ಮಾಜಿ ಸಚಿವ ಡಾ.ಭೀಮಣ್ಣ ಖಂಡ್ರೆ ಅವರ ನಿಧನ ಹಿನ್ನೆಲೆಯಲ್ಲಿ ತಿ.ನರಸೀಪುರ ಪಟ್ಟಣದ ವಿವೇಕಾನಂದ ನಗರದಲ್ಲಿರುವ ಸಭಾಭವನದಲ್ಲಿ ವೀರಶೈವ ಲಿಂಗಾಯತ ಮಹಾಸಭಾದಿಂದ ಭಾವಪೂರ್ಣ ಶ್ರದ್ಧಾಂಜಲಿ ಸಲ್ಲಿಲಾಯಿತು. ಸಿ.ಎಂ.ಪ್ರಕಾಶ್, ಎಸ್.ಬಿ.ಸುಗಂಧರಾಜು, ಪೂಜಿಟ್ ಮೆಡಿಕಲ್ಸ್ ಕುಮಾರ್, ಪರಮೇಶ್ ಪಟೇಟ್, ಕೆ.ಎನ್.ಅಶೋಕ್ ಇತರರು ಇದ್ದರು. 
ಮೈಸೂರು

ಡಾ.ಭೀಮಣ್ಣ ಖಂಡ್ರೆರಿಗೆ ಶ್ರದ್ಧಾಂಜಲಿ

ಲೋಕೇಶ್ ಮನು. ಡಿ
ತಿ.ನರಸೀಪುರ: ಮಾಜಿ ಸಚಿವ ಡಾ.ಭೀಮಣ್ಣ ಖಂಡ್ರೆ ಅವರ ನಿಧನ ಹಿನ್ನೆಲೆಯಲ್ಲಿ ಪಟ್ಟಣದ ವಿವೇಕಾನಂದ ನಗರದಲ್ಲಿರುವ ಸಭಾ ಭವನದಲ್ಲಿ ಶನಿವಾರ ವೀರಶೈವ ಲಿಂಗಾಯತ ಮಹಾಸಭಾದ ವತಿಯಿಂದ ಭಾವಪೂರ್ಣ ಶ್ರದ್ಧಾಂಜಲಿ ಸಲ್ಲಿಸಲಾಯಿತು.
ಅಖಿಲ ಭಾರತ ವೀರಶೈವ ಮಹಾಸಭೆಯ ನಿಕಟಪೂರ್ವ ಅಧ್ಯಕ್ಷ ಹಾಗೂ ಗೌರವಾಧ್ಯಕ್ಷರಾಗಿಯೂ ಸಮುದಾಯದ ನೇತಾರರೂ ಆಗಿದ್ದ ಮಾಜಿ ಮಂತ್ರಿ ಡಾ.ಭೀಮಣ್ಣ ಖಂಡ್ರೆ ಅವರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ, ಪುಷ್ಪಾರ್ಚನೆ ಮಾಡಿದ ಬಳಿಕ ಕೆಲ ನಿಮಿಷಗಳ ಕಾಲ ಮೌನಾಚರಿಸಿ ಮಹಾಸಭಾದ ತಾಲೂಕು ಘಟಕದಿಂದ ಭಾವಪೂರ್ಣ ಶ್ರದ್ಧಾಂಜಲಿ ಸಲ್ಲಿಸಲಾಯಿತು.
ಅಧ್ಯಕ್ಷ ಸಿ.ಎಂ.ಪ್ರಕಾಶ್ ನುಡಿನಮನ ಸಲ್ಲಿಸಿದರು. ಕಾರ್ಯದರ್ಶಿಗಳಾದ ಕಾರ್ ಮಲ್ಲಪ್ಪ, ಪರಮೇಶ್ ಪಟೇಲ್, ಯುವ ಘಟಕದ ಅಧ್ಯಕ್ಷ ಕೆ.ಎನ್.ಅಶೋಕ್ ನಿರ್ದೇಶಕರಾದ ಎಸ್.ಬಿ.ಸುಗಂಧರಾಜು, ತೋಂಟೇಶ್, ಪರಶಿವಮೂರ್ತಿ ಉಕ್ಕಲ್ಗೆರೆ , ಕೆಇಬಿ ಸಿದ್ದಲಿಂಗಸ್ವಾಮಿ, ಪೂಜಿತ್ ಮೆಡಿಕಲ್ ಕುಮಾರ್, ಮಹದೇವಸ್ವಾಮಿ ಹಲವಾರು, ಮುಖಂಡರಾದ ರಾಜಪ್ಪ, ಅಕ್ಕಿ ನಾಗಪ್ಪ ಹಾಗೂ ಇತರರು ಇದ್ದರು.