ಹುಣಸೂರು ತಾಲೂಕು ಗಾವಡಗೆರೆ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ವಿದ್ಯಾರ್ಥಿನಿಯರು ಭಾಗವಹಿಸಿದ್ದರು. 
ಮೈಸೂರು

ಆರೋಗ್ಯ ಅರಿವು ಕಾರ್ಯಕ್ರಮ

ಲೋಕೇಶ್ ಮನು. ಡಿ
ಹುಣಸೂರು : ಹೆಣ್ಣುಮಕ್ಕಳು ಆರೋಗ್ಯ ಮತ್ತು ಸಾಮಾಜಿಕ ಪಿಡುಗುಗಳ ವಿರುದ್ಧ ದನಿ ಎತ್ತಿದಲ್ಲಿ ಸಾಕಷ್ಟು ಸಮಸ್ಯೆಗಳಿಗೆ ಪರಿಹಾರ ಸಿಗಲಿದೆ ಎಂದು ಹಿರಿಯ ಆರೋಗ್ಯ ನಿರೀಕ್ಷಣಾಧಿಕಾರಿ ಹನುಮಂತು ಅಭಿಪ್ರಾಯಪಟ್ಟರು.
ತಾಲೂಕಿನ ಗಾವಡಗೆರೆ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಮಂಗಳವಾರ ರಾಷ್ಟ್ರೀಯ ಹೆಣ್ಣು ಮಕ್ಕಳ ದಿನಾಚರಣೆ ಅಂಗವಾಗಿ ಆಯೋಜಿಸಿದ್ದ ಆರೋಗ್ಯ ಅರಿವು ಕಾರ್ಯಕ್ರಮದಲ್ಲಿ ಮಾತನಾಡಿದರು.
ಹೆಣ್ಣುಮಕ್ಕಳು ವೈಯಕ್ತಿಕ ಸ್ವಚ್ಛತೆಗೆ ಆದ್ಯತೆ ನೀಡಬೇಕು. ಮಾನಸಿಕ ಮತ್ತು ದೈಹಿಕ ಬದಲಾವಣೆಗಳ ಕುರಿತು ವೈದ್ಯರಲ್ಲಿ ಸಂಕೋಚಬಿಟ್ಟು ಮಾಹಿತಿ ಪಡೆಯಬೇಕು. ನಿಮ್ಮ ಸುತ್ತಮುತ್ತ ನಡೆಯುವ ಬಾಲ್ಯವಿವಾಹ, ಭ್ರೂಣಲಿಂಗ ಪತ್ತೆ ಮುಂತಾದ ಸಾಮಾಜಿಕ ಅನಿಷ್ಠ ಕಾರ್ಯಗಳ ಕುರಿತು ಮಾಹಿತಿ ನೀಡಲು ಮುಂದಾಗಬೇಕು. ಎಲ್ಲರಿಗೂ ಸಮನಾಗಿ ಬಾಳುವ ಹಕ್ಕು ಇದ್ದು, ಹೆಣ್ಣುಮಕ್ಕಳು ಎದೆಗುಂದದೇ ಮುನ್ನಡೆಯಬೇಕು ಎಂದರು.\
ಇದೇ ವೇಳೆ ಸಾಂಕ್ರಾಮಿಕ ರೋಗಗಳಾದ ಡೆಂಘೆ, ಚಿಕೂನ್ ಗುನ್ಯಾ, ಕುಷ್ಟರೋಗ, ಕ್ಷಯ ರೋಗ ನಿಯಂತ್ರಣಗಳ ಕುರಿತು ಮಾಹಿತಿ ನೀಡಿದರು. ಕಾರ್ಯಕ್ರಮದಲ್ಲಿ ಪ್ರಾಂಶುಪಾಲ ಜನಾರ್ಧನ್, ಆರೋಗ್ಯ ಇಲಾಖೆಯ ಇಂದಿರಾ, ಶ್ರೀನಿವಾಸ್, ವಿದ್ಯಾರ್ಥಿನಿಯರು ಇದ್ದರು.