ಶ್ರೀ ಶನೇಶ್ವರ ಸ್ವಾಮಿ 
ಮೈಸೂರು

ಶ್ರೀ ಚಿಕ್ಕದೇವಮ್ಮನವರ ನೂತನ ಬಿಂಬ ಪ್ರತಿಷ್ಠಾಪನೆ

ಲೋಕೇಶ್ ಮನು. ಡಿ
ಕಪ್ಪಸೋಗೆ: 29ರಿಂದ 31ರ ವರೆಗೆ ಹುಲ್ಲಹಳ್ಳಿ ಹೋಬಳಿಯ ಕಪ್ಪಸೋಗೆ ಗ್ರಾಮದಲ್ಲಿ ಶ್ರೀ ಶನೇಶ್ವರ ಸ್ವಾಮಿ ಭಕ್ತ ಮಂಡಳಿ ಹಾಗೂ ಕಪ್ಪಸೋಗೆ ಗ್ರಾಮಸ್ಥರಿಂದ, ಶ್ರೀ ಚಿಕ್ಕದೇವಮ್ಮನವರ ನೂತನ ಬಿಂಬ ಪ್ರತಿಷ್ಠಾಪನೆ, ನೂತನ ದೇವಸ್ಥಾನ ಹಾಗೂ ವಿವಾನ ಗೋಪುರ ಕಳಸ ಸ್ಥಾಪನೆ ಕಾರ್ಯಕ್ರಮ ನೆರವೇರಲಿದೆ.
29ರಂದು ಸಂಜೆ 4 ಗಂಟೆಗೆ ಗಣಪತಿ ಪೂಜೆ, ಗಂಗೆ ಪೂಜೆ, ಆಗ್ರೋಧಕ ಸಂಗ್ರಹ, ಗೋಧೊಳಿ ಮುಹೂರ್ತದಲ್ಲಿ ಆಲಯ ಪ್ರವೇಶ ಪುಣ್ಯಾಹ, ನಾಂದಿ, ಅಂಕುರಾರ್ಪಣೆ ರಕ್ಷಾ ಪೂಜೆ,ವಿಗ್ರಹ ಸಂಸ್ಕಾರ, ಜಲ ಧಾನ್ಯ, ಶಯ್ಯೋ ದಿವಾಸ, ಅವಹಿತ ದೇವರ ಹೋಮ,ಲು ಪೂರ್ಣಾಹುತಿ ಕಾರ್ಯಕ್ರಮಗಳು ನಡೆಯಲಿವೆ.
30 ರಂದು ಬ್ರಾಹ್ಮಿ ಮುಹೂರ್ತದಲ್ಲಿ ಚಿಕ್ಕದೇವಮ್ಮನವರ ನೂತನ ಬಿಂಬ ಪ್ರತಿಷ್ಠಾಪನೆ, ನವಗ್ರಹ, ಮೃತ್ಯುಂಜಯ, ಸಪ್ತ ಸಭಾ ದೇವತಾ, ಸಪ್ತವಾತ್ರಕ್ಕೆ ಪೂಜೆ, ನೂತನ ವಿಗ್ರಹಕ್ಕೆ ಅಷ್ಟ ಬಂದ ಪ್ರಯೋಗ, ನ್ಯಾಶ ನಾಡಿ,ಸಂಧಾನ, ಪ್ರಾಣ ಪ್ರತಿಷ್ಠಾಪನೆ, ರುದ್ರ ಹೋಮ, ದುರ್ಗಾ ಹೋಮ, ಜಯಾದಿ ಹೋಮ,ಪ್ರಾಯಶ್ಚಿತ ಹೋಮ, ಪೂರ್ಣಾಹುತಿ ದೃಷ್ಟಿ ಕದಳಿ,ರಾಜೋಪಚಾರ ಪೂಜೆ, ಮಹಾಮಂಗಳಾರತಿ, ಪ್ರಸಾದ ವಿನಿಯೋಗ ನಡೆಯಲಿದೆ.
