ಗ್ರಾಪಂ ಆಡಳಿತ ಅಧಿಕಾರಿ ನೇಮಕ ಆದೇಶವನ್ನು ಹಿಂದಕ್ಕೆ ಪಡೆಯುವಂತೆ ಆಗ್ರಹಿಸಿ ನಂಜನಗೂಡು ತಾಲೂಕು ಕಚೇರಿ ಆವರಣದಲ್ಲಿ ಹೊರಳವಾಡಿ ಗ್ರಾಪಂ ಸದಸ್ಯ ಎಚ್. ಎಂ.ಮಲ್ಲೇಗೌಡ ಅವರು ತಹಸೀಲ್ದಾರ್ ಡಾ. ಸ್ಮಿತಾ ರಾಮು ಅವರಿಗೆ ಮನವಿ ಸಲ್ಲಿಸಿದರು.  
ಮೈಸೂರು

ಗ್ರಾಪಂ ಆಡಳಿತಾಧಿಕಾರಿ ನೇಮಕ ಆದೇಶ ವಾಪಗೆ ಆಗ್ರಹ

ಲೋಕೇಶ್ ಮನು. ಡಿ
ನಂಜನಗೂಡು: ಗ್ರಾಮ ಪಂಚಾಯಿತಿ ಆಡಳಿತ ಅಧಿಕಾರಿ ನೇಮಕವನ್ನು ಹಿಂಪಡೆದು ಚುನಾವಣೆ ನಡೆಯುವವರೆಗೆ ಹಾಲಿ ಆಡಳಿತ ಮಂಡಳಿಯನ್ನು ಮುಂದುವರಿಸುವಂತೆ ತಾಲೂಕಿನ ಹೊರಳವಾಡಿ ಗ್ರಾಪಂ ಸದಸ್ಯ ಎಚ್.ಎಂ.ಮಲ್ಲೇಗೌಡ ಬುಧವಾರ ತಹಸೀಲ್ದಾರ್ ಡಾ. ಸ್ಮಿತಾ ರಾಮು ಅವರಿಗೆ ಮನವಿ ಸಲ್ಲಿಸಿದರು.
ಹೊರಳವಾಡಿ ಗ್ರಾಮ ಪಂಚಾಯಿತಿಯಲ್ಲಿ ಆಡಳಿತ ಅಧಿಕಾರಿಗಳು ಸದಸ್ಯರಿಗೆ ಸುಳ್ಳು ಮಾಹಿತಿ ಮತ್ತು ದಾರಿ ತಪ್ಪಿಸುವ ಕೆಲಸ ಮಾಡುತ್ತಿದ್ದಾರೆ. ಸರಿಯಾದ ಮಾಹಿತಿಯನ್ನು ನೀಡುತ್ತಿಲ್ಲ. ಇದು ಪ್ರಜಾಪ್ರಭುತ್ವದ ಜನಾಧಿಕಾರಕ್ಕೆ ವಿರೋಧವಾಗಿದ್ದು ಸರ್ಕಾರ ಸದರಿ ಆದೇಶವನ್ನು ಹಿಂಪಡೆದು ಕರ್ನಾಟಕ ಗ್ರಾಮ ಸ್ವರಾಜ್ ಮತ್ತು ಪಂಚಾಯತ್ ರಾಜ್ ಕಾಯ್ದೆಯ ಎಂಟನೇ ಪ್ರಕರಣದ ಉಪ ಪ್ರಕರಣದ ಒಂದರಲ್ಲಿ ಜನಾಧಿಕಾರಕ್ಕೆ ಆದ್ಯತೆ ನೀಡಿ ಆಡಳಿತ ಮಂಡಳಿಯನ್ನು ಮುಂದುವರಿಸುವಂತೆ ತಹಸೀಲ್ದಾರ್ ಮೂಲಕ ಮುಖ್ಯಮಂತ್ರಿಗೆ ತಲುಪಿಸುವಂತೆ ಮನವಿ ಪತ್ರ ನೀಡಿದರು.