ತುಂಬಿಸಲು ಕ್ರಮ ವಹಿಸಲಾಗುವುದು. ಮೈಸೂರು-ಮಾನಂದವಾಡಿ ರಸ್ತೆ ವಿಸ್ತರಣೆಗೆ ಅನುದಾನ ಬಿಡುಗಡೆಯಾಗಿದ್ದು, ಜನವರಿ ತಿಂಗಳಲ್ಲಿ ಭೂಮಿಪೂಜೆ ನೆರವೇರಿಸಲಾಗುವುದು ಎಂದರು.
ಕಾಂಗ್ರೆಸ್ ಮುಖಂಡರಾದ ದೇವಲಾಪುರ ಸಿದ್ದರಾಜು, ಬಿ.ಮಟಕೆರೆ ಅಣ್ಣಯ್ಯಸ್ವಾಮಿ ಮಾತನಾಡಿದರು. ಇದೇ ಸಂದರ್ಭದಲ್ಲಿ ಕಾಡಂಚಿನ ಜನರು ಅರಣ್ಯ ಇಲಾಖೆ ಅಧಿಕಾರಿಗಳು ಕಾಡುಪ್ರಾಣಿಗಳ ಹಾವಳಿ ತಡೆಗೆ ಸೂಕ್ತ ಕ್ರಮ ವಹಿಸಬೇಕು ಎಂದು ಮನವಿ ಮಾಡಿದರು.
ಇನ್ನು ಕೆಲವರು ಬೇಲದಕುಪ್ಪೆ ಜಾತ್ರೆ ಹಿನ್ನೆಲೆಯಲ್ಲಿ ಹೆಚ್ಚಿನ ಬಸ್ ಸೌಲಭ್ಯ ಕಲ್ಪಿಸುವಂತೆ ಶಾಸಕರಲ್ಲಿ ಹೇಳಿಕೊಂಡರು. ಆಗ ಡಿಪೋ ಮ್ಯಾನೇಜರ್ ತ್ಯಾಗರಾಜು ಅವರಿಗೆ ಪೋನ್ ಕರೆ ಮಾಡಿ, ಹೆಚ್ಚುವರಿ ಬಸ್ ಕಲ್ಪಿಸುವಂತೆ ಸೂಚನೆ ನೀಡಿದರು.
ಕೋಟೆ ಕ್ಷೇತ್ರದ ಯೂತ್ ಕಾಂಗ್ರೆಸ್ ಅಧ್ಯಕ್ಷ ಕಂದೇಗಾಲ ಶಿವರಾಜು, ಗ್ಯಾರಂಟಿ ಅನುಷ್ಠಾನ ಸಮಿತಿ ಅಧ್ಯಕ್ಷ ಚೆನ್ನಿಪುರ ಚಲುವರಾಜು, ಮುಖಂಡರಾದ ಎಸ್.ಎನ್.ನಾಗರಾಜು, ಕೋಟೆ ಶಿವಪ್ಪ, ಮೊಳೆಯೂರು ಆನಂದ್, ಗುಣಪಾಲ್, ಶಂಭುಲಿಂಗನಾಯಕ, ದೇವಲಾಪುರ ಪ್ರಭಾಕರ್, ಎಂ.ಕೆ.ಹರಿದಾಸ್, ದೊಡ್ಡಪ್ಪಾಜಿ, ಗುಡಿಗೌಡ ಶೇಖರ್, ಎಂ.ಎಸ್.ಜವರಾಜು, ನಡಾಡಿ ಮಲ್ಲರಾಜು, ರಮೇಶ್, ಲ್ಯಾಂಡ್ ಆರ್ಮಿ ಇಂಜಿನಿಯರ್‌ಗಳಾದ ಕೀರ್ತನಾ ಪ್ರಭು, ಅಭಿಷೇಕ್, ಎಂ.ಎಚ್.ಕುಮಾರ್, ಎಸ್.ಎನ್.ನಾಗರಾಜು, ಎಂ.ಸಿ.ಬೀರೇಗೌಡ, ಎಂ.ಕೆ.ಜವನಪ್ಪ, ಮೊಳೆಯೂರು ಶಿವಮೂರ್ತಿ, ಎಂ.ಎಸ್.ನಾಗೇಶ್, ರಾಜೇಶ್, ಬೀರೇಗೌಡ, ಹುಚ್ಚೇಗೌಡ, ಕಳಸೂರು ಬಸವರಾಜು, ಉಯ್ಯಂಬಳ್ಳಿ ನಾಗರಾಜು, ಕೊತ್ತೇಗಾಲ ಪುಟ್ಟೇಗೌಡ, ಮಂಜುನಾಥ್ ಇತರರು ಇದ್ದರು.