ಮೈಸೂರು ಜಿಲ್ಲಾ ಈಜು ಸಂಘದ ಈಜುಪಟುಗಳು
ಮೈಸೂರು: ಮಂಗಳೂರಿನಲ್ಲಿ ಇತ್ತೀಚೆಗೆ ನಡೆದ ರಾಷ್ಟ್ರ ಮಟ್ಟದ ಓಪನ್ ವಾಟರ್ ಈಜು ಸ್ಪರ್ಧೆಯಲ್ಲಿ ಮೈಸೂರು ಜಿಲ್ಲಾ ಈಜು ಸಂಘದ ಈಜುಪಟುಗಳು ಗಮನಾರ್ಹ ಪ್ರದರ್ಶನ ನೀಡಿದರು.
ಈಜುಪಟುಗಳಾದ ಲಕ್ಷ್ ನಂದೀಶ್ ಕುಮಾರ್, ದಕ್ಷಿಣ್ ಆರ್. ಗೌಡ, ಮೊಹಮ್ಮದ್ ಅರ್ಮಾನ್ ಸಮೀರ್, ಆದ್ಯ ಮಂಜುನಾಥ ಹಿರೇಮಠ, ಸಾನ್ವಿ ಎನ್. ರಾಜ್, ಬಿ.ಭುವಿ, ಚಿನ್ಮಯಿ ಉಡುಪ, ಸಿ.ಅದ್ವಿಕ್, ಆರ್ಯನ್ ಕವನ್ ಗೌಡ, ಎಂ.ಆರ್.ಚಾರ್ವಿ ಭಾಗಿಯಾಗಿ ಗಮನಾರ್ಹ ಪ್ರದರ್ಶನ ನೀಡಿದರು. ಮೈಸೂರು ವಿಶ್ವವಿದ್ಯಾಲಯದ ದೈಹಿಕ ಶಿಕ್ಷಣ ನಿರ್ದೇಶಕ ಡಾ. ರೇವಣಸಿದ್ದಪ್ಪ, ತರಬೇತುದಾರರಾದ ಸ್ಕಂದ ಆರ್.ಅಶ್ವಥ್, ಜೈ ಕುಮಾರ್ ಇದ್ದರು.