:ಪಿರಿಯಾಪಟ್ಟಣದ ಸಮಾಜ ಕಲ್ಯಾಣ ಇಲಾಖೆಯ ಕಚೇರಿ ಅಧಿಕ್ಷಕರಾಗಿ ಸೇವೆ ಸಲ್ಲಿಸಿ ನಿವೃತ್ತರಾದ ಎಚ್.ಕೆ.ದಮಯಂತಿ ಅವರನ್ನು ಇಲಾಖೆಯ ಸಿಬ್ಬಂದಿ ಸನ್ಮಾನಿಸಿ ಬೀಳ್ಕೊಟ್ಟರು. ಚಂದ್ರಶೇಖರ್, ಸಿದ್ದಲಿಂಗಶೆಟ್ಟಿ, ಲಲಿತಾ, ಬಿ.ಟಿ.ಮಹದೇವ್, ಸೀತಾ ಲಕ್ಷ್ಮೀ, ಪ್ರೇಮಾ, ದೇವಿ, ಇತರರು ಇದ್ದರು. 
ಮೈಸೂರು

ದಮಯಂತಿಗೆ ಬೀಳ್ಕೊಡುಗೆ

ಲೋಕೇಶ್ ಮನು. ಡಿ
ಪಿರಿಯಾಪಟ್ಟಣ: ತಾಲೂಕು ಸಮಾಜ ಕಲ್ಯಾಣ ಇಲಾಖೆಯ ಕಚೇರಿ ಅಧಿಕ್ಷಕರಾಗಿ ಸೇವೆ ಸಲ್ಲಿಸಿ ನಿವೃತ್ತಿ ಹೊಂದಿದ ಎಚ್.ಕೆ.ದಮಯಂತಿ ಅವರನ್ನು ಇಲಾಖೆ ವತಿಯಿಂದ ಸನ್ಮಾನಿಸಿ ಬೀಳ್ಕೊಡಲಾಯಿತು.
ಸಮಾಜ ಕಲ್ಯಾಣ ಇಲಾಖೆ ಸಹಾಯಕ ನಿರ್ದೇಶಕ ಚಂದ್ರಶೇಖರ್ ಮಾತನಾಡಿ, ಸರ್ಕಾರಿ ಉದ್ಯೋಗವು ನಿರಂತರ ಸಾರ್ವಜನಿಕ ಸೇವೆ ಮಾಡುವ ಕ್ಷೇತ್ರವಾಗಿದ್ದು, ಪ್ರಾಮಾಣಿಕತೆ ಹಾಗೂ ನಿಷ್ಠೆಯ ಮೂಲಕ ಕಚೇರಿಯಲ್ಲಿ ಅಧಿಕ್ಷಕರಾಗಿ ದಮಯಂತಿ ಅವರು ಸೇವೆ ಸಲ್ಲಿಸಿ ಇತರರಿಗೆ ಮಾದರಿಯಾಗಿದ್ದಾರೆ. ಇವರು ತಮ್ಮ ಅಧಿಕಾರದ ಅವಧಿಯಲ್ಲಿ ಕಚೇರಿಗೆ ಉಪಯೋಗವಾದ ಹಾಗೂ ಇಲಾಖೆಗೆ ಗೌರವ ತರುವ ರೀತಿಯಲ್ಲಿ ಕಾರ್ಯ ನಿರ್ವಹಿಸಿದ್ದಾರೆ. ಇವರ ನಿವೃತ್ತಿ ಜೀವನವು ಸುಖಕರವಾಗಿರಲಿ ಎಂದು ಶುಭ ಕೋರಿದರು.
ಅಭಿನಂದನೆ ಸ್ವೀಕರಿಸಿ ಮಾತನಾಡಿದ ದಮಯಂತಿ, ನಾನು ಹುದ್ದೆಗೆ ಸೇರಿದ ದಿನದಿಂದ ಇಲ್ಲಿಯವರೆಗೂ ಪ್ರಾಮಾಣಿಕವಾಗಿ ಸೇವೆ ಸಲ್ಲಿಸಿದ್ದೇನೆ ಹಾಗೂ ನನ್ನ ಸೇವೆ ಸಾಕಾರಗೊಳ್ಳಲು ಕಚೇರಿಯ ಸಿಬ್ಬಂದಿ ಸಹಕಾರ ನೀಡಿರುವುದು ಎಂದಿಗೂ ಮರೆಯಲಾಗದು ಎಂದರು.
ಮುಖ್ಯಶಿಕ್ಷಕ ಸಿದ್ದಲಿಂಗಶೆಟ್ಟಿ, ನಿಲಯ ಮೇಲ್ವಿಚಾರಕರಾದ ಲಲಿತಾ, ಬಿ.ಟಿ.ಮಹದೇವ್, ಸೀತಾ ಲಕ್ಷ್ಮೀ, ಪ್ರೇಮಾ, ದೇವಿ, ಸಿಬ್ಬಂದಿ ಅನಿತಾ, ಉಮೇಶ್, ವಿಶ್ವನಾಥ್, ಸಂತೋಷ, ಸುರೇಶ, ಕುಸುಮಾ, ರಾಧಾ, ಗೀತಾ, ಉಮಾ ಶಿವ, ಗುರು ಇತರರಿದ್ದರು.