ತಿ.ನರಸೀಪುರ ಪಟ್ಟಣದ ಹೌಸಿಂಗ್ ಬೋರ್ಡ್ ಬಡಾವಣೆ, ವಿದ್ಯಾನಗರದಲ್ಲಿರುವ ಪ್ರಜಾಪಿತ ಬ್ರಹ್ಮಾಕುಮಾರಿ ಈಶ್ವರೀಯ ವಿಶ್ವ ವಿದ್ಯಾಲಯದಲ್ಲಿ ಮಂಗಳವಾರ ಆಯೋಜಿಸಿದ್ದ ವ್ಯಸನ ಮುಕ್ತ ಸಮಾಜ ನಿರ್ಮಾಣದ ಕಾರ್ಯಕ್ರಮವನ್ನು ವೈದ್ಯ ಡಾ.ದಯಾನಂದ ಬಾಬು ಉದ್ಘಾಟಿಸಿದರು. ಡಾ.ಕಿಶೋರ್, ವೀಣಾಜೀ, ಧಾನೇಶ್ವರೀಜೀ, ಬಿ.ಕೆ.ಆರಾಧ್ಯ, ಸ್ವಾಮಿ ಇತರರು ಇದ್ದರು. 
ಮೈಸೂರು

ರಾಜಯೋಗ ಶಿಕ್ಷಣದಿಂದ ಮಾತ್ರ ವ್ಯಸನಮುಕ್ತ

ಲೋಕೇಶ್ ಮನು. ಡಿ
ತಿ.ನರಸೀಪುರ: ಪ್ರಸಕ್ತ ದಿನಗಳಲ್ಲಿ ಹಲವಾರು ಸಂಘ- ಸಂಸ್ಥೆಗಳು ದೇಶಾದ್ಯಂತ ವ್ಯಸನ ಮುಕ್ತ ಸಮಾಜವನ್ನು ನಿರ್ಮಾಣ ಮಾಡಲು ಅನೇಕ ಕಾರ್ಯಕ್ರಮ ಮಾಡುತ್ತಿವೆ. ವ್ಯಸನ ಮುಕ್ತರಾಗಲು ರಾಜಯೋಗ ಶಿಕ್ಷಣದಿಂದ ಮಾತ್ರ ಸಾಧ್ಯ ಎಂದು ಸಾರ್ವಜನಿಕ ಆಸ್ಪತ್ರೆಯ ಕೀಲು ಮತ್ತು ಮೂಳೆ ತಜ್ಞ ಡಾ.ದಯಾನಂದ ಬಾಬು ಹೇಳಿದರು.
ಪಟ್ಟಣದ ಹೌಸಿಂಗ್ ಬೋರ್ಡ್ ಬಡಾವಣೆಯ ವಿದ್ಯಾನಗರದಲ್ಲಿರುವ ಪ್ರಜಾಪಿತ ಬ್ರಹ್ಮಾಕುಮಾರಿ ಈಶ್ವರೀಯ ವಿಶ್ವ ವಿದ್ಯಾಲಯದ ಶಿವಜ್ಞಾನ ದರ್ಶನ ಭವನದಲ್ಲಿ ಮಂಗಳವಾರ ಆಯೋಜಿಸಿದ್ದ ವ್ಯಸನ ಮುಕ್ತ ಸಮಾಜ ನಿರ್ಮಾಣದ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಜಾಗತಿಕ ಕಾಲಘಟ್ಟದಲ್ಲಿ ಹೆಚ್ಚುತ್ತಿರುವ ಮಾನಸಿಕ ಒತ್ತಡ ನಿವಾರಣೆ ಮಾಡಲು ರಾಜಯೋಗ ಶಿಕ್ಷಣ ಸಹಕಾರಿ ಎಂದರು.
ಮನೋವೈದ್ಯ ಡಾ.ಕಿಶೋರ್ ಎಂ.ಆರ್.ಮಾತನಾಡಿ, ವ್ಯಸನಗಳಿಗೆ ಮೂಲ ಕಾರಣ ಮಾನಸಿಕ ಒತ್ತಡ. ಮಾನಸಿಕ ಒತ್ತಡದಿಂದ ಮುಕ್ತರಾಗಲು ಧ್ಯಾನ ಅವಶ್ಯಕ ಎಂದರು.
ಗುಂಡ್ಲುಪೇಟೆ ಸೇವಾ ಕೇಂದ್ರದ ರಾಜಯೋಗ ಪ್ರವಾಚಕಿ ರಾಜಯೋಗಿನಿ ಬ್ರಹ್ಮಾಕುಮಾರಿ ವೀಣಾಜೀ ಮಾತನಾಡಿ, ವರ್ತಮಾನ ಸಮಯದಲ್ಲಿ ನಮಗೆ ಬರುವ ಖಾಯಿಲೆಗಳಲ್ಲಿ ಶೇ.75ರಷ್ಟು ಮನೋದೈಹಿಕ ಕಾರಣಗಳಿಂದ ಬರುವಂತಹದ್ದು ಎಂದು ವೈದ್ಯರು ಮತ್ತು ಮನೋಚಿ ಕಿತ್ಸಕರು ಅಭಿಪ್ರಾಯಪಟ್ಟಿದ್ದಾರೆ ಎಂದರು.
ಮನೋಬಲ ತರಬೇತುದಾರರಾದ ರಾಜಯೋಗಿನಿ ಬ್ರಹ್ಮಾಕುಮಾರಿ ಧಾನೇಶ್ವರೀಜೀ ಮಾತನಾಡಿದರು.
ಕಾರ್ಯಕ್ರಮದಲ್ಲಿ ಪ್ರಮುಖರಾದ ಬಿ.ಕೆ.ಆರಾಧ್ಯ, ಸ್ವಾಮಿ, ಮಹೇಶ, ನಾಗಣ್ಣ, ಮಹಾಲಕ್ಷ್ಮೀ, ಪುಟ್ಟೇಗೌಡ, ನಂಜಪ್ಪ, ಜಾನಕಮ್ಮ, ಸುಬ್ಬಲಕ್ಷ್ಮೀ, ಪದ್ಮಾ, ನಾರಾಯಣ, ನಾಗಮಣಿ, ಸಂಜೀವ್, ಸಿದ್ದೇಗೌಡ, ಶಾಂಭವಿ, ಶಿವಮ್ಮ ಇತರರು ಇದ್ದರು.