31 ರಂದು ಬೆಳಗ್ಗೆ ಶ್ರೀ ಸ್ವಾಮಿಯವರ ಹೋಮ ಉತ್ಸವ 9 ಗಂಟೆಗೆ 101 ಹೆಣ್ಣು ಮಕ್ಕಳ ಹಾಲರವಿ ಉತ್ಸವ ಹಾಗೂ ರಾತ್ರಿ 8ಕ್ಕೆ ಶ್ರೀ ಶನೇಶ್ವರ ಸ್ವಾಮಿ ಪಲ್ಲಕ್ಕಿ ಉತ್ಸವ ಹಾಗೂ ಬೆಳ್ಳಿರಥದಿಂದ ಅಲಂಕೃತಗೊಂಡ ಪಂಚ ವಾಹನ ರಥೋತ್ಸವ ನಡೆಯಲಿದೆ.
ಶ್ರೀ ಸ್ವಾಮಿಯವರನ್ನು ಬೆಳ್ಳಿ ಕಿರೀಟ ಹಾಗೂ ಒಡವೆಗಳಿಂದ ಅಲಂಕಾರ ವಾಡಿ, ಶ್ರೀ ಕೋಡಿ ಮಹದೇಶ್ವರ ಹುಲಿ ವಾಹನ, ಶ್ರೀ ಚಿಕ್ಕದೇವಮ್ಮ ದೇವರ ಕುದುರೆ ವಾಹನ ಮೆರವಣಿಗೆ. ಶ್ರೀ ಮಹದೇವ ತಾತಾ ರವರ ಫೋಟೋ ಉತ್ಸವ ಶ್ರೀ ಪಾರ್ವತಿ ದೇವಿಯವರ ಫೋಟೋ ಉತ್ಸವ ಹಾಗೂ ಶ್ರೀ ಮಹದೇಶ್ವರ ಸ್ವಾಮಿ ಬಸವಣ್ಣ ಅವರ ಮೆರವಣಿಗೆ ನಡೆಯಲಿದೆ.
ದೀಪಾಲಂಕಾರದೊಡನೆ ಶನೇಶ್ವರ ಸ್ವಾಮಿಯ ಮೆರವಣಿಗೆ ನಡೆಸಲಾಗುವುದು. ಇದೇ ಸಂದರ್ಭದಲ್ಲಿ ಲಿಂಗ ಬೀರ ಕುಣಿತ,ಕಂಸಾಳೆ, ಬ್ಯಾಂಡ್ ಸೆಟ್, ವೀರಮಕ್ಕಳ ಕುಣಿತ, ವಾದ್ಯಗೋಷ್ಠಿ, ತಮಟೆ, ನಗಾರಿಕುಣಿತ ಸೇರಿದಂತೆ ಶ್ರೀದೇವಿಯ ಸಂಕಲ್ಪದಂತೆ ಕಾರ್ಯಕ್ರಮ ನಡೆಸಲಾಗುತ್ತದೆ. ಜಾತ್ರಾ ಸಂದರ್ಭದಲ್ಲಿ ಮಧ್ಯಾಹ್ನ 12ಕ್ಕೆ ಅನ್ನ ಸಂತರ್ಪಣೆ ಏರ್ಪಡಿಸಲಾಗಿದೆ. ಫೆ. 4 ರಂದು ಬುಧವಾರ ರಾತ್ರಿ 9ಗೆ ಶನಿ ಪ್ರಭಾವ ಅಥವಾ ರಾಜ ವಿಕ್ರಮ ಎಂಬ ಸುಂದರ ಪೌರಾಣಿಕ ನಾಟಕವನ್ನು ಏರ್ಪಡಿಸಲಾಗಿದೆ ಎಂದು ಶ್ರೀ ಶನೇಶ್ವರ ಸ್ವಾಮಿ ಭಕ್ತ ಮಂಡಳಿ ಹಾಗೂ ಗ್ರಾಮಸ್ಥರು ತಿಳಿಸಿದ್ದಾರೆ.