ಮೈಸೂರು ಪತ್ರಕರ್ತರ ಭವನದಲ್ಲಿ ಮೈಸೂರು ಕನ್ನಡ ವೇದಿಕೆಯಿಂದ ಸಾಧಕ ಮಹಿಳೆಯರನ್ನು ಸನ್ಮಾನಿಸಲಾಯಿತು. 
ಮೈಸೂರು

ಮೈಸೂರು ಕನ್ನಡ ವೇದಿಕೆಯಿಂದ ಸಾಧಕ ಮಹಿಳೆಯರಿಗೆ ಸನ್ಮಾನ

ಮೈಸೂರು: ಮನುಷ್ಯ ಹೆಚ್ಚು ಬುದ್ಧಿವಂತನಾದಷ್ಟು ವಿಜ್ಞಾನದ ಬೆಳವಣಿಗೆಗಳನ್ನು ಕೆಟ್ಟ ಉದ್ದೇಶಗಳಿಗೆ ಬಳಸಿಕೊಳ್ಳುತ್ತಿದ್ದಾನೆ. ಈ ಕಾರಣದಿಂದಲೇ ಇಂದಿನ ಯುದ್ಧಗಳು ಮೊದಲಿಗಿಂತ ಹೆಚ್ಚು ವಿನಾಶಕಾರಿಯಾಗುತ್ತಿವೆ ಎಂದು ಕೆಎಎಸ್ ಅಧಿಕಾರಿ ಬಿ.ಎನ್. ವೀಣಾ ಹೇಳಿದರು.
ಮೈಸೂರು ಕನ್ನಡ ವೇದಿಕೆ ವತಿಯಿಂದ ನಗರದ ಪತ್ರಕರ್ತರ ಭವನದಲ್ಲಿ ಮಂಗಳವಾರ ಆಯೋಜಿಸಿದ್ದ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ ಕಾರ್ಯಕ್ರಮದಲ್ಲಿ ಸಾಧಕ ಮಹಿಳೆಯರಿಗೆ ಮಹಿಳಾ ರತ್ನ ರಮಾಬಾಯಿ ಡಾ.ಬಿ.ಆರ್. ಅಂಬೇಡ್ಕರ್ ಪ್ರಶಸ್ತಿ ಪ್ರದಾನ ಮಾಡಿ ಮಾತನಾಡಿದರು.
ಇತಿಹಾಸವನ್ನು ತಿಳಿಯದವನು ಇತಿಹಾಸ ಸೃಷ್ಟಿಸಲಾರ ಎಂಬ ಮಾತು ಸದಾ ಸೂಕ್ತವಾಗಿದೆ. ಇದನ್ನು ಎಂದಿಗೂ ಮರೆಯಬಾರದು. ಇದೇ ವೇಳೆ ಪ್ರತಿಯೊಬ್ಬ ಪುರುಷನ ಸಾಧನೆ ಹಿಂದೆಯೋ ಓರ್ವ ಮಹಿಳೆ ಇದ್ದೇ ಇರುತ್ತಾಳೆ. ಅಂಬೇಡ್ಕರ್ ಅವರ ಪತ್ನಿ ರಮಾಬಾಯಿ ಹೆಚ್ಚು ಓದಿದವರಲ್ಲ. ಆದರೆ ಅಂಬೇಡ್ಕರ್ ಅವರ ಸಾಧನೆಗೆ ಅವರ ಕೊಡುಗೆಯೂ ಅಪಾರ. ಇಡೀ ಕುಟುಂಬ ನಿರ್ವಹಿಸುತ್ತ ಅದರ ಹೊರೆ ಅಂಬೇಡ್ಕರ್ ಅವರ ಮೇಲೆ ಬೀಳದಂತೆ ನೋಡಿಕೊಂಡರು ಎಂದರು.
ಈ ಸಂದರ್ಭ ವಿವಿಧ ಕ್ಷೇತ್ರದ ಸಾಧಕರಾದ ಕಮಲ ನಟರಾಜ್, ಭಾನವಿ ಅರುಣ್ ಕುಮಾರ್, ಸುಶೀಲ, ಲಕ್ಷ್ಮೀ, ಚಾಂದಿನಿ, ಮಹದೇವಮ್ಮ ರಮೇಶ್, ಭಾಗ್ಯಲಕ್ಷ್ಮೀ, ಮಮತಶ್ರೀ, ಗೌತಮಿ ರಮೇಶ್, ವಿ.ಪಿ. ಸುಶೀಲ, ರೇಣುಕಾದೇವಿ ಅವರಿಗೆ ಮಹಿಳಾ ರತ್ನ ರಮಾಬಾಯಿ ಡಾ.ಬಿ.ಆರ್. ಅಂಬೇಡ್ಕರ್ ಪ್ರಶಸ್ತಿ ಪ್ರದಾನ ಮಾಡಲಾಯಿತು.
ರಮಾಬಾಯಿ ನೀಡಿದ ಸಹಕಾರದಿಂದ ಅಂಬೇಡ್ಕರ್ ಅತ್ಯುತ್ತಮ ಸಂವಿಧಾನ ರಚಿಸಲು ಸಾಧ್ಯವಾಯಿತು. ಅದರ ಪರಿಣಾಮವಾಗಿ ಇಂದು ಬಹಳಷ್ಟು ಮಹಿಳೆಯರು ಶೋಷಣೆಯಿಂದ ಹೊರ ಬಂದು, ಅದರ ವಿರುದ್ಧ ಹೋರಾಡುವಂತಾಗಿದೆ ಎಂದರು.
ಜಿಲ್ಲಾ ಪತ್ರಕರ್ತರ ಸಂಘದ ಅಧ್ಯಕ್ಷ ಕೆ. ದೀಪಕ್, ನಗರ ಗ್ಯಾರಂಟಿ ಯೋಜನೆ ಅನುಷ್ಠಾನ ಸಮಿತಿ ಅಧ್ಯಕ್ಷೆ ಕೆ. ಪುಷ್ಪವಲ್ಲಿ, ವೇದಿಕೆ ಅಧ್ಯಕ್ಷ ಎಸ್. ಬಾಲಕೃಷ್ಣ, ಸಮಾಜ ಸೇವಕ ರಘುರಾಂ ವಾಜಪೇಯಿ ಹಾಗೂ ಇತರರು ಇದ್ದರು.
ಮೈಸೂರು ಕನ್ನಡ ವೇದಿಕೆ ನಗರದ ಪತ್ರಕರ್ತರ ಭವನದಲ್ಲಿ ಮಂಗಳವಾರ ಆಯೋಜಿಸಿದ್ದ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ ಕಾರ್ಯಕ್ರಮದಲ್ಲಿ ವಿವಿಧ ಕ್ಷೇತ್ರದ ಸಾಧಕರಾದ ಕಮಲ ನಟರಾಜ್, ಭಾನವಿ ಅರುಣ್ ಕುಮಾರ್, ಸುಶೀಲ, ಲಕ್ಷ್ಮೀ, ಚಾಂದಿನಿ, ಮಹದೇವಮ್ಮ ರಮೇಶ್, ಭಾಗ್ಯಲಕ್ಷ್ಮೀ, ಮಮತಶ್ರೀ, ಗೌತಮಿ ರಮೇಶ್, ವಿ.ಪಿ. ಸುಶೀಲ, ರೇಣುಕಾದೇವಿ ಅವರಿಗೆ ಮಹಿಳಾ ರತ್ನ ರಮಾಬಾಯಿ ಡಾ.ಬಿ.ಆರ್. ಅಂಬೇಡ್ಕರ್ ಪ್ರಶಸ್ತಿ ಪ್ರದಾನ ಮಾಡಲಾಯಿತು. ಬಿ.ಎನ್. ವೀಣಾ, ಕೆ. ದೀಪಕ್, ಕೆ. ಪುಷ್ಪವಲ್ಲಿ, ಎಸ್. ಬಾಲಕೃಷ್ಣ, ರಘುರಾಂ ವಾಜಪೇಯಿ ಹಾಗೂ ಇತರರು ಇದ್ದರು.