ತಿ.ನರಸೀಪುರ ಪಟ್ಟಣದ ಬಿಜೆಪಿ ಕಚೇರಿಯಲ್ಲಿ ಗುರುವಾರ ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರ ಜನ್ಮದಿನವನ್ನು ಆಚರಿಸಲಾಯಿತು. ಶಿವಕುಮಾರ್, ಲೋಕೇಶ್, ನಂಜುಂಡಸ್ವಾಮಿ, ಕಿರಣ್, ರಾಜಶೇಖರ ಇತರರು ಇದ್ದರು. 
ಮೈಸೂರು

ತಿ.ನರಸೀಪುರದಲ್ಲಿ ಎ.ಬಿ.ವಾಜಪೇಯಿ ಜನ್ಮದಿನ ಆಚರಣೆ

ಲೋಕೇಶ್ ಮನು. ಡಿ
ತಿ.ನರಸೀಪುರ: ಪಟ್ಟಣದ ಬಿಜೆಪಿ ಕಚೇರಿಯಲ್ಲಿ ಗುರುವಾರ ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರ 101ನೇ ಜನ್ಮದಿನವನ್ನು ಸರಳವಾಗಿ ಆಚರಿಸಲಾಯಿತು.
ದೇಶ ಕಂಡಂತಹ ಅಜಾತ ಶತ್ರು, ಮುತ್ಸದ್ಧಿ ನಾಯಕ, ಭಾರತರತ್ನವಾಗಿ ಜನಮಾನಸದಲ್ಲಿ ಅಜರಾಮರರಾಗಿರುವ ಅಟಲ್ ಬಿಹಾರಿ ವಾಜಪೇಯಿ ಅವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿ, ಸಿಹಿಯನ್ನು ಹಂಚಿದರು. ವಾಜಪೇಯಿ ಅವರ ಆದರ್ಶ ಜೀವನ ಹಾಗೂ ಮಾದರಿ ಆಡಳಿತದ ಬಗ್ಗೆ ಪ.ಪಂ.ನಾಮನಿರ್ದೇಶಿತ ಮಾಜಿ ಸದಸ್ಯ ಎನ್.ಲೋಕೇಶ್ ತಿಳಿಸಿದರು. ಬಿಜೆಪಿ ಕ್ಷೇತ್ರಾಧ್ಯಕ್ಷ ಶಿವಕುಮಾರ್(ಸತ್ಯರಾಜ್), ಪುರಸಭೆ ಸದಸ್ಯ ಎಸ್.ಕೆ.ಕಿರಣ್, ಟೌನ್ ಅಧ್ಯಕ್ಷ ಕೆ.ನಂಜುಂಡಸ್ವಾಮಿ, ಯುವ ಮೋರ್ಚಾ ಅಧ್ಯಕ್ಷ ರಘು, ಮುಖಂಡರಾದ ಕೆ.ಮಹದೇವ ಶೆಟ್ಟಿ, ರಾಜಶೇಖರ, ದರ್ಶನ್, ಮಹದೇವ ಇದ್ದರು.