ಸೈಬರ್ ಕ್ರೈಂನ ಸಾಂದರ್ಭಿಕ ಚಿತ್ರ
ಮೈಸೂರು: ವ್ಯಕ್ತಿಯೊಬ್ಬರ ಮೊಬೈಲ್ ಹ್ಯಾಕ್‌ಮಾಡಿ ಬರೋಬ್ಬರಿ 2.96 ಲಕ್ಷ ರೂ.ಗಳನ್ನು ಕಳ್ಳರು ದೋಚಿದ್ದಾರೆ.
ಗೋಕುಲಂ 2ನೇ ಹಂತದ ಮಹಾಲಿಂಗಪ್ಪ ಎಂಬವರೇ ಹಣ ಕಳೆದುಕೊಂಡವರು. ಇವರ ಬಳಿ 5.37 ಲಕ್ಷ ರೂ. ಇತ್ತು. ಇವರು
ಫೋನ್‌ಪೇ ಮೂಲಕ ಬ್ಯಾಲೆನ್ಸ್ ಚೆಕ್ ಮಾಡಿದ 2.96 ಲಕ್ಷ ರೂ.ಗಳನ್ನು ಹ್ಯಾಕರ್‌ಗಳು ದೋಚಿರುವುದು ಕಂಡು ಬಂತು. ಆರೋಪಿಗಳು ಇವರ ಖಾತೆಯಿಂದ ಬೇರೆ ಖಾತೆಗೆ ಹಲವು ಬಾರಿ ಹಣವನ್ನು ವರ್ಗಾವಣೆ ಮಾಡಿದ್ದಾರೆ. ಹಣ ಕಳೆದುಕೊಂಡ ಮಹಾಲಿಂಗಪ್ಪ ಬುಧವಾರ ನೀಡಿದ ದೂರಿನ ಮೇರೆಗೆ ಜಯಲಕ್ಷ್ಮೀಪುರಂ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಹೆಡ್‌ಕಾನ್ಸ್‌ಟೇಬಲ್ ಕಾಣೆ: ಅಮಾನತುಗೊಂಡಿದ್ದ ನಗರ ಸಶಸ್ತ್ರ ಮೀಸಲು ಪಡೆ (ಸಿಎಆರ್) ಹೆಡ್‌ಕಾನ್ಸ್‌ಟೇಬಲ್ ಧನಂಜಯ್ ಕಾಣೆಯಾಗಿದ್ದಾರೆ.
ದಾಖಲಿಸಿಕೊಳ್ಳಲಾಗಿದೆ. ಕಾಣೆಯಾಗಿರುವ ಧನಂಜಯ್ ದೇವರಾಜ ಪೊಲೀಸ್ ಠಾಣೆಯಲ್ಲಿ ಚಾಲಕರಾಗಿ ಕರ್ತವ್ಯ ನಿರ್ವಹಿಸುತ್ತಿದ್ದರು. ಕೆಲವು ದಿನಗಳ ಹಿಂದೆ ಕರ್ತವ್ಯದ ವೇಳೆ ದೇವರಾಜ ಠಾಣೆಯ ಸಿಬ್ಬಂದಿ ಉಮೇಶ್ ಅವರೊಂದಿಗೆ 112 ಗರುಡ ವಾಹನದಲ್ಲಿ ಕ್ಷುಲ್ಲಕ ಕಾರಣಕ್ಕೆ ವಾಗ್ವಾದ ನಡೆಸಿದ್ದರು. ನಂತರ ಇಬ್ಬರನ್ನು ಅಮಾನತುಗೊಳಿಸಿದ್ದರು. ಮೂರು ದಿನಗಳ ಹಿಂದೆ ಹೂಟಗಳ್ಳಿ ಹೌಸಿಂಗ್ ಬೋರ್ಡ್ ನಿವಾಸದಿಂದ ಹೊರಟ ಧನಂಜಯ್ ಮನೆಗೆ ಮರಳಿಲ್ಲ. ಧನಂಜಯ್ ಅವರ ಪತ್ನಿ ರಾಜೇಶ್ವರಿ ನೀಡಿದ ದೂರಿನ ಮೇರೆಗೆ ವಿಜಯನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